ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಸ್ಪೆಷಲ್ ಎಡಿಷನ್

ಟಿವಿ‍ಎಸ್ ಮೋಟಾರ್ಸ್ ವಿಶೇಷ ಆವೃತ್ತಿಯ ಸ್ಟಾರ್ ಸಿಟಿ ಪ್ಲಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2019ರ ಹೊಸ ಟಿವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಸ್ಪೆಷಲ್ ಎಡಿಷನ್ ಬೈಕಿನ ಬೆಲೆಯು ಕರ್ನಾಟಕದ ಎಕ್ಸ್ ಶೋರೂಂ ದರದಂತೆ ರೂ.53,437ಗಳಾಗಿದೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಈ ಬೈಕ್ ಅನ್ನು ಟಿವಿ‍ಎಸ್ ಕಂಪನಿಯು ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೈಕ್ ಅನ್ನು ಬಿಳಿ/ಕಪ್ಪು ಬಣ್ಣದ ಹೊಸ ಡ್ಯುಯಲ್ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಸ್ಟಾಂಡರ್ಡ್ ಮಾದರಿಯ ಬೈಕಿಗೆ ಹೋಲಿಸಿದರೆ ಆಕರ್ಷಕವಾದ ಲುಕ್ ಹೊಂದಿರಲಿದೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಹೊಸ ಬಣ್ಣವನ್ನು ಹೊಂದುವುದರ ಜೊತೆಗೆ, ಈ ವಿಶೇಷ ಆವೃತ್ತಿಯ ಬೈಕ್ ಪ್ರೀಮಿಯಂ ಡ್ಯುಯಲ್ ಟೋನ್ ಸೀಟ್, ಡ್ಯುಯಲ್ ಟೋನ್ ಮಿರರ್, ಸೈಡ್ ಹಾಗೂ ರೇರ್ ಪ್ಯಾನೆಲ್‍‍ಗಳ ಮೇಲೆ ಕೆಂಪು ಬಣ್ಣದ ಡೆಕಾಲ್‍‍ಗಳನ್ನು ಹೊಂದಿದೆ. ಇದರ ಜೊತೆಗೆ ಬಣ್ಣದ ಶಾಕ್ ಅಬ್ಸರ್ವರ್ ಹಾಗೂ ಸ್ಪೇಷಲ್ ಎಡಿಷನ್ ಲೊಗೊ ಹೊಂದಿದೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಎ‍‍ಹೆಚ್‍ಒ (ಆಟೋಮ್ಯಾಟಿಕ್ ಹೆಡ್‍‍ಲೈಟ್ ಆನ್), ಹನಿ ಕೂಂಬ್ ಟೆಕ್ಷರ್‍‍ನ ಸೈಡ್ ಪ್ಯಾನೆಲ್, ಸ್ಟೇನ್‍‍ಲೆಸ್ ಸ್ಟೀಲ್ ಮಫ್ಲರ್ ಬಿಡಿಭಾಗಗಳು, ಅಲ್ಯುಮಿನಿಯಂ ಗ್ರಾಬ್ ರೇಲ್, ಬ್ಲಾಕ್ ಅಲಾಯ್ ವ್ಹೀಲ್, 3ಡಿ ಎಂಬ್ಲೆಮ್ ಹಾಗೂ ಟೇಲ್‍‍ಲೈಟ್‍‍ನ ಸ್ಟೈಲಿಶ್ ಸೆಟ್‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಹೊಸ ಟಿವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನಲ್ಲಿರುವ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕಿನಲ್ಲಿಯೂ ಸಹ 110 ಸಿಸಿ ಯ ಸಿಂಗಲ್ ಸಿಲಿಂಡರ್ ಏರ್ ಕೂಲ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಈ ಎಂಜಿನ್ 7,000 ಆರ್‍‍ಪಿ‍ಎಂ‍‍ನಲ್ಲಿ 8.2 ಬಿ‍‍ಹೆಚ್‍‍ಪಿ ಪವರ್ ಹಾಗೂ 5,000 ಆರ್‍‍ಪಿ‍ಎಂನಲ್ಲಿ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 4 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಪ್ರಯಾಣಿಕ ಸೆಗ್‍‍ಮೆಂಟಿನ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸರ್ವರ್‍‍ಗಳಿವೆ.

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಬ್ರೇಕಿಂಗ್‍‍ಗಳಿಗಾಗಿ ಎರಡೂ ಬದಿಯಲ್ಲಿ 110 ಎಂಎಂ‍‍ನ ಡ್ರಮ್ ಬ್ರೇಕ್‍‍ಗಳಿವೆ. ಈ ಬೈಕಿನಲ್ಲಿರುವ ಎರಡೂ ಟಯರ್‍‍ಗಳೂ 17 ಇಂಚಿನದಾಗಿವೆ. ಈ ಸ್ಪೇಷಲ್ ಎಡಿಷನ್ ಬೈಕಿನಲ್ಲಿ ಬಟನ್ ಟೈಪಿನ ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಹೊಸ ಟಿವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಸ್ಪೇಷಲ್ ಎಡಿಷನ್ ಬೈಕಿನ ಬಿಡುಗಡೆಯ ಹೊರತಾಗಿ, ಟಿವಿ‍ಎಸ್ ಮೋಟಾರ್ಸ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಅಪ್‍‍ಡೇಟ್‍‍ಗೊಳಿಸುತ್ತಿದೆ. ಸದ್ಯದಲ್ಲೇ ಟಿ‍‍ವಿ‍ಎಸ್ ಕಂಪನಿಯು ಅಪಾಚೆ ಆರ್‍‍ಟಿ‍ಆರ್ ಬೈಕಿನ ನವೀಕೃತ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಟಿವಿ‍ಎಸ್ ಮೋಟಾರ್ಸ್‍‍ನ ಮೊದಲ ಅಪ್‍‍ಡೇಟ್ ಅನ್ನು ಅಪಾಚೆ ಆರ್‍‍‍ಟಿ‍ಆರ್ 200 4ವಿ ಬೈಕ್ ಪಡೆಯಲಿದೆ. ಟಿ‍‍ವಿಎಸ್ ಕಂಪನಿಯು ಈ ಬೈಕಿನಲ್ಲಿ ಬಿ‍ಎಸ್ 6 ಎಂಜಿನ್ ಅನ್ನು ಅಳವಡಿಸಲಿದೆ. ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಬಿಡುಗಡೆಯಾಯ್ತು ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿ‍ಎಸ್ ಮೋಟಾರ್ಸ್ ಕಂಪನಿಯು ಸಹ ಉಳಿದ ಕಂಪನಿಗಳಂತೆ ನಿಧಾನಗತಿಯ ಬೆಳವಣಿಗೆಯನ್ನು ಎದುರಿಸುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಕಂಪನಿಯ ಮಾರಾಟದಲ್ಲಿ 15.37%ನಷ್ಟು ಕುಸಿತ ಉಂಟಾಗಿದೆ. ಹೊಸ ಬೈಕಿನ ಬಿಡುಗಡೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಟಿವಿ‍ಎಸ್ ಕಂಪನಿಯ ಮಾರಾಟವು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Article Published On: Tuesday, September 10, 2019, 14:55 [IST]
English summary
TVS StarCity+ Special Edition Launched In India: Priced At Rs 53,437 - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+