ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಓಲಾ, ಉಬರ್ ಹಾಗೂ ಇನ್ನಿತರ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳು ಸರ್ಜ್ ಬೆಲೆಯನ್ನು ಏರಿಸುವ ಸಾಧ್ಯತೆಗಳಿವೆ. ಹೊಸ ಮೋಟಾರ್ ವಾಹನ ಕಾಯ್ದೆಯನ್ವಯ ಕೇಂದ್ರ ಸರ್ಕಾರವು ಕ್ಯಾಬ್ ಸೇವಾ ಸಂಸ್ಥೆಗಳಿಗೆ ತಮ್ಮ ಶುಲ್ಕವನ್ನು ಪರಿಷ್ಕರಿಸಿ ಏರಿಸಲು ಅನುಮತಿ ನೀಡಲಿದೆ. ಕ್ಯಾಬ್‍‍ಗಳಿಗೆ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಇಟಿ‍ಆಟೊ ಪ್ರಕಾರ, ಹೊಸ ಕಾಯ್ದೆಯು ಕ್ಯಾಬ್ ಸೇವಾ ಸಂಸ್ಥೆಗಳನ್ನು ಡಿಜಿಟಲ್ ಇಂಟರ್ ಮೀಡಿಯರಿಸ್‍‍ಗಳೆಂದು ಪರಿಗಣಿಸುತ್ತದೆ. ಇದೇ ಮೊದಲ ಬಾರಿಗೆ ಸರ್ಕಾರವು ಕ್ಯಾಬ್ ಸೇವಾ ಸಂಸ್ಥೆಗಳನ್ನು ಪ್ರತ್ಯೇಕವಾದ ಸಂಸ್ಥೆಗಳೆಂದು ಪರಿಗಣಿಸುತ್ತಿದೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಈ ಕಾರಣಕ್ಕಾಗಿ ಸರ್ಕಾರವು ಈ ಕಂಪನಿಗಳು ಸರಾಗವಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ನಿಯಮಗಳನ್ನು ರೂಪಿಸುತ್ತಿದೆ. ಈ ನಿಯಮಗಳ ಭಾಗವಾಗಿ, ಸರ್ಕಾರವು ಬೆಲೆ ಏರಿಕೆ ಮಾಡಲು ಅನುಮತಿ ನೀಡುತ್ತಿದೆ. ಇದರಿಂದಾಗಿ ಈ ಸಂಸ್ಥೆಗಳು ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆ ಏರಿಸಲಿವೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಸರ್ಜ್ ಬೆಲೆ ಎಂದರೆ, ವ್ಯವಹಾರ ಹಾಗೂ ಬೇಡಿಕೆಗಳ ಆಧಾರದ ಮೇಲೆ ಬೆಲೆಗಳನ್ನು ನಿಗದಿಪಡಿಸುವುದಾಗಿದೆ. ಕ್ಯಾಬ್ ಆಗಲಿ ಅಥವಾ ಟ್ಯಾಕ್ಸಿ ಆಗಲಿ, ಇವುಗಳು ನೀಡುವ ಸೇವೆಯ ವಿಷಯಕ್ಕೆ ಬಂದಾಗ, ಸರ್ಜ್ ಬೆಲೆಯು ಬೇಡಿಕೆಯನ್ನು ಆಧರಿಸಿ, ಬೆಲೆಯನ್ನು ಏರಿಸಬಹುದು ಅಥವಾ ಇಳಿಸಬಹುದು.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಪೀಕ್ ಅವರ್‍‍ನಲ್ಲಿ ಅಥವಾ ಮಳೆ ಬೀಳುವ ಸಂದರ್ಭಗಳಲ್ಲಿ ಕ್ಯಾಬ್‍‍ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ವೇಳೆಯಲ್ಲಿ ಕ್ಯಾಬ್ ಸೇವಾ ಸಂಸ್ಥೆಗಳು ಬೆಲೆಯನ್ನು ಏರಿಸಬಹುದಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕ್ಯಾಬ್ ಸಂಸ್ಥೆಗಳಿಗಾಗಿ ನಿಯಮಗಳನ್ನು ರೂಪಿಸಲಾಯಿತು.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ನಮ್ಮ ರಾಜ್ಯದಲ್ಲಿ ಲಗ್ಷುರಿ ಹಾಗೂ ಪ್ರಿಮಿಯಂ ಕ್ಯಾಬ್‍‍ಗಳಿಗೆ ಸರ್ಜ್ ದರವನ್ನು 2.25ನಷ್ಟು ಹಾಗೂ ಚಿಕ್ಕ ಕಾರುಗಳಿಗೆ 2ರಷ್ಟು ಬೆಲೆ ಏರಿಸುವ ನಿಯಮವನ್ನು ರೂಪಿಸಲಾಗಿದೆ. ಈಗ ಸರ್ಕಾರವು ಮೂಲ ದರಕ್ಕಿಂತ 3 ಪಟ್ಟು ಸರ್ಜ್ ಬೆಲೆಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಹೊಂದಿದೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಓಲಾ ಹಾಗೂ ಉಬರ್ ಎರಡೂ ಕಂಪನಿಗಳೂ ಸರ್ಜ್ ಬೆಲೆಯನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದವು. ಹೊಸ ನಿಯಮವನ್ನು ಜಾರಿಗೊಳಿಸಿದರೆ, ಕ್ಯಾಬ್ ಸೇವಾ ಸಂಸ್ಥೆಗಳು ಅಧಿಕ ಹಣವನ್ನು ವಿಧಿಸಲಿವೆ. ಇದರ ಹೊರೆಯು ಗ್ರಾಹಕರ ಮೇಲೆ ಬೀಳಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ವರದಿಗಳ ಪ್ರಕಾರ, ಗ್ರಾಹಕರು ಹಾಗೂ ಕ್ಯಾಬ್ ಸಂಸ್ಥೆಗಳ ನಡುವಿನ ಕಲಹಕ್ಕೆ ಕಾರಣ ಈ ಸರ್ಜ್ ಬೆಲೆಗಳು. ಈ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 49% ಜನರು ಸರ್ಜ್ ಬೆಲೆಯನ್ನು ಮೂಲ ಬೆಲೆಗಿಂತ 25%ನಷ್ಟು ಹೆಚ್ಚಿಸಬೇಕೆಂದು ಹೇಳಿದರೆ, 45% ಜನರು ಈ ಸರ್ಜ್ ಬೆಲೆಯನ್ನೇ ರದ್ದು ಪಡಿಸಬೇಕೆಂದು ಹೇಳಿದ್ದಾರೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಸರ್ಜ್ ಬೆಲೆಯನ್ನು ಹೆಚ್ಚಿಸುವುದರಿಂದ ಅಧಿಕ ಸಂಖ್ಯೆಯಲ್ಲಿ ಕ್ಯಾಬ್ ಡ್ರೈವರ್‍‍ಗಳು ಪೀಕ್ ಅವರ್‍‍ನಲ್ಲಿ ಕಾರುಗಳನ್ನು ಚಲಾಯಿಸಲಿದ್ದಾರೆ ಎಂಬುದು ಕ್ಯಾಬ್ ಸಂಸ್ಥೆಗಳ ವಾದವಾಗಿದೆ. ಇದರಿಂದಾಗಿ ಪೀಕ್ ಅವರ್‍‍ನಲ್ಲಿ ಗ್ರಾಹಕರು ಕ್ಯಾಬ್‍‍ಗಳಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂಬುದು ಕ್ಯಾಬ್ ಕಂಪನಿಗಳ ಅಭಿಪ್ರಾಯವಾಗಿದೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸರ್ಜ್ ಬೆಲೆಯನ್ನು ಏರಿಸುವುದರಿಂದ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಓಲಾ ಹಾಗೂ ಉಬರ್ ಕಂಪನಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದ ಚಾಲಕರಿಗೂ ಅನುಕೂಲವಾಗಲಿದೆ. ಆದರೆ ಇದರ ಹೊರೆಯು ಗ್ರಾಹಕರ ಮೇಲೆ ಬೀಳಲಿದೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಹೆಚ್ಚು ಲಾಭಗಳಿಸುವ ಉದ್ದೇಶದಿಂದ ಅನೇಕ ಡ್ರೈವರ್‍‍ಗಳು, ಪೀಕ್ ಅವರ್‍‍ಗಳಲ್ಲಿ ಹೆಚ್ಚು ಕ್ಯಾಬ್‍‍ಗಳನ್ನು ಓಡಿಸುವ ಸಾಧ್ಯತೆಗಳಿದ್ದರೂ, ಬೇರೆ ಅವಧಿಯಲ್ಲಿ ಕ್ಯಾಬ್‍‍ಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಈ ನಿರ್ಧಾರದಿಂದಾಗಿ ಗ್ರಾಹಕನಿಗೆ ಖಂಡಿತವಾಗಿಯೂ ತೊಂದರೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗ್ರಾಹಕರು ಕ್ಯಾಬ್‍‍ಗಳಲ್ಲಿ ಓಡಾಡುವುದನ್ನು ತಪ್ಪಿಸಬಹುದು. ಸರ್ಕಾರ ಹಾಗೂ ಕ್ಯಾಬ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

More from DriveSpark

Article Published On: Friday, September 13, 2019, 15:25 [IST]
English summary
Ola & Uber Surge Pricing To Increase Based On New Government Policy - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+