ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಮುಖೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ. ಅವರ ಮನೆಯಲ್ಲಿ ಕಾರುಗಳ ಗ್ಯಾರೇಜ್ ಇದೆ. ಈ ಗ್ಯಾರೇಜಿನಲ್ಲಿ ದುಬಾರಿ ಬೆಲೆಯ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲಿನನ್, ಲ್ಯಾಂಬೊರ್ಗಿನಿ ಉರುಸ್, ಬೆಂಟ್ಲಿ ಬೆಂಟಾಯ್ಗ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಇದರ ಜೊತೆಗೆ ಅಂಬಾನಿಯವರು ಟೆಸ್ಲಾ ಎಸ್ 100 ಡಿ ಕಾರ್ ಅನ್ನು ಸಹ ಹೊಂದಿದ್ದಾರೆ. ಆದರೆ ಅಂಬಾನಿಯವರ ಬಳಿಯಿರುವ ಈ ಟೆಸ್ಲಾ ಕಾರು ಸೆಕೆಂಡ್ ಹ್ಯಾಂಡ್ ಕಾರ್ ಆಗಿದೆ. ಭಾರತದ ಅತಿ ಶ್ರೀಮಂತ ವ್ಯಕ್ತಿಯ ಬಳಿ ಸೆಕೆಂಡ್ ಹ್ಯಾಂಡ್ ಕಾರು ಇರಲು ಹೇಗೆ ಸಾಧ್ಯ ಎನ್ನುವ ಅನುಮಾನವಿದ್ದರೆ ಈ ಸ್ಟೋರಿ ಓದಿ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಈ ಕಾರಿನ ಚಿತ್ರವನ್ನು ನಿರ್ಮಿತ್ ಪಾಟೀಲ್ ಎಂಬುವವರು ಇತ್ತೀಚಿಗೆ ಮುಂಬೈನಲ್ಲಿ ಸೆರೆಹಿಡಿದಿದ್ದಾರೆ. ಈ ಕಾರಿನಲ್ಲಿರುವ ನಂಬರ್ ಪ್ಲೇಟ್ ಆಧಾರದ ಮೇಲೆ ಈ ಕಾರಿನ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದಾಗ ಟೆಸ್ಲಾ ಎಸ್ 100ಡಿ ಮಾದರಿಯ ಈ ಕಾರನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರಿನಲ್ಲಿ ರಿಜಿಸ್ಟರ್ ಮಾಡಿರುವುದು ಕಂಡು ಬಂದಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಇದರ ಜೊತೆಗೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈ ಕಾರಿನ ಎರಡನೇ ಮಾಲೀಕರು ಎಂಬುದಾಗಿ ತೋರಿಸುತ್ತಿದೆ. ಅಂಬಾನಿ ಈ ಕಾರಿನ ಎರಡನೇ ಮಾಲೀಕರಾಗಲು ಹೇಗೆ ಸಾಧ್ಯ? ಈ ಕಾರ್ ಅನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಕಾರ್ ಅನ್ನು ಭಾರತದಲ್ಲಿ ಮಾರಾಟ ಮಾಡುವ ಮೊದಲು ಈ ಕಾರ್ ಅನ್ನು ಆಮದು ಮಾಡಿಕೊಳ್ಳುವವರ ಹೆಸರಿಗೆ ರಿಜಿಸ್ಟರ್ ಮಾಡಲಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ನೀವು ಯಾವುದಾದರೂ ವಾಹನವನ್ನು ವಿದೇಶದಿಂದ ಆಮದು ಮಾಡಿಕೊಂಡರೆ, ದಾಖಲೆಗಳನ್ನು ಸಿದ್ದಪಡಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ನಂತರ ನಿಮ್ಮ ಹೆಸರಿನಲ್ಲಿ ವಾಹನದ ರಿಜಿಸ್ಟರ್ ಆಗುತ್ತದೆ. ಈ ಪ್ರಕ್ರಿಯೆಗೆ ಬಹಳಷ್ಟು ಸಮಯ ತೆಗೆದುಕೊಂಡರೂ, ಹಣದ ಉಳಿತಾಯವಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಆದರೆ ಅತಿ ಶ್ರೀಮಂತರು ಹಾಗೂ ಗಣ್ಯ ವ್ಯಕ್ತಿಗಳು ಈ ನಿಧಾನಗತಿಯ ಪ್ರಕ್ರಿಯೆಗೆ ತಯಾರಿರುವುದಿಲ್ಲ. ಆದ ಕಾರಣ ಕಾರ್ ಅನ್ನು ಆಮದು ಮಾಡಿಕೊಳ್ಳುವವರ ಮೂಲಕ ಕಾರ್ ಅನ್ನು ವಿದೇಶದಿಂದ ತರಿಸುತ್ತಾರೆ. ಕಾರುಗಳನ್ನು ಆಮದು ಮಾಡಿಕೊಳ್ಳುವವರು ತಮ್ಮ ಹೆಸರಿನಲ್ಲಿ ಈ ಕಾರುಗಳನ್ನು ರಿಜಿಸ್ಟರ್ ಮಾಡಿಸಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಇದಕ್ಕಾಗಿ ಪ್ರತ್ಯೇಕವಾದ ಶುಲ್ಕವನ್ನು ವಿಧಿಸುತ್ತಾರೆ. ವಿದೇಶದಿಂದ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಳ್ಳುವ ಮತ್ತೊಂದು ವಿಧಾನವೆಂದರೆ, ಈ ಕಾರುಗಳನ್ನು ಆಮದು ಮಾಡಿಕೊಳ್ಳುವ ಕಂಪನಿಯ ಹೆಸರಿನಲ್ಲಿ ಕಾರ್ ಅನ್ನು ರಿಜಿಸ್ಟರ್ ಮಾಡಿಸುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಇದರಿಂದ ಈ ಕಾರುಗಳು ಮೊದಲಿಗೆ ಆಮದು ಮಾಡಿಕೊಳ್ಳುವ ಕಂಪನಿಯ ಹೆಸರಿಗೆ ರಿಜಿಸ್ಟರ್ ಆಗುತ್ತವೆ. ನಂತರ ಈ ಕಾರುಗಳನ್ನು ಖರೀದಿಸುವ ಮಾಲೀಕರ ಹೆಸರಿಗೆ ರಿಜಿಸ್ಟರ್ ಮಾಡಲಾಗುತ್ತದೆ. ಈ ವಿಧಾನದಲ್ಲಿಯೇ ಭಾರತಕ್ಕೆ ಆಮದಾಗುವ ಬಹುತೇಕ ಕಾರುಗಳನ್ನು ರಿಜಿಸ್ಟರ್ ಮಾಡಿಸಲಾಗುತ್ತಿದೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಮೆಕ್‍‍ಲಾರೆನ್ ನಂತಹ ಕಾರುಗಳನ್ನು ಸಹ ಇದೇ ರೀತಿಯಲ್ಲಿಯೇ ಆಮದು ಮಾಡಿಕೊಳ್ಳಲಾಗುತ್ತಿದೆ. ಆರ್‍‍ಸಿ ಬುಕ್ ದಾಖಲೆಗಳ ಪ್ರಕಾರ ನಿಜವಾದ ಮಾಲೀಕರು ಸೆಕೆಂಡ್ ಹ್ಯಾಂಡ್ ಮಾಲೀಕರಾಗಿರುತ್ತಾರೆ. ದುಬಾರಿಯಲ್ಲದ ಕಾರುಗಳನ್ನು ಖರೀದಿಸುವ ಗ್ರಾಹಕರು ಸೆಕೆಂಡ್ ಹ್ಯಾಂಡ್ ಕಾರು ಎಂದು ಖರೀದಿಸಲು ಹಿಂದೇಟು ಹಾಕುತ್ತಾರೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಆದರೆ ಐಷಾರಾಮಿ ಕಾರುಗಳನ್ನು ಹೊಂದುವವರು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಈ ಕಾರಿನ ಬಗ್ಗೆ ಹೇಳುವುದಾದರೆ, ಟೆಸ್ಲಾ ಮಾಡೆಲ್ ಎಸ್ 100 ಡಿ ಅತ್ಯಂತ ಬಲಶಾಲಿಯಾದ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 417 ಬಿ‍‍ಹೆಚ್‍‍ಪಿ ಪವರ್ ಹಾಗೂ 660 ಎನ್‌ಎಂ ಟಾರ್ಕ್ ಉತ್ಪಾದಿಸುತ್ತವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಈ ಎಲೆಕ್ಟ್ರಿಕ್ ಮೋಟರ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಪವರ್ ಕಳುಹಿಸುತ್ತದೆ. ಈ ಕಾರು ಕೇವಲ 4.3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಟೆಸ್ಲಾ ಎಸ್ 100ಡಿ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 250 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಈ ಕಾರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ 495 ಕಿ.ಮೀ ಚಲಿಸಬಹುದು. ಈ ಕಾರಿನಲ್ಲಿರುವ ಬ್ಯಾಟರಿಯು 100 ಕಿ.ವ್ಯಾಟಿನ ಬ್ಯಾಟರಿಯಾಗಿದೆ. ಈ ಬ್ಯಾಟರಿಯ ಜೊತೆಗೆ ಫಾಸ್ಟ್ ಚಾರ್ಜರ್ ನೀಡಲಾಗುವುದು. ಈ ಚಾರ್ಜರ್‍‍ನಿಂದ ಕೇವಲ 42 ನಿಮಿಷಗಳಲ್ಲಿ 396 ಕಿ.ಮೀ ದೂರ ಚಲಿಸುವಷ್ಟು ಚಾರ್ಜ್ ಮಾಡಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಅಮೇರಿಕಾದಲ್ಲಿ ಈ ಕಾರಿನ ಬೆಲೆಯು 99,990 ಡಾಲರ್‍‍ಗಳಾಗಿದೆ. ಅಂದರೆ ಭಾರತದ ರೂಪಾಯಿಯಲ್ಲಿ ರೂ.73 ಲಕ್ಷಗಳಾಗುತ್ತದೆ. ಭಾರತದಲ್ಲಿ ಯಾವುದೇ ವಾಹನವನ್ನು ವಿದೇಶದಿಂದ ಆಮದು ಮಾಡಿಕೊಂಡರೆ 100% ಕ್ಕಿಂತ ಹೆಚ್ಚು ಆಮದು ತೆರಿಗೆಯನ್ನು ಪಾವತಿಸ ಬೇಕಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಆದ ಕಾರಣ ಈ ಕಾರಿನ ಬೆಲೆಯು ಭಾರತದಲ್ಲಿ ಸುಮಾರು ರೂ.1.5 ಕೋಟಿಗಳಾಗುತ್ತದೆ. ನೋಂದಣಿ ಹಾಗೂ ಇನ್ಶೂರೆನ್ಸ್ ಗಳಿಗಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಈ ಕಾರು ಎಲೆಕ್ಟ್ರಿಕ್ ಆಗಿರುವುದರಿಂದ ಸರ್ಕಾರದ ಹೊಸ ನೀತಿಯನ್ವಯ ರಿಜಿಸ್ಟ್ರೇಷನ್‍‍‍ಗಾಗಿ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

Image Source: Nirmeet Patil/Instagram

More from DriveSpark

Article Published On: Friday, September 13, 2019, 17:03 [IST]
English summary
Why did Ambani buy Tesla second hand car? - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+