ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬೆಲೆ ಬಹಿರಂಗ
ಇಟಲಿಯ ವಾಹನ ತಯಾರಕ ಕಂಪನಿ ಪಿಯಾಜಿಯೋ ತನ್ನ ವಾಹನವಾದ ವೆಸ್ಪಾದ ಮಾರಾಟವನ್ನು ವಿಸ್ತರಿಸಲು ಬಯಸಿದೆ. ಹೊಸ ಮಾದರಿಯಾದ ವೆಸ್ಪಾ ಎಲ್ಎಕ್ಸ್125 ಸರಣಿಯ - ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಅನ್ನು ವಿವಿಧ ಬಣ್ಣಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಅದು ಎಲ್ಎಕ್ಸ್ 125 ಸರಣಿಯ ವಿವಿಧ ಮಾದರಿಗಳಿಗಿಂತ ವಿಭಿನ್ನವಾಗಿರಲಿದೆ. ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂಗಳಲ್ಲಿರುವಂತೆ ರೂ. 74,500 ಆಗಿರಲಿದೆ.

ಇಂಡಿಯನ್ ಆಟೋಸ್ ಬ್ಲಾಗ್ ವರದಿಯ ಪ್ರಕಾರ, ವೆಸ್ಪಾ ಅರ್ಬನ್ ಕ್ಲಬ್ 125 ಮ್ಯಾಟ್ ಬಣ್ಣದಲ್ಲಿರಲಿದೆ. ವ್ಹೀಲ್ ಗಳು, ಮಿರರ್ ಸ್ಟೆಮ್ ಗಳು, ಹೌಸಿಂಗ್, ಫ್ರಂಟ್ ಫೆಂಡರ್ ಗಾರ್ನಿಷ್, ಏಪ್ರಾನ್ ಹೈ ಲೈಟ್ಸ್ ಗಳು ಕಪ್ಪು ಬಣ್ಣದಲ್ಲಿರಲಿವೆ. ಹಿಂಭಾಗದ ಲೈಟ್ ಕ್ಲಷ್ಟರ್ ಸಹ ಸುತ್ತಲೂ ಕಪ್ಪು ಬಣ್ಣ ಹೊಂದಿರಲಿದೆ. ಸ್ಕೂಟರಿನ ಹೆಡ್ ಲೈಟ್ ಮಾಸ್ಕ್ ಮಾತ್ರ ಕ್ರೋಮ್ ಬಣ್ಣ ಹೊಂದಿರಲಿದೆ. ಎಲ್ಎಕ್ಸ್ 125 ನಲ್ಲಿದ್ದಂತೆಯೇ ಬ್ರೇಕಿಂಗ್ ಇರಲಿದೆ. ವೆಸ್ಪಾ ಅರ್ಬನ್ ಕ್ಲಾಪ್ ನಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳಿರಲಿವೆ. ಈ ಸ್ಕೂಟರ್ ನಲ್ಲಿ ಸ್ಟಾಂಡರ್ಡ್ ಆಗಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಇರಲಿದೆ. ಎಲ್ಲಾ ಮೆಕಾನಿಕ್ ಗಳು ವೆಸ್ಪಾ ಎಲ್ಎಕ್ಸ್ 125 ನಲ್ಲಿ ಇದ್ದಂತೆಯೇ ಇರಲಿವೆ.

ವೆಸ್ಪಾ ಅರ್ಬನ್ ಕ್ಲಾಪ್ 125 ನಲ್ಲಿ 125ಸಿಸಿಯ ಏರ್ ಕೂಲ್ಡ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರಲಿದ್ದು, ಅದು 9.76 ಬಿಹೆಚ್‍ಪಿ ಪವರ್ ಅನ್ನು 7,500 ಆರ್‍ಪಿಎಂ ನಲ್ಲಿ ಮತ್ತು 1.6 ಎನ್ಎಂ ಟಾರ್ಕ್ ಅನ್ನು 6,000 ಆರ್‍ಪಿಎಂ ನಲ್ಲಿ ಉತ್ಪಾದಿಸಲಿದೆ. ಈ ಎಂಜಿನ್ ಸ್ಥಿರವಾದ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.

ವೆಸ್ಪಾ ಅರ್ಬನ್ ಕ್ಲಾಪ್ ಒಂದು ಸೈಡಿನ ಆರ್ಮ್ ಹೈಡ್ರಾಲಿಕ್ ಸಸ್ಪೆಂಷನ್ ಯೂನಿಟ್ ಅನ್ನು ಮುಂಭಾಗದಲ್ಲಿ ಮತ್ತು ಹೈಡ್ರಾಲಿಕ್ ಶಾಕ್ ಅಬ್ಸರ್ವರ್ ಗಳನ್ನು ಹಿಂಭಾಗದಲ್ಲಿ ಹೊಂದಿರಲಿದೆ. ಇದೇ ರೀತಿಯ ಸಸ್ಪೆಂಷನ್ ಗಳನ್ನು ವೆಸ್ಪಾ ಎಲ್ ಎಕ್ಸ್ 125 ನಲ್ಲೂ ಅಳವಡಿಸಲಾಗಿತ್ತು.

ಬಿಡುಗಡೆಯಾದ ನಂತರ ವೆಸ್ಪಾ ಅರ್ಬನ್ ಕ್ಲಾಪ್ ಸ್ಕೂಟರ್, ಸುಜುಕಿ ಆಕ್ಸೆಸ್ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಹೋಂಡಾ ಗ್ರಾಜಿಯಾ 125 ಗಳಿಗೆ ಪೈಪೋಟಿ ನೀಡಲಿದೆ. ಪಿಯಾಜಿಯೋ 125 ಸಿಸಿ ಸೆಗ್ ಮೆಂಟಿನಲ್ಲಿ ತನ್ನ ಹೊಸ ಸ್ಕೂಟರ್ ಆದ ಎಪ್ರಿಲಿಯಾ 125 ಬಿಡುಗಡೆ ಮಾಡಲಿದೆ. ಎಪ್ರಿಲಿಯಾ ಸ್ಟಾರ್ಮ್ 125 ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಸ್ಟಾರ್ಮ್ 125, 12 ಇಂಚಿನ ವ್ಹೀಲ್ಸ್, ಆಫ್ ರೋಡ್ ಟಯರ್ಸ್, ಮುಂದೆ ಡಿಸ್ಕ್ ಬ್ರೆಕ್ ಗಳನ್ನು ಮತ್ತು ಹಿಂದೆ ಡ್ರಮ್ ಬ್ರೇಕ್ ಗಳನ್ನು ಹೊಂದಿದೆ. ಭಾರತದ ಎಕ್ಸ್ ಶೋರೂಂ ದರದಂತೆ ಆರಂಭಿಕ ಬೆಲೆಗಳನ್ನು ರೂ. 65,000 ಗಳೆಂದು ನಿಗದಿಪಡಿಸಲಾಗಿದೆ. ಇದು ಎಪ್ರಿಲಿಯಾ ಸ್ಕೂಟರ್ ಗಳಲ್ಲಿ ಅಗ್ಗದ ಬೆಲೆಯನ್ನು ಹೊಂದಿರಲಿದೆ.
MOST READ: ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ವೆಸ್ಪಾ ಅರ್ಬನ್ ಕ್ಲಾಪ್ 125 ಸ್ಕೂಟರ್, ವೆಸ್ಪಾ ಎಲ್ ಎಕ್ಸ್ 125 ಆವೃತ್ತಿಯ ಸೀಮಿತ ಮಾದರಿಯ ಸ್ಕೂಟರ್ ಆಗಿದೆ. ಪಿಯಾಜಿಯೋ ಈ ಸ್ಕೂಟರ್ ಅನ್ನು ಲಿಮಿಟೆಡ್ ಎಡಿಷನ್ ನಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ.


Click it and Unblock the Notifications








