ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಇತ್ತೀಚಿಗೆ ಸೋರಿಕೆಯಾದ 2020ರ ಹೊಸ ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕಿನ ಚಿತ್ರಗಳು ಈ ಬೈಕ್ ಹೇಗಿರಲಿದೆ ಎಂಬುದನ್ನು ತೋರಿಸಿದ್ದವು. ಈಗ ಈ ನೇಕೆಡ್ ಬೈಕ್ ಟಿವಿ‍ಎಸ್ ಸ್ಮಾರ್ಟ್ ಎಕ್ಸ್ ಕನೆಕ್ಟ್ ಟೆಕ್ನಾಲಜಿ ಹೊಂದಿರುವುದು ಕಂಡು ಬಂದಿದೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಈ ಟೆಕ್ನಾಲಜಿಯಿಂದಾಗಿ ಈ ಬೈಕ್ ಅನ್ನು ಟಿವಿ‍ಎಸ್ ಕನೆಕ್ಟಿವಿಟಿ ಆಪ್ ಮೂಲಕ ಸ್ಮಾರ್ಟ್ ಫೋನಿಗೆ ಸಿಂಕ್ ಮಾಡಬಹುದಾಗಿದೆ. ಇತ್ತೀಚಿಗೆ ಈ ಫೀಚರ್ ಹೊಂದಿದ್ದ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಅಪಾಚೆ ಆರ್‍‍ಟಿ‍ಆರ್ 200 ಈ ಫೀಚರ್ ಹೊಂದಿರುವ ಟಿವಿ‍ಎಸ್ ಕಂಪನಿಯ ಮೂರನೇ ವಾಹನವಾಗಿದೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಟಿವಿ‍ಎಸ್ ಎನ್‍‍ಟಾರ್ಕ್ 125ನಲ್ಲಿರುವಂತೆ ಹೊಸ ಅಪಾಚೆ ಬೈಕ್ ಸಹ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಹೊಂದಿರಲಿದೆ. ಇದರ ಜೊತೆಗೆ ಕಾಲರ್ ಐಡಿ, ಎಸ್‍‍ಎಂ‍ಎಸ್ ನೋಟಿಫಿಕೇಷನ್, ಲಾಸ್ಟ್ ಪಾರ್ಕ್ ಲೋಕೆಷನ್ ಹಾಗೂ ಚಾಲನೆಯ ಮಾಹಿತಿಗಳನ್ನು ನೀಡಲಾಗುತ್ತದೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಇವುಗಳ ಹೊರತಾಗಿ ಹೊಸ ಅಪಾಚೆ ಬೈಕ್, ಲೀನ್ ಆಂಗಲ್, ಜಿ ಫೋರ್ಸ್, ಗೇರ್ ಡಿಸ್ಟ್ರಿಬ್ಯೂಷನ್ ಹಾಗೂ ಟೂರ್ ಮೋಡ್‍‍ಗಳಂತಹ ಫೀಚರ್‍‍ಗಳನ್ನು ಹೊಂದಿದೆ. ಲೇನ್ ಆಂಗಲ್ ಹಾಗೂ ಜಿ ಫೋರ್ಸ್‍‍ಗಳ ಮಾಪನಕ್ಕಾಗಿ ಇನ್‍‍ಹರ್ಶಿಯಲ್ ಮೆಶರ್‍‍ಮೆಂಟ್ ಯುನಿಟ್‍ (ಐ‍ಎಂ‍‍ಯು)ಗಳಿವೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಟಿವಿ‍ಎಸ್ ಕಂಪನಿಯು ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕಿನಲ್ಲಿ ಡೇಟಾ ಮಾಪನ ಮಾಡಲು ಹಾಗೂ ಸ್ಮಾರ್ಟ್‍‍ಫೋನಿಗೆ ಮಾಹಿತಿಯನ್ನು ಕಳುಹಿಸಲು ಸರಳವಾದ ಐ‍ಎಂ‍‍ಯುವನ್ನು ಅಳವಡಿಸುವ ಸಾಧ್ಯತೆಗಳಿವೆ. ಈ ಐ‍ಎಂಯುವನ್ನು ಬೈಕಿನ ಬ್ರೇಕ್‍‍ನಲ್ಲಾಗಲಿ ಅಥವಾ ಎಂಜಿನಿನಲ್ಲಾಗಲಿ ಅಳವಡಿಸುವ ಸಾಧ್ಯತೆಗಳಿಲ್ಲ. ಆದ ಕಾರಣ ಈ ಯುನಿಟ್ ದುಬಾರಿಯಾಗುವ ಸಾಧ್ಯತೆಗಳಿವೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಗೇರ್ ಡಿಸ್ಟ್ರಿಬ್ಯೂಷನ್ ಫೀಚರ್, ಬೈಕ್ ಚಾಲನೆ ಮಾಡುವಾಗ ಬೈಕಿನ ಗೇರ್ ಬದಲಾವಣೆಯ ವಿಧಾನವನ್ನು ತೋರಿಸಲಿದೆ. ಟೂರ್ ಮೋಡ್, ಬೈಕಿನ ಸರಾಸರಿ ವೇಗ, ಬೈಕ್ ಎಷ್ಟು ದೂರ ಕ್ರಮಿಸಿದೆ, ಎಷ್ಟು ಗಂಟೆಯಲ್ಲಿ ದೂರವನ್ನು ಕ್ರಮಿಸಿದೆ ಮುಂತಾದ ಮಾಹಿತಿಯನ್ನು ನೀಡಲಿದೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಈ ಬೈಕ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಬಿ‍ಎಸ್6 ಎಂಜಿನ್ ಹೊಂದಿರಲಿದೆ. ಈ ಎಂಜಿನ್‍‍ನ ಪವರ್ ಉತ್ಪಾದನೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ. ಸದ್ಯ ಇರುವ ಸಿಂಗಲ್ ಸಿಲಿಂಡರಿನ ಏರ್ ಕೂಲ್ಡ್ ಕಾರ್ಬ್ಯುರೆಟೆಡ್ 197.75 ಸಿಸಿಯ ಎಂಜಿನ್ 8500 ಆರ್‍‍ಪಿ‍ಎಂನಲ್ಲಿ 20.21 ಬಿ‍‍ಹೆಚ್‍‍ಪಿ ಪವರ್ ಹಾಗೂ 7000 ಆರ್‍‍ಪಿ‍ಎಂನಲ್ಲಿ 18.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

5 ಸ್ಪೀಡಿನ ಟ್ರಾನ್ಸ್ಮಿಷನ್ ಮೂಲಕ ವ್ಹೀಲ್‍ಗಳಿಗೆ ಪವರ್ ದೊರೆಯುತ್ತದೆ. ಸಸ್ಪೆಂಷನ್‍‍ಗಳಿಗಾಗಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಕೆವೈಬಿ ಟ್ಯೂನ್ಡ್ ಮೊನೊಶಾಕ್‍‍ಗಳಿವೆ. ಬೈಕಿನ ಎರಡೂ ತುದಿಗಳಲ್ಲಿ ಪೆಟಲ್ ಡಿಸ್ಕ್ ಬ್ರೇಕ್‌ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಈ ಬೈಕಿನ ಬೆಲೆಯು ಕಾರ್ಬ್ ಎಬಿಎಸ್ ಮಾದರಿಯ ಬೈಕಿಗಿಂತ ಸುಮಾರು ರೂ.12,000 ಹೆಚ್ಚಾಗುವ ಸಾಧ್ಯತೆಯಿದೆ. ಕಾರ್ಬ್ ಎಬಿ‍ಎಸ್ ಬೈಕಿನ ಬೆಲೆಯು ಸದ್ಯಕ್ಕೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.11 ಲಕ್ಷಗಳಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಸ್ಟಾಕ್‌ ಇರುವವರೆಗೂ ಎಫ್‌ಐ ಮಾದರಿಯ ಬೈಕುಗಳನ್ನೂ ಸಹ ಮಾರಾಟ ಮಾಡಲಾಗುವುದು. ಆದರೆ ಎಫ್‍ಐ ಮಾದರಿಯ ಬೈಕ್ ಎ‍‍ಬಿ‍ಎಸ್ ಹೊಂದಿಲ್ಲ. ಆದ ಕಾರಣ ಟಿವಿಎಸ್ ಕಂಪನಿಯು, ಕಾರ್ಬ್ ಮಾದರಿಯನ್ನು ಎಫ್‌ಐ ಹಾಗೂ ಇನ್ನಿತರ ಫೀಚರ್‍‍ಗಳೊಂದಿಗೆ ಅಪ್‍‍ಡೇಟ್‍‍ಗೊಳಿಸಿ 2020ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರಲಿದೆ ಹೊಸ ಅಪಾಚೆ ಆರ್‍‍ಟಿ‍ಆರ್ 200

ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕ್ ಅನ್ನು ಮುಂದಿನ ವರ್ಷ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗುವುದು. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಬೈಕ್ ಬಿ‍ಎಸ್6 ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿರುವ ಬಜಾಜ್ ಪಲ್ಸರ್ 200 ಎನ್‍ಎಸ್ ಬೈಕಿಗೆ ಪೈಪೋಟಿ ನೀಡಲಿದೆ.

Source: Bikedekho

Most Read Articles

Kannada
English summary
2020 TVS Apache RTR 200 4V To Get Bluetooth Connectivity - Read in kannada
Story first published: Tuesday, September 17, 2019, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X