ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಹೊಸ ಸಂಚಾರಿ ನಿಯಮಗಳನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಹೊಸ ನಿಯಮಗಳನ್ನು ಐದು ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಬಹುತೇಕ ರಾಜ್ಯಗಳು ಹೊಸ ನಿಯಮದನ್ವಯ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲು ಶುರು ಮಾಡಿವೆ.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ದೆಹಲಿಯಂತಹ ನಗರಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವವರ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೊಸ ಕಾಯ್ದೆಯನ್ವಯ ಹೆಚ್ಚಿನ ಪ್ರಮಾಣದ ದಂಡ ವಿಧಿಸುವ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಸಹ ಕೆಲ ಹುಂಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಇದರಲ್ಲಿ ಕೆಲ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.

ಎ‍‍ಬಿ‍‍ಪಿ ನ್ಯೂಸ್ ಬಿಡುಗಡೆಗೊಳಿಸಿರುವ ವೀಡಿಯೋದಲ್ಲಿ ಪೊಲೀಸ್ ವಾಹನದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ದಂಡ ವಿಧಿಸುತ್ತಿರುವುದನ್ನು ಕಾಣಬಹುದು. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವೀಡಿಯೊದಲ್ಲಿ ಚಾಕಿಯಾ ಡಿಎಸ್‍‍ಪಿರವರ ಅಧಿಕೃತ ಪೊಲೀಸ್ ಕಾರು ಹಾಗೂ ಕಾರಿನಲ್ಲಿರುವ ಪೊಲೀಸ್ ಅಧಿಕಾರಿಯನ್ನು ಕಾಣಬಹುದು.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಕಾರನ್ನು ಪೊಲೀಸರು ತಡೆದು ನಿಲ್ಲಿಸಿದಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿದ್ದ ಸ್ಟಾಪ್ ಲೈನ್ ಅನ್ನು ಏಕೆ ದಾಟಿದರು ಎಂದು ವರದಿಗಾರ್ತಿ ಪೊಲೀಸರನ್ನು ಕೇಳುತ್ತಿದ್ದಾರೆ. ಟ್ರಾಫಿಕ್ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದಾಗ ಸ್ಟಾಪ್ ಲೈನ್ ಅನ್ನು ದಾಟುವುದು ಅಪರಾಧ. ಈ ಉಲ್ಲಂಘನೆಗಾಗಿ ದಂಡವನ್ನು ವಿಧಿಸಬಹುದು.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಸೀಟ್‌ಬೆಲ್ಟ್ ಏಕೆ ಧರಿಸಿಲ್ಲ ವರದಿಗಾರ್ತಿ ಪ್ರಶ್ನಿಸಿದ ನಂತರ ಕಾರಿನಲ್ಲಿದ್ದ ಪೊಲೀಸ್ ಅಧಿಕಾರಿ ಸೀಟ್‌ಬೆಲ್ಟ್‌ಗಾಗಿ ಹುಡುಕಾಡಲು ಶುರು ಮಾಡಿದ್ದಾರೆ. ಸೀಟ್ ಬೆಲ್ಟ್ ಧರಿಸದೇ ಇರುವುದು ಸಹ ಸಂಚಾರಿ ನಿಯಮಗಳ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ಪ್ರತ್ಯೇಕ ದಂಡ ವಿಧಿಸಬಹುದು.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಈ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿಗೆ ಸೀಟ್‌ಬೆಲ್ಟ್‌ ಅನ್ನು ಹೇಗೆ ಧರಿಸಬೇಕು ಎಂಬುದರ ಅರಿವಿಲ್ಲದಿರುವುದನ್ನು ಕಾಣಬಹುದು. ತಮ್ಮ ಸುತ್ತಲೂ ಅಳವಡಿಸಿಕೊಳ್ಳಬೇಕಾದ ಸೀಟ್‌ಬೆಲ್ಟ್‌ಗಳ ಬಕಲ್ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆಗಳೂ ಇವೆ.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಆದರೆ ಇದು ಸರಿಯಾದ ಕಾರಣವಲ್ಲ. ಈ ರೀತಿಯಾದರೆ ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿರುವವರು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ವರದಿಗಾರ್ತಿ ಸ್ಥಳದಲ್ಲಿದ್ದ ಸಂಚಾರ ಪೊಲೀಸರ ಬಳಿ ಈ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ವಿಧಿಸುವ ದಂಡಗಳ ಬಗ್ಗೆ ಕೇಳಿದ್ದಾರೆ. ಸ್ಟಾಪ್ ಲೈನ್ ದಾಟಿರುವುದಕ್ಕೆ ರೂ.500 ದಂಡ ಎಂದು ಪೊಲೀಸರು ತಿಳಿಸಿದ್ದಾರೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಇರುವ ದಂಡದ ಬಗ್ಗೆ ಕೂಡ ವರದಿಗಾರ್ತಿ ಕೇಳಿದಾಗ. ಸಂಚಾರಿ ಪೊಲೀಸ್ ಇದಕ್ಕಾಗಿ ರೂ.1,000 ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಒಟ್ಟು ಮೊತ್ತ ರೂ.1,500ಗಳಾಗುತ್ತದೆ. ಆದರೆ ಕಾನೂನು ಪಾಲಿಸಬೇಕಾದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಎರಡು ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಸ್ಥಳದಲ್ಲಿದ್ದ ಪೋಲೀಸರು ದಂಡ ವಿಧಿಸಿ ರಶೀದಿ ನೀಡಿದ್ದಾರೆ. ಆದರೆ ಈ ರಸೀದಿಯನ್ನು ಕ್ಯಾಮರಾದಲ್ಲಿ ತೋರಿಸಲಾಗಿಲ್ಲ. ಈ ಅಧಿಕಾರಿಗಳು ಚಲಿಸುತ್ತಿದ್ದ ಟಾಟಾ ಸುಮೊ ಗೋಲ್ಡ್ ವಾಹನದ ಮುಂಭಾಗದಲ್ಲಿ ಪೊಲೀಸ್ ಅಧಿಕಾರಿ ಎಂಬ ಬೋರ್ಡ್ ಅಳವಡಿಸಿರುವುದನ್ನು ಕಾಣಬಹುದು.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ತಿದ್ದುಪಡಿ ಮಾಡಲಾದ ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ, ನಿಯಮಗಳನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿಗಳು ನಿಗದಿಪಡಿಸಿರುವ ದಂಡಕ್ಕಿಂತ ಎರಡು ಪಟ್ಟು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರಿಗೆ ಇದರ ಅರಿವಿರಲಿಲ್ಲ.

ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಸಾರ್ವಜನಿಕ ರಸ್ತೆಗಳಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೊಸ ನಿಯಮಗಳ ಅನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುವುದು.

Source: ABP News/YouTube

Most Read Articles

Kannada
English summary
Senior cop BUSTED under new motor vehicle act - Read in kannada
Story first published: Wednesday, September 4, 2019, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X