ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಭಾರತ ಸರ್ಕಾರವು 2020ರ ಏಪ್ರಿಲ್‍‍ನಿಂದ ಜಾರಿಗೊಳಿಸಲಿರುವ, ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತೆ ತಯಾರಾಗಿರುವ ಭಾರತದ ಮೊದಲ ಬಿ‍ಎಸ್6 ಎಲೆಕ್ಟ್ರಿಕ್ ಸ್ಕೂಟರ್ ಹೋಂಡಾ ಆಕ್ಟಿವಾ 125 ಸ್ಕೂಟರನ್ನು ಇತ್ತೀಚಿಗಷ್ಟೆ ಅನಾವರಣಗೊಳಿಸಲಾಯಿತು.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಈ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮೋಟಾರ್‍‍ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ (ಹೆಚ್‍ಎಂ‍ಎಸ್‍ಐ) ಸಿ‍‍ಇ‍ಒ ಮಿನೊರು ಕಾಟೊರವರು ಭಾರತದ ಅತಿ ದೊಡ್ಡ ಸ್ಕೂಟರ್ ತಯಾರಿಕಾ ಕಂಪನಿಯಾದ ಹೋಂಡಾ, ಸರ್ಕಾರವು ಸಬ್ 150 ಸಿಸಿ ದ್ವಿಚಕ್ರವಾಹನಗಳ ಎಲೆಕ್ಟ್ರಿ‍ಕರಣದ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವವರೆಗೂ ಯಾವುದೇ ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡದಿರಲು ನಿರ್ಧರಿಸಿದೆ ಎಂದು ತಿಳಿಸಿದರು.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ನೀತಿ ಆಯೋಗದ ವರದಿಯಲ್ಲಿ ಎಲ್ಲಾ ಸಬ್ 150 ಸಿಸಿಯ ದ್ವಿಚಕ್ರ ವಾಹನಗಳನ್ನು 2023ರ ಒಳಗೆ ಎಲೆಕ್ಟ್ರಿಕ್ ವಾಹನಗಳಿಗೆ ಬದಲಿಸುವಂತೆ ಸೂಚಿಸಲಾಗಿದೆ. ಕಾಟೊರವರು ಮಾತನಾಡಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿವೆ.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಬಿ‍ಎಸ್ 6 ನಿಯಮಗಳನ್ನು ಜಾರಿಗೊಳಿಸಿದ ತಕ್ಷಣವೇ ದ್ವಿಚಕ್ರವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಿಸುವುದು ಉತ್ತಮವಾದ ಬೆಳವಣಿಗೆಯಲ್ಲ. ನಾವು ಮತ್ತು ನಮಗೆ ಪೂರೈಕೆ ಮಾಡುವವರು ಬಿ‍ಎಸ್6 ನಿಯಮಗಳನ್ನು ಅನುಷ್ಟಾನಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಹೀರೊ ಮೋಟೊಕಾರ್ಪ್ ನ ಸಿ‍ಇ‍ಒ ಪವನ್ ಮುಂಜಾಲ್ ಹಾಗೂ ಬಜಾಜ್ ಆಟೋ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ರವರು ಮಾತನಾಡಿ, ಭಾರತವು ಬಿ‍ಎಸ್4 ನಿಯಮದಿಂದ ಬಿಎಸ್ 6 ನಿಯಮಗಳಿಗೆ 3 ವರ್ಷಗಳಲ್ಲಿ ಬದಲಾಗಿದೆ. ಆದರೆ ಯೂರೋಪ್‍‍ನಲ್ಲಿ ಯೂರೋ 3 ನಿಯಮಗಳಿಂದ ಯೂರೋ 5 ನಿಯಮಗಳಿಗೆ ಬದಲಾಗಲು 13 ವರ್ಷ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ದ್ವಿ ಚಕ್ರ ವಾಹನಗಳ ತಯಾರಕರು ಬಿ‍ಎಸ್6 ನಿಯಮಗಳಿಗೆ ಅನುಗುಣವಾಗಿ ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಲು ಬೃಹತ್ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಕಠಿಣ ನಿಯಮಗಳ ಅನುಸಾರ ದ್ವಿಚಕ್ರವಾಹನಗಳಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಎಂಜಿನ್‍‍ಗಳನ್ನು ಅಳವಡಿಸಬೇಕಾಗಿದೆ. ಇದರಿಂದಾಗಿ ದ್ವಿಚಕ್ರವಾಹನಗಳ ಬೆಲೆಗಳಲ್ಲಿ 10-15% ನಷ್ಟು ಹೆಚ್ಚಳವಾಗಲಿದೆ.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಕಾಟೊರವರು ಮಾತನಾಡಿ, ಈ ಬೆಲೆ ಹೆಚ್ಚಳದಿಂದಾಗಿ ಮಾರಾಟದಲ್ಲಿ ಕುಸಿತವನ್ನು ನಿರೀಕ್ಷಿಸಲಾಗಿದೆ. ಚುನಾವಣೆಗಳ ನಂತರ ಮಾರಾಟ ಪ್ರಮಾಣವು ಏರಿಕೆಯಾಗ ಬಹುದೆಂದು ನಿರೀಕ್ಷಿಸಲಾಗಿತ್ತು. ದ್ವಿಚಕ್ರ ವಾಹನಗಳ ಹಾಗೂ ಪ್ಯಾಸೆಂಜರ್ ಕಾರು ಮಾರಾಟದಲ್ಲಿ 15 -25% ನಷ್ಟು ಕುಸಿತ ಉಂಟಾಗಿದೆ ಎಂದು ತಿಳಿಸಿದರು.

MOST READ: ಈ ಜರ್ಮನ್ ಅಂಬಾಸಿಡರ್‍‍‍ಗೆ ಬಲು ಇಷ್ಟ ನಮ್ಮ ಅಂಬಾಸಿಡರ್ ಕಾರು..!

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಕಾಟೊರವರ ಪ್ರಕಾರ, ಆಟೋಮೊಬೈಲ್ ಉದ್ಯಮ ಹಾಗೂ ಅದರಲ್ಲಿರುವ ಪ್ರಭಾವಿಶಾಲಿಗಳು ಸರ್ಕಾರದ ಜೊತೆ ಮಾತುಕತೆ ನಡೆಸಿ, ದ್ವಿ ಚಕ್ರ ವಾಹನಗಳ ಎಲೆಕ್ಟ್ರಿಕರಣದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಹಲವು ತಯಾರಕರ ಪ್ರಕಾರ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕರಣದಲ್ಲಿ ಎರಡು ರೀತಿಯ ಸಮಸ್ಯೆಗಳಿವೆ. ಮೊದಲನೆಯದಾಗಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ನೀಡುವ ಮೈಲೇಜ್ ಬಗ್ಗೆ. ಭಾರತದಲ್ಲಿರುವ ದ್ವಿಚಕ್ರ ವಾಹನ ಸವಾರರು ನಗರದೊಳಗೆ ಹೆಚ್ಚು ಪ್ರಯಾಣ ಮಾಡುತ್ತಿರುತ್ತಾರೆ. ಈಗಿರುವ ಎಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳು 70-75 ಕಿ.ಮೀ ವ್ಯಾಪ್ತಿಯಲ್ಲಿ ಚಲಿಸುತ್ತವೆ.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಎರಡನೇಯದಾಗಿ, ಭಾರತವು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುತ್ತಿದ್ದು, ಬ್ಯಾಕ್ ಎಂಡ್ ಗ್ರಿಡ್‍‍ಗಳನ್ನು ದೇಶಾದ್ಯಂತ ಸ್ಥಾಪಿಸಿ ದ್ವಿಚಕ್ರ ವಾಹನಗಳನ್ನು ಚಾರ್ಜ್ ಮಾಡಲು ಅನುಕೂಲ ಮಾಡಬೇಕಾಗಿದೆ.

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಈ ಎರಡು ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರವು ಬಹಳಷ್ಟು ಕಾಲಾವಕಾಶ ನೀಡಬಹುದೆಂಬ ನಿರೀಕ್ಷೆಯನ್ನು ದ್ವಿಚಕ್ರ ವಾಹನ ಉದ್ಯಮವು ಹೊಂದಿದೆ. ಬಿ‍ಎಸ್6 ನಿಯಮಗಳನ್ನು ಅಳವಡಿಸಿದ ನಂತರ ಎಲೆಕ್ಟ್ರಿಕರಣಕ್ಕಾಗಿ ನೀಡುತ್ತಿರುವ ಮೂರು ವರ್ಷಗಳ ಅವಧಿಯು ತೀರಾ ಕಡಿಮೆಯಾಯಿತೆಂಬುದು ಉದ್ಯಮದ ಅಭಿಪ್ರಾಯವಾಗಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸರ್ಕಾರ ಹಾಗೂ ದ್ವಿಚಕ್ರ ವಾಹನ ಉದ್ಯಮಗಳು ವಿರುದ್ಧ ದಿಕ್ಕಿನಲ್ಲಿವೆ. ಆದ ಕಾರಣ ಭಾರಿ ಪ್ರಮಾಣದಲ್ಲಿ ಮಾಡಬೇಕಾಗಿರುವ ಬಂಡವಾಳ ಹೂಡಿಕೆಯನ್ನು ಹಾಗೆಯೇ ಇಡಲಾಗಿದೆ. ಈ ಸಮಸ್ಯೆಗೆ ಪರಿಹಾರ ಸೂಚಿಸದಿದ್ದರೆ, ವಾಹನಗಳ ಉತ್ಪಾದನೆಯಲ್ಲಿ ಕುಸಿತ ಉಂಟಾಗಿ, ಭಾರಿ ಪ್ರಮಾಣದಲ್ಲಿ ಉದ್ಯೋಗಗಳ ಕಡಿತವಾಗಲಿದೆ.

More from DriveSpark

Article Published On: Friday, June 14, 2019, 11:21 [IST]
English summary
Two Wheeler Industry Against Swift Electrification — Honda Puts Future Investments On Hold - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+