ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಕಳೆದ ಸುಮಾರು ವರ್ಷಗಳಿಂದ ಸುಜುಕಿ ಮೋಟಾರ್‍‍ಸೈಕಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಅಧಿಕ ಸಾಮರ್ಥ್ಯವನ್ನು ಹೊಂದಿರುವ ಬೈಕ್ ಅನ್ನು ಬಿಡುಗಡೆಗೊಳಿಸುವ ಆಲೋಚನೆಯಲಿದ್ದು, ಕೊನೆಗೆ ಸಂಸ್ಥೆಯು ಮೇ 20, 2019ರಂದು ತಮ್ಮ ಜಿಕ್ಸರ್ 250 ಪರ್ಫಾರ್‍ಮೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಈ ಹಿಂದೆ ತಮ್ಮ ಜಿಕ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿ 150ಸಿಸಿ ಬೈಕ್‍ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಆದ್ರೆ ತದನಂತರ ಸುಜುಕಿ ಸಂಸ್ಥೆಯು ಯಾವುದೇ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಅನ್ನು ಬಿಡುಗಡೆಗೊಳಿಸಿರಲಿಲ್ಲ. ಇದೀಗ ಬಂದ ಮಾಹಿತಿಗಳ ಪ್ರಕಾರ ಜಿಕ್ಸರ್ 250 ಕೂಡಾ ಬಿಡುಗಡೆಯ ಪಟ್ಟಿಯಲ್ಲಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಬೈಕ್ ಉತ್ಪನ್ನವನ್ನು ಬಿಡುಗಡೆಗೊಳಿಸುವ ಸುಳಿವು ನೀಡಿತ್ತು, ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಜಿಕ್ಸರ್ ಸರಣಿಯ ಹೊಸ ಮಾದರಿಯನ್ನು ಹೊರತರುತ್ತಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಕೆಟಿಎಂ 250 ಡ್ಯೂಕ್‌ಗೆ ಪ್ರತಿಸ್ಪರ್ಧಿಯಾಗಿ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲು ಮುಂದಾಗಿರುವ ಸುಜುಕಿ ಸಂಸ್ಥೆಯು ಮುಂದಿನ ತಿಂಗಳು 20ರಂದು ಹೊಸ ಬೈಕ್ ಅನಾವರಣಗೊಳಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೇಕೆಡ್ ವರ್ಷನ್ ಮತ್ತು ಫೈರ್ಡ್ ವರ್ಷನ್ ಎರಡು ಮಾದರಿಯಲ್ಲೂ ಹೊಸ ಜಿಕ್ಸರ್ 250 ಖರೀದಿಗೆ ಲಭ್ಯವಾಗಲಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಹೊಸ ಸುಜುಕಿ ಜಿಕ್ಸರ್ 250 ಬೈಕ್ ಜಿಎಸ್‍ಎಕ್ಸ್-ಎಸ್750 ಮತ್ತು ಜಿಎಸ್‍ಎಕ್ಸ್-ಎಸ್750 ಬೈಕ್‍‍ಗಳ ವಿನ್ಯಾಸವನ್ನು ಆಧರಿಸಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಸುಜುಕಿ ಜಿಕ್ಸರ್ 250ಬೈಕ್ 250ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 22ರಿಂದ 25ಬಿಹೆಚ್‍‍ಪಿ ಉತ್ಪಾದನಾ ಶಕ್ತಿಯನ್ನು ಪಡೆದಿದ್ದು, ಹೊಸ ಬೈಕ್ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಬಹುದಾಗಿದೆ ಎನ್ನಲಾಗಿದೆ. ಮತ್ತು ಈ ಬೈಕ್ ಸುಜುಕಿ ಸಂಸ್ಥೆಯ ಎಂಟ್ರಿ ಲೆವೆಲ್ ಟೂರಿಂಗ್ ಮೋಟಾರ್‍‍ಸೈಕಲ್ ಕೂಡಾ ಆಗಿರಬಹುದು ಎನ್ನಲಾಗಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಜಿಕ್ಸರ್ 150 ಯಂತೆಯೇ ಅದೇ ಚೌಕಟ್ಟಿನಲ್ಲಿ ಸುಜುಕಿ ಜಿಕ್ಸರ್ 250 ಅನ್ನು ಪುನರ್‍‍ನಿರ್ಮಾಣ ಮಾಡಬಹುದಾಗಿದೆ. ಆದರೆ ದೊಡ್ಡ 250 ಸಿಸಿ ಎಂಜಿನ್‍‍ಗೆ ಸರಿಹೊಂದಿಸಲು ಸುಜುಕಿ ಫ್ರೇಮ್ ಅನ್ನು ಬಲಪಡಿಸಬೇಕಾಗುತ್ತದೆ. ಮೋಟಾರ್‍‍‍ಸೈಕಲ್ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆಷನ್ ಹೊಂದಿರಲಿದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಹಾಗೆಯೇ ಸುಜುಕಿ ಜಿಕ್ಸರ್ 250 ಬೈಕ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ , ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿರಬಹುದಾಗಿದೆ. ಆದರೆ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಗೆ ಇದನ್ನು ಮಾರಾಟಮಾಡಬೇಕಾದರೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಬೇಕಾಗುತ್ತದೆ.

ಮೇ 20ರಂದು ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಕ್ಸರ್ 250 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯ ಜಿಕ್ಸರ್ 150 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪದೆದಿದ್ದು, ಸಂಸ್ಥೆಯು ಇದೀಗ ಜಿಕ್ಸರ್ 250 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಸುಜುಕಿ ಜಿಕ್ಸರ್ ಬೈಕಿನ ಬೆಲೆಯು ಸುಮಾರು ರೂ. 1.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಯಮಹಾ ಎಫ್‍‍ಜೆಡ್25 ಮತ್ತು ಕೆಟಿಎಂ 250 ಡ್ಯೂಕ್ ಬೈಕ್‍‍ಗೆ ತೀವ್ರ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, May 1, 2019, 8:30 [IST]
English summary
Suzuki Motorcycles To Launch New Gixxer 250 On May 20th. Read In Kannada
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+