ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್ ಸೈಕಲ್, ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಆಯ್ದ ಶ್ರೇಣಿಯ ಮಾದರಿಗಳ ಮೇಲೆ ಆಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ಕಂಪನಿಯು ಹಬ್ಬದ ಕೊಡುಗೆಯಾಗಿ ಬಿಡಿಭಾಗಗಳು ಮತ್ತು ರೂ.2.8 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ದೀಪಾವಳಿ ಹಬ್ಬದ ಪ್ರಯುಕ್ತ ಲಭ್ಯವಿರುವ ವಾರಂಟಿಯನ್ನು ಹೆಚ್ಚಿಸಿದೆ. ಹಬ್ಬದ ಪ್ರಯುಕ್ತ ಕೆಲವು ಆಯ್ದ ಬೈಕ್‍‍ಗಳಿಗೆ ಮಾತ್ರ ಆಫರ್‍‍ಗಳನ್ನು ಘೋಷಿಸಿದೆ. ಅವು‍ಗಳಲ್ಲಿ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ , ಟೈಗರ್ 800 ಎಕ್ಸ್ಆರ್, ಟೈಗರ್ 1200 ಮತ್ತು ಬೊನ್ನೆವಿಲ್ಲೆ ಟಿ 100 ಬೈಕ್‍‍ಗಳಾಗಿವೆ. ಆಫರ್ ಸೀಮಿತ ಅವಧಿಯವರೆಗೂ ಮಾತ್ರ ಲಭ್ಯವಿದೆ ಮತ್ತು ನಗದು ರಿಯಾಯಿತಿಗಾಗಿ ಕೊಡುಗೆಗಳನ್ನು ವಿನಿಮಯ ಮಾಡಲಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಗ್ರಾಹಕರು ದೇಶಾದ್ಯಂತವಿರುವ ಟ್ರಯಂಫ್ ಡೀಲರ್‍‍ಗಳ ಬಳಿ ಹಬ್ಬದ ಆಫರ್ ಅನ್ನು ಪಡೆಯಬಹುದು. ಅಕ್ಟೋಬರ್ 27ರವರೆಗೆ ಈ ವಿಶೇಷ ಆಫರ್ ಅನ್ನು ಪಡೆಯಬಹುದು. ಟ್ರಯಂಫ್ ಬೈಕ್‍ಗಳ ವಿಶೇಷ ಆಫರ್‍‍ಗಳ ಮಾಹಿತಿಗಳು ಇಲ್ಲಿವೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಸ್ಟ್ರೀಟ್ ಟ್ರಿಪಲ್ ಆರ್‍ಎಸ್

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ರೂ.1.59 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಗ್ರಾಹಕರು ಎರಡು ಆಯ್ಕೆಗಳ ಆಫರ್ ಅನ್ನು ಹೊಂದಿದ್ದು, ಅದರಲ್ಲಿ ಆ್ಯರೊ ಸೈಲೆನ್ಸರ್‍‍ಗೆ ರೂ.59,000 ಮತ್ತು ಅಪ್‍ಗ್ರೇ‍ಡ್ ಬೋನಸ್ ರೂ.70,000 ಅಥವಾ ಆ್ಯರೊ ಸೈಲೆನ್ಸರ್‍‍ಗೆ 1 ಲಕ್ಷ ಮೌಲ್ಯದ ವಾಚರ್ ಆಗಿದೆ. ಈ ಬೈಕ್ 765 ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಮೂರು ಸಿಲಿಂಡೆರ್ ಎಂಜಿನ್ 111.5 ಬಿ‍ಎಚ್‍ಪಿ ಪವರ್ ಮತ್ತು 73 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುಸುತ್ತದೆ. ಎಂಜಿ‍‍ನ್‍‍ಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಟೈಗರ್ 800 ಎಕ್ಸ್‌ಆರ್

ಟ್ರಯಂಫ್ ಟೈಗರ್ 800 ಎಕ್ಸ್‌ಆರ್ ಬೈಕಿಗೆ ರೂ.2.8 ಲಕ್ಷದವರೆಗೆ ಆಫರ್ ಅನ್ನು ಘೋಷಿಸಿದೆ. ಇದರಲ್ಲಿ ರೂ.1 ಲಕ್ಷ ಮೌಲ್ಯದ ಪನ್ನಿಯರ್ ಸೆಟ್, ಎರಡು ವರ್ಷದ ವಾರಂಟಿ ಮತ್ತು 1.5 ಲಕ್ಷ ಮೌಲ್ಯದ ವಾಚರ್ ಅನ್ನು ಹೊಂದಿದೆ. ಈ ಬೈಕ್ 800 ಸಿಸಿ ಲಿಕ್ವಿಡ್ ಕೂಲ್ಡ್, ಇನ್ ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 94 ಬಿಎಚ್‍ಪಿ ಮತ್ತು 79 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಟೈಗರ್ 1200

ಹಬ್ಬದ ಪ್ರಯುಕ್ತ ಟ್ರಯಂಫ್ ಟೈಗರ್ 1200 ಅಡ್ವೆಂಚೆರ್ ಟೂರರ್ ಬೈಕಿಗೆ ವಿಶಿಷ್ಟವಾದ ಕೊಡುಗೆಯನ್ನು ನೀಡಲಾಗಿದೆ. ಆಫರ್ ಸಮಯದಲ್ಲಿ ಬೈಕ್ ಖರೀದಿಸುವವರು ಯುಕೆ ವಾಲ್ಸ್ ನಲ್ಲಿರುವ ಬೈಕ್ ತಯಾರಕ ಟ್ರಯಂಫ್ ಅಡ್ವೆಂಚರ್ ಕೇಂದ್ರದಲ್ಲಿ ತರಬೇತಿ ಪಡೆಯಬಹುದು. ಈ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಅಂತರರಾಷ್ಟ್ರೀಯ ತರಬೇತಿದಾರರು ತಮ್ಮ ಮೋಟರ್ ಸೈಕ್ಲಿಂಗ್ ಕೌಶಲ್ಯದ ತರಬೇತಿ ನೀಡುತ್ತಾರೆ. ಗ್ರಾಹಕರನ್ನು ಹಿಂಕ್ಲಿಯ ಟ್ರಯಂಫ್ ಘಟಕದ ಸುತ್ತಲೂ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಈ ಬೈಕ್ 1200 ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಮೂರು ಸಿಲಿಂಡರ್ ಎಂಜಿನ್ 139 ಬಿಎಚ್‍ಪಿ ಪವರ್ ಮತ್ತು 122 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಟ್ಯಾಂಡರ್ಡ್6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಬೊನ್ನೆವಿಲ್ಲೆ ಟಿ 100

ಹಬ್ಬದ ಪ್ರಯುಕ್ತ 1.75 ಲಕ್ಷಗಳವರೆಗೆ ಈ ಬೈಕಿಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಹಬ್ಬಕ್ಕೆ ಬೊನ್ನೆವಿಲ್ಲೆ ಟಿ 100 ಬೈಕಿಗೆ ಮೂರು ರೀತಿಯ ಕೊಡುಗೆಗಳನ್ನು ಘೋಷಿಸಿದ್ದಾರೆ. ಅವುಗಳು ಐದು ವರ್ಷಗಳವರೆಗೆ ಶೂನ್ಯ ಶೇಕಡಾ ಬಡ್ಡಿಗೆ ರೂ.11,608 ಇಎಂಐ ಯೋಜನೆ, ರೂ.1.5 ಲಕ್ಷಗಳ ವಿನಿಮಯ ಸಬ್‌ವೆನ್ಷನ್ ಮತ್ತು ರೂ.1.75 ಲಕ್ಷದ ವಾಚರ್‍ ಒಳಗೊಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ಬೊನ್ನೆವಿಲ್ಲೆ ಟಿ 100 ಬೈಕ್ 900 ಸಿಸಿ ಲಿಕ್ವಿಡ್-ಕೂಲ್ಡ್ ಪ್ಯಾರ್‍‍ಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 54.3 ಬಿಎಚ್‍ಪಿ ಪವರ್ ಮತ್ತು 76.73 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟ್ರಯಂಫ್ ಬೈಕ್‍‍ಗಳ ಮೇಲೆ ಭರ್ಜರಿ ಆಫರ್

ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಅನ್ನು ಘೋಷಿಸಿ ತಮ್ಮ ಬೈಕ್‍‍ಗಳ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ ಕಂಪನಿಯ ಎಂಟ್ರಿ ಲೆವೆಲ್ ಬೈಕ್‍‍ಗಳು ಈ ಆಫರ್‍ ಒಳಗೊಂಡಿಲ್ಲ. ವಾಹನ ಮಾರಾಟದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಎಲ್ಲಾ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟ್ರಯಂಫ್ ಕಂಪನಿಯು ಬಿಎಸ್-6 ಎಂಜಿನ್ ಬೈಕ್‍ಗಳನ್ನು ಬಿಡುಗಡೆಗೊಳಿಸಲಿದೆ.

More from DriveSpark

Article Published On: Saturday, October 19, 2019, 17:28 [IST]
English summary
Triumph Diwali Discount Offers: Festive Benefits Available On Select Models - Read in Kannnada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+