ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍ವಿಎಸ್ ಮೋಟಾರ್ ರೇಡಿಯೊನ್ ಸ್ಪೆಷಲ್ ಎಡಿಷನ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿ‍ವಿಎಸ್ ಸ್ಪೆಷಲ್ ಎಡಿಷನ್ ಬೈಕಿಗೆ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ. 54,665 ದರ ಹೊಂದಿದೆ. ಟಿ‍ವಿಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್ ಬೈಕ್ 'ಕಮ್ಯೂಟರ್ ಅಫ್ ದಿ ಇಯರ್' ಪ್ರಶಸ್ತಿಯನ್ನು ಗೆದ್ದ ಖ್ಯಾತಿಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍‍ವಿಎಸ್ ರೇಡಿಯೊನ್ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ಕಮ್ಯೂಟರ್ ಲೆವೆಲ್ ಬೈಕ್ ಇದಾಗಿದೆ. ಈ ಸಾಧನೆಯ ಸಂಭ್ರಮದ ಭಾಗವಾಗಿ ಟಿವಿಎಸ್ ಹಲವು ಬಗೆಯ ನವೀಕರಣಗಳೊಂದಿಗೆ ರೇಡಿಯೊನ್ ಸ್ಷೆಷಲ್ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟಿವಿಎಸ್ ಸೆಷ್ಪಲ್ ಎಡಿಷನ್ ನಲ್ಲಿ ಪ್ರಮುಖ ಅಪ್‍‍ಡೇಟ್ ಅಂದರೆ ಎರಡು ವಿಭಿನ್ನ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರೋಮ್ ಬ್ಲ್ಯಾಕ್ ಮತ್ತು ಕ್ರೋಮ್ ಬ್ರೌನ್ ಬಣ್ಣವಾಗಿದೆ. ಅದರೊಂದಿಗೆ ಹೊಸ ಟಿ‍‍ವಿಎಸ್ ಸ್ಪೆಷಲ್ ಎಡಿಷನ್ ಹಲವು ಹೊಸ ಫೀಚರ್ಸ್ ನೊಂದಿಗೆ ಕೂಡಿದೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಹೊಸ ಟಿ‍‍ವಿಎಸ್ ಸ್ಪೆಷಲ್ ಎಡಿಷನ್ ಬೈಕಿನಲ್ಲಿ ರೇರ್ ವ್ಯೂ ಮಿರರ್ ಮತ್ತು ಕಾರ್ಬ್ಯುರೇಟರ್ ಕವರ್, ರಿಫ್ರೇಶ್ ಪ್ರೀಮಿಯಂ ಗ್ರಾಫಿಕ್ಸ್, ಹೊಸ ಮೆಟಾಲಿಕ್ ಲಿವರ್ಸ್, ಅಪ್‍ಡೇಟ್ಡ್ ಥೈ ಪ್ಯಾಡ್ ವಿನ್ಯಾಸವನ್ನುಹೊಂದಿದೆ. ಹೊಸ ಟಿ‍‍ವಿ‍ಎಸ್ ಸ್ಪೆಷಲ್ ಎಡಿಷನ್ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿದ್ದು, ಆರಾಮದಾಯಕ ಸವಾರಿಗೆ ಸಹಕಾರಿಯಾಗಿದೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍ವಿಎಸ್ ರೇಡಿಯೊನ್ 2008ರಲ್ಲಿ ಮೊಟ್ಟ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಿತ್ತು, ಅಲ್ಲಿಂದ ಇಲ್ಲಿಯವರೆಗೆ ಉತ್ತಮ ಫರ್ಫಾಮೆನ್ಸ್ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಟಿ‍‍ವಿಎಸ್ ಸಂಸ್ಥೆಯು ಬರೊಬ್ಬರಿ ರೇಡಿಯೊನ್‍‍ನ 2 ಲಕ್ಷ ಯುನಿ‍ಟ್‍‍ಗಳನ್ನು ಮಾರಾಟ‍ ಮಾಡಿದ್ದು, ಪ್ರತಿ ತಿಂಗಳು ಸ್ಥಿರವಾಗಿ ಉತ್ತಮ ಮಾರಾಟವಾಗುತ್ತಿದೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍‍ವಿಎಸ್ ಮೋಟಾರ್ ಕಂಪನಿಯ ಮಾರ್ಕೆಟಿಂಗ್ ಉಪಧ್ಯಾಕ್ಷ ಅನಿರುದ್ದ ಹಲ್ದಾರ್ ಮತನಾಡಿ, ಟಿ‍ವಿಎಸ್ ರೇಡಿಯೊನ್ ಬೈಕ್ ತಜ್ಞರು ಮತ್ತು ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ. ಮೊದಲ ವರ್ಷದಲ್ಲಿ 2 ಲಕ್ಷ ಗ್ರಾಹಕರು ಟಿವಿಎಸ್ ರೇಡಿಯೊನ್ ಅನ್ನು ಆಯ್ಕೆ ಮಾಡಿದ್ದಾರೆ, ಆಯ್ಕೆ ಮಾಡಿದ ಗ್ರಾಹಕರು ಬೈಕಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ಡಾರೆ. ಗ್ರಾಹಕರ ಪ್ರೀತಿಗೆ ಟಿ‍ವಿಎಸ್ ಸಂಸ್ಥೆಯು ಅಭಾರಿಯಾಗಿರುತ್ತೇವೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍ವಿಎಸ್ ರೇಡಿಯೊನ್ ತಜ್ಞರ ಮೆಚ್ಚುಗೆ ಗಳಸಿದ್ದು, ವರ್ಷದ ಅತಿ ಹೆಚ್ಚು ಪ್ರಶಸ್ತಿ ಪಡೆದ ಬೈಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೊಸ ಟಿ‍‍ವಿಎಸ್ ರೇಡಿಯೊನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಬೈಕ್ 2 ಲಕ್ಷ ಯುನಿ‍ಟ್‍‍ಗಳು ಮಾರಾಟವಾಗಿದೆ ಇದೇ ಸಂದರ್ಭದಲ್ಲಿ ಹೊಸ ಟಿ‍ವಿಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಹೇಳಿದರು.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍‍ವಿಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್ ಬೈಕ್ ಅದೇ ಉತ್ಪಾದನಾ ಗುಣವನ್ನು ಹೊಂದಿದ್ದು, 109.7 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿರುವ ಸ್ಟ್ಯಾಂಡರ್ಡ್ ಮಾದರಿಯ ಡ್ಯುರ್ ಲೈಫ್ ಎಂಜಿನ್ ಹೊಂದಿದೆ. ಎಂಜಿನ್ 7000 ಆರ್‍‍ಪಿಎಂನಲ್ಲಿ 8 ಬಿಎಚ್‍‍ಪಿ ಮತ್ತು 5000 ಆರ್‍‍‍ಪಿ‍ಎಂನಲ್ಲಿ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 10 ಲೀಟರ್ ಫ್ಯೂಯಲ್‍‍ನಲ್ಲಿ 69.3 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಸ್ಪೆಷಲ್ ಎಡಿಷನ್‍‍ನಲ್ಲಿ ಎರಡು ಬಣ್ಣಗಳ ಯೋಜನೆ ಹೊರತಾಗಿ, ಟಿ‍ವಿಎಸ್ ರೇಡಿಯೊನ್ ಸ್ಟ್ಯಾಂಡರ್ಡ್ ರೂಪಾಂತರವು ಇತರ 6 ಬಣ್ಣಗಳ ಆಯ್ಕೆಯನ್ನು ಹೊಂದಿಕೊಂಡಿದೆ. ಅವುಗಳು ಪರ್ಲ್ ವೈಟ್, ಮೆಟಲ್ ಬ್ಲ್ಯಾಕ್, ಗೋಲ್ಡನ್ ಬೀಜ್, ರಾಯಲ್ ಪರ್ಪಲ್, ವಾಲ್ಕನೆ ರೆಡ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿದೆ.

ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಟಿವಿ‍ಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್

ಟಿ‍ವಿಎಸ್ ಕಂಪನಿಯಿಂದ ಹೆಚ್ಚು ಜನಪ್ರಿಯವಾಗಿರುವ ಕಮ್ಯೂಟರ್ ಲೆವೆಲ್ ಟಿ‍‍ವಿಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಟಿವಿಎಸ್ ಆಕರ್ಷಕ ಫೀಚರ್ಸ್ ನೊಂದಿಗೆ ಕೈಗೆಟಕುವ ದರವಾಗಿರುದರಿಂದ ಮಧ್ಯಮ ವರ್ಗದ ಗ್ರಾಹಕರಿಗೆ ಹೆಚ್ಚು ಸಹಕಾರಿಯಾಗಿದೆ. ಟಿ‍ವಿಎಸ್ ರೇಡಿಯೊನ್ ಸ್ಪೆಷಲ್ ಎಡಿಷನ್ ಬೈಕ್ ಹೀರೊ ಸ್ಪ್ಲೆಂಡರ್, ಯಮಾಹ ಸಲೂಟೊ ಆರ್‍ಎಕ್ಸ್ ಮತ್ತು ಹೋಂಡಾ ಸಿಬಿ ಶೈನ್ ಬೈಕ್‍‍ಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
TVS Radeon ‘Special Edition’ Launched In India: Priced At Rs 54,665 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X