ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಬ್ರಿಟಿಷ್ ಕಾರು ತಯಾರಕ ಕಂಪನಿಯಿಂದ ಬಿಡುಗಡೆಯಾದ ಮಿಡ್ ಲೆವೆಲ್ ಲಗ್ಷುರಿ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು 2017ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಮಿಡ್ ಲೆವೆಲ್ ಲಗ್ಷುರಿ ಗೆ 2018ರಲ್ಲಿ ಮಿಡ್ ಸೈಕಲ್ ಅಪ್ ಡೇಟ್ ಅನ್ನು ನೀಡಲಾಯಿತು, ಈಗ ಭಾರತದ ಎಕ್ಸ್ ಶೋ ರೂಂ ದರದಂತೆ ಬೆಲೆಯನ್ನು ರೂ. 1.03 ಕೋಟಿ ನಿಗದಿಪಡಿಸಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ವೇಲಾರ್ ಮತ್ತು ಟಾಪ್ ರೇಂಜ್ ರೋವರ್ ನ ಮಧ್ಯದ ಮಾದರಿಯಲ್ಲಿ ಇರುವ ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ದೊರೆಯುತ್ತದೆ. ಇದರಲ್ಲಿ- ಸೂಪರ್ ಚಾರ್ಜ್ಡ್ ವಿ6 ಮತ್ತು ವಿ8 ಪೆಟ್ರೋಲ್ ಮತ್ತು ಟರ್ಬೋ ಡೀಸೆಲ್ ವಿ8 ಮತ್ತು ಬೇಸ್ ಟರ್ಬೋ ಡೀಸೆಲ್ ವಿ6 ಎಂಬ ನಾಲ್ಕು ವಿಧದ ಎಂಜಿನ್ ಮಾದರಿಗಳಿವೆ. ನಮಗೆ ರೇಂಜ್ ರೋವರ್ ಸ್ಪೋರ್ಟ್, ಬೇಸ್ ಟರ್ಬೋ ಡೀಸೆಲ್ ವಿ6 ಹೆಚ್ಎಸ್ಇ ಟಿಡಿ ವಿ6 ಮಾದರಿ ಕಾರನ್ನು ಚಲಾಯಿಸುವ ಅವಕಾಶ ಒದಗಿತ್ತು. ಇದರಿಂದ ಡೀಸೆಲ್ ಪವರ್ ನ ಲಗ್ಷುರಿ ಎಸ್‍ಯುವಿ ಸ್ಪೋರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ತಿಳಿಯಲಾಯಿತು.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಈ ರೇಂಜ್ ರೋವರ್ ಸ್ಪೋರ್ಟ್ ಆಫ್ ರೋಡ್ ನ ಜೊತೆಯಲ್ಲಿ ಲಗ್ಷುರಿಯನ್ನು ಸಹ ಒಳಗೊಂಡಿದೆ. ಇದು ಸ್ಪೋರ್ಟಿ ಹ್ಯಾಂಡ್ಲಿಂಗ್ ಹೊಂದಿದ್ದು, ಉತ್ತಮ ಆನ್ ರೋಡ್ ಪರ್ಫಾಮೆನ್ಸ್ ನೀಡಲಿದೆ. ಪೂರ್ಣ ಪ್ರಮಾಣದ ಸ್ಪೋರ್ಟ್ ಸೆಡಾನ್ ಗೆ ಸವಾಲೊಡ್ಡ ಬಲ್ಲದು. ಇದರ ಜೊತೆಗೆ ಲ್ಯಾಂಡ್ ರೋವರ್ ನ ಆಫ್ ರೋಡ್ ಸಾಮರ್ಥ್ಯವು ನಿಮಗೆ ಸುಂದರ ಅನುಭವವನ್ನು ನೀಡಬಲ್ಲದು.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಡಿಸೈನ್ ಮತ್ತು ಸ್ಟೈಲ್

ಲ್ಯಾಂಡ್ ರೇಂಜ್ ರೋವರ್ ಸ್ಪೋರ್ಟ್ ಅಪ್ ಡೇಟ್ ಗಿಂತ ಮೊದಲೇ, ಜಾ ಡ್ರಾಪಿಂಗ್ ನಂತೆ ಕಾಣುತ್ತಿತ್ತು. ಈ ಬ್ರಿಟಿಷ್ ಬ್ರಾಂಡ್ ಜಾ ಡ್ರಾಪಿಂಗ್ ಅನ್ನು ತಿರುಚಿದ್ದು ಮೊದಲಿಗಿಂತ ಶಾರ್ಪ್ ಆಗಿ ಮತ್ತು ಉತ್ತಮವಾಗಿರುವುದು ಎದ್ದು ಕಾಣುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಹೊರಭಾಗದಲ್ಲಿ ಮಾಡಿರುವ ಬದಲಾವಣೆಗಳು ರೇಂಜ್ ರೋವರ್ ಸ್ಪೋರ್ಟ್ ಗೆ ಶಾರ್ಪ್ ಆದ ಮತ್ತು ಕ್ಲೀನ್ ಆದ ಲುಕ್ ನೀಡುತ್ತವೆ. ಈ ಹಿಂದಿನ ಮಾದರಿಯ ವೇಲಾರ್ ನ ಪ್ರೇರಣೆಯಿಂದ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಗಳನ್ನು ಅಳವಡಿಸಲಾಗಿದೆ. ಈ ಗ್ರಿಲ್ ಗಳ ಬಳಿ ರೇಂಜ್ ರೋವರ್ ಲೋಗೋವನ್ನು ಹಾಕಲಾಗಿದ್ದು, ಮುಂಭಾಗವನ್ನು ಹೆಚ್ಚು ಆಕರ್ಷಕಗೊಳಿಸಿದೆ. ಈ ಗ್ರಿಲ್ ಗಳ ಎರಡೂ ಬದಿಯಲ್ಲಿ ಸಿಗ್ನೇಚರ್ ಎಲ್ಇಡಿ ಡಿಆರ್‍ಎಲ್ ಗಳನ್ನು ಒಳಗೊಂಡಿರುವ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಟಾಪ್ ಮಾದರಿಗಳಲ್ಲಿ ಎಲ್ಇಡಿ ಡಿಆರ್‍ಎಲ್ ಗಳನ್ನು ಒಳಗೊಂಡಿರುವ ಪಿಕ್ಸೆಲ್ ಲೇಸರ್ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ನೀಡಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಲ್ಯಾಂಡ್ ರೋವರ್ ಮುಂಭಾಗದಲ್ಲಿರುವ ಹಾಗೂ ಹಿಂಭಾಗದಲ್ಲಿರುವ ಬಂಪರ್ ಗಳನ್ನು ಸಹ ಅಪ್ ಡೇಟ್ ಮಾಡಲಾಗಿದೆ. ಎರಡೂ ಬಂಪರ್ ಗಳು ಎರಡೂ ಕಡೆ ಫಾಗ್ ಲೈಟ್ ಗಳನ್ನು ಹೊಂದಿದ್ದು, ಮುಂಭಾಗದಲ್ಲಿರುವ ಬಂಪರ್ ಲಾರ್ಜ್ ಏರ್ ವೆಂಟ್ ಗಳನ್ನು ಹೊಂದಿದ್ದು, ಕೂಲಿಂಗ್ ಗಾಗಿ ಏರ್ ಫ್ಲೋ ಅನ್ನು ಸುಧಾರಿಸಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಇನ್ನೂ ಸೈಡಿನ ಬಗ್ಗೆ ಹೇಳುವುದಾದರೆ, ಸುಮಾರು 5 ಮೀಟರ್ ಉದ್ದವಿದ್ದು, ರೇಂಜ್ ರೋವರ್ ಸ್ಪೋರ್ಟ್ ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದರೆ, ಜನರು ಕಾರಿನತ್ತ ತಿರುಗಿ ನೋಡುವುದು ಖಚಿತ. ಇದಕ್ಕೆ 21 ಇಂಚಿನ ಡೈಮಂಡ್ ಟರ್ನ್ ಶೇಪಿನಲ್ಲಿರುವ ಅಲಾಯ್ ವ್ಹೀಲ್ ಗಳು ಕೊಡುಗೆ ನೀಡಿವೆ. ಮೇಲ್ಭಾಗವು ಕಪ್ಪು ಬಣ್ಣದಲ್ಲಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ ಇದ್ದು, ಹೆಡ್ ಲ್ಯಾಂಪ್ ಗಳಂತೆ, ಡೈನಾಮಿಕ್ ಟರ್ನ್ ಇಂಡಿಕೇಟರ್ ಗಳನ್ನು ಹೊಂದಿದೆ. ಹಿಂಭಾಗದ ಮೇಲೆ ಸ್ಪಾಯಿಲರ್ ಅನ್ನು ಹೊಂದಿದ್ದು, ಸ್ಪೋರ್ಟ್ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಇಂಟೀರಿಯರ್ಸ್, ಫೀಚರ್ಸ್

ರೇಂಜ್ ರೋವರ್ ಒಳಗಡೆ ಹೋಗುತ್ತಿದ್ದಂತೆ 12.3 ಇಂಚಿನ ಇನ್ಸ್ ಟ್ರೂಮೆಂಟ್ ಕಂಸೋಲ್ ಅನ್ನು ಹಿಂಭಾಗದಲ್ಲಿ ಹೊಂದಿರುವ ಸ್ಟೀಯರಿಂಗ್ ವ್ಹೀಲ್ ಗಳು ನಮ್ಮನ್ನು ಸ್ವಾಗತಿಸಿದವು. ಈ ಇನ್ಸ್ ಟ್ರೂಮೆಂಟ್ ಸ್ಕ್ರೀನ್ ನಲ್ಲಿ ವಿವಿಧ ಗ್ರಾಫಿಕ್ ಟ್ರಾನ್ಸಿಷನ್ ಗಳನ್ನು ಸುಲಭವಾಗಿ ಓದಬಹುದಾಗಿದೆ. ವೇಲಾರ್ ನಿಂದ ಪ್ರೇರಣೆ ಹೊಂದಿರುವ ಸ್ಟೀಯರಿಂಗ್ ಟಚ್ ಸೆನ್ಸಿಟಿವ್ ಕಂಟ್ರೋಲ್ ಹೊಂದಿದ್ದು, ಗ್ಲಾಸ್ ಬ್ಲಾಕ್ ಫಿನಿಷಿಂಗ್ ಹೊಂದಿದೆ. ಸ್ಟಾರ್ಟ್, ಸ್ಟಾಪ್ ಬಟನ್ ಗಳು ಸುಲಭವಾಗಿ ಸಿಗುವಂತೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಅಳವಡಿಸಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಡ್ಯಾಶ್ ಬೋರ್ಡ್ ಸಾಫ್ಟ್ ಟಚ್ ಮೆಟಿರಿಯಲ್ ಹೊಂದಿದ್ದು, ದೊಡ್ಡ ರೇಂಜ್ ರೋವರ್ ಮಾಡೆಲ್ ಗಳಂತೆ ವುಡನ್ ಟ್ರಿಮ್ ಗಳನ್ನು ಹೊಂದಿಲ್ಲ. ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಅಗಲವಾಗಿದ್ದು, ನೀವು ಚಾಲನೆ ಮಾಡುತ್ತಿರುವ ಎಸ್‍ಯುವಿ ಯ ಗಾತ್ರದ ಬಗ್ಗೆ ನಿಮಗೆ ಅನುಭವ ನೀಡುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಡ್ಯಾಶ್ ಬೋರ್ಡ್ ಗಳನ್ನು ಎಕ್ಸ್ ಪ್ರೆಸ್ಸೊ ಆಲ್ ಮಂಡ್ ಇಂಟಿರಿಯ ನ ಎಕ್ಸ್ ಪ್ರೆಸ್ಸೊ ಬ್ರೌನ್ ಸೀಟು ಗಳಿಂದ ಫಿನಿಷಿಂಗ್ ಮಾಡಲಾಗಿದೆ. ಇದು ಪ್ರಿಮೀಯಂ ಅನುಭವವನ್ನು ನೀಡುತ್ತದೆ. ದೊಡ್ಡ ವಿಂಡೋ ಗಳು ಪನೋರಮಿಕ್ ಸನ್ ರೂಫ್ ಹೊಂದಿರುವುದರಿಂದ ಕ್ಯಾಬಿನ್ ಗಳು ಏರ್ ನಂತೆ ಫೀಲ್ ನೀಡುತ್ತವೆ. ಎದ್ದು ಕಾಣಿಸುವಂತಿರುವ ಮೆಟಾಲಿಕ್ ಗಳು ಲೆದರ್ ಹೊದಿಕೆಯ ಇಂಟಿರಿಯರ್ ಗಳನ್ನು ಹೊಂದಿದ್ದು, ಪ್ರಿಮೀಯಂ ಫೀಲ್ ನೀಡುತ್ತವೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಇನ್ನು ಡ್ರೈವರ್ ಸೀಟು ಸ್ವಲ್ಪ ಎತ್ತರದಲ್ಲಿರುವಂತೆ ಮಾಡಲಾಗಿದ್ದು, ರಸ್ತೆಯನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲಾಗಿದೆ. ಫ್ಲಶ್ ಸೀಟುಗಳು ಎತ್ತರಿಸಿದ ಅನುಭವವನ್ನು ನೀಡಿ ವಾಹನವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಈ ವಾಹನವು ಎಲ್ಲಾ ಫೀಚರ್ ಗಳ ಮತ್ತು ಎಕ್ವಿಪ್ ಮೆಂಟ್ ಗಳ ಸರಿಯಾಗಿ ಜೋಡಣೆ ಹೊಂದಿದೆ. ಯಾವುದೇ ಜೋಡಣೆಗಳನ್ನು ಹೆಚ್ಚುವರಿಯಾಗಿ ಮಾಡಿಲ್ಲ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಒಳಭಾಗದಲ್ಲಿ ಸ್ಟೀಯರಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನ ಹೊರತಾಗಿ, 10 ಇಂಚಿನ ಸೆಂಟ್ರಲ್ ಕಂಸೋಲ್ ಇದೆ. ಈ ಕಂಸೋಲ್ ನಲ್ಲಿ ಎರಡು ಸ್ಕ್ರೀನ್ ಗಳಿದ್ದು, ಇನ್ ಕಂಟ್ರೋಲ್ ಟಚ್ ಪ್ರೋ ಡ್ಯುವೊ ದೊಡ್ಡದಾಗಿದ್ದು, ಡ್ಯಾಶ್ ಬೋರ್ಡಿಗೆ ಸರಿಯಾಗಿ ಜೋಡಿಸಲಾಗಿದೆ. ಎರಡೂ ಸ್ಕ್ರೀನ್ ಗಳು ಗ್ಲಾಸ್ ಬ್ಲಾಕ್ ಪ್ಯಾನೆಲ್ ಗಳನ್ನು ಹೊಂದಿದ್ದು, ಟಾಪ್ ಸ್ಕ್ರೀನ್ ಗಳ ಜೊತೆಗೆ, ಎದುರಿನಿಂದ ಬರುವ ಬೆಳಕನ್ನು ತಡೆ ಹಿಡಿಯುವಂತೆ ಮಾಡಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಎರಡು ಸ್ಕ್ರೀನ್ ಗಳು ಬಟನ್ ಮತ್ತು ನಾಬ್ ಗಳಿಂದ ಮುಕ್ತವಾಗಿದ್ದು, ಮಧ್ಯದಲ್ಲಿ ಯಾವುದೇ ತೊಂದರೆ ಯಿಲ್ಲದೆ ಸರಳವಾಗಿ, ಸ್ವಚ್ಚವಾಗಿವೆ. ಎರಡೂ ಸ್ಕ್ರೀನ್ ಗಳು ಅನೇಕ ಫಂಕ್ಷನ್ ಗಳನ್ನು ನಿರ್ವಹಿಸುತ್ತವೆ, ಎರಡೂ ಬೇರೆ ಬೇರೆ ಕಾರ್ಯಗಳನ್ನು ನಿಯಂತ್ರಿಸುತ್ತವೆ. ಮೇಲೆ ಇರುವ ಸ್ಕ್ರೀನ್ - ಮ್ಯೂಸಿಕ್, ಫೋನ್ ಕನೆಕ್ಟಿವಿಟಿ, ಇನ್ ಬಿಲ್ಟ್ ಆಪ್ ಮತ್ತು ಜನರಲ್ ಇನ್ಫೊಟೈನ್ ಮೆಂಟ್ ಸೆಟ್ಟಿಂಗ್ ಗಳನ್ನು ನಿಯಂತ್ರಿಸುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಕೆಳಗಡೆ ಇರುವ ಸ್ಕ್ರೀನ್ , ಕ್ಲೈಮೇಟ್ ಕಂಟ್ರೋಲ್, ಸೀಟ್ ಹೀಟಿಂಗ್ ಮತ್ತು ಬೇರೆ ವಾಹನಗಳ ಸೆಟ್ಟಿಂಗ್ ನಿಯಂತ್ರಿಸುತ್ತದೆ. ಇದರ ಜೊತೆಗೆ ಕೆಳಗಿನ ಸ್ಕ್ರೀನ್ ಡ್ರೈವರ್ ಮೋಡ್ ನಲ್ಲಿನ ಪೇಟೆಂಟ್ ಹೊಂದಿರುವ ಆಲ್ ಟೆರೇನ್ ಪ್ರೊಗ್ರೆಸ್ ಕಂಟ್ರೊಲ್ ಸಿಸ್ಟಮ್ ಅನ್ನು ನಿಯಂತ್ರಿಸುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಅನೇಕ ಫೀಚರ್ ಗಳ ಮಧ್ಯೆ ಈ ಟಚ್ ಎದ್ದು ಕಾಣುತ್ತದೆ. ಈ ಸ್ಕ್ರೀನ್ ಗಳು ವಾಹನ ಚಾಲನೆಯಲ್ಲಿದ್ದಗಲೂ ಸ್ಪಷ್ಟವಾಗಿ ಓದಲು ಅನುಕೂಲವಾಗುವಂತೆ ಸ್ಪಷ್ಟವಾಗಿವೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಬಹುತೇಕ ಕಾರು ತಯಾರಕರು ಇತ್ತೀಚಿನ ದಿನಗಳಲ್ಲಿ ತಮ್ಮ ಕಾರುಗಳಲ್ಲಿ ಸಾಮಾನ್ಯವಾಗಿ ನೀಡುತ್ತಿರುವ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಫೀಚರ್ ಗಳನ್ನು ಲ್ಯಾಂಡ್ ರೋವರ್ ತನ್ನ ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ ನೀಡಿಲ್ಲ. ಈ ಕಾರಿನ ಸುತ್ತಲೂ ಆಂಬಿಯಂಟ್ ಲೈಟ್ ಗಳನ್ನು ಅಳವಡಿಸಲಾಗಿದೆ. ಸೆಂಟ್ರಲ್ ಕಂಸೋಲ್ ನ ಸುತ್ತಲೂ ಸಹ ಆಂಬಿಯಂಟ್ ಲೈಟ್ ಗಳನ್ನು ಅಳವಡಿಸಲಾಗಿದೆ. ಇದರಿಂದ ಕಾರಿನ ಲಗ್ಷುರಿ ಇನ್ನೂ ಹೆಚ್ಚಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಕಂಫರ್ಟ್ ಮತ್ತು ಬೂಟ್ ಸ್ಪೇಸ್

ರೇಂಜ್ ರೋವರ್ ಸ್ಫೋರ್ಟಿನ ಕ್ಯಾಬಿನ್ ಹೆಚ್ಚು ಲಗ್ಷುರಿಯಾಗಿದ್ದು, ಸೀಟುಗಳು ಕುಷನ್ ಹೊಂದಿವೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕುಳಿತು ಕೊಳ್ಳುವವರಿಗಾಗಿ ಹೆಚ್ಚು ಜಾಗವನ್ನು ನೀಡಲಾಗಿದೆ. ಈ ಐದು ಸೀಟರ್ ನ ಲಗ್ಷುರಿ ಎಸ್‍ಯುವಿ ಅನೇಕ ಲಗ್ಷುರಿ ಫೀಚರ್ ಗಳನ್ನು ತನ್ನ ಪ್ರಯಾಣಿಕರಿಗಾಗಿ ನೀಡುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಇದರಲ್ಲಿರುವ ಲೆದರ್ ಸೀಟುಗಳ ಪಕ್ಕದಲ್ಲಿರುವ ಬೋಲ್ ಸ್ಟರ್ ಗಳು ಕಾಲುಗಳಿಗೆ ಆರಾಮದಾಯಕ ಅನುಭವ ನೀಡುತ್ತವೆ. ಮುಂಭಾದಲಿರುವ ಪ್ರಯಾಣಿಕರು 16 ತರಹದ ಅಡ್ಜಸ್ಟಬಲ್ ಎಲೆಕ್ಟ್ರಿಕ್ ಸೀಟುಗಳನ್ನು ಹೊಂದಿದ್ದು, ಸೀಟುಗಳ ಕೆಳಭಾಗದಲ್ಲಿ ಕಂಟ್ರೋಲ್ ಗಳನ್ನು ನೀಡಲಾಗಿದೆ. ಎರಡೂ ಸೀಟುಗಳು ಸ್ಟಾಂಡರ್ಡ್ ಆಗಿ ಸೀಟ್ ಹೀಟರ್ ಗಳನ್ನು ಪಡೆಯುತ್ತವೆ. ಬಯಸಿದರೆ ಮಸಾಜಿಂಗ್ ಮತ್ತು ಕೂಲಿಂಗ್ ಫಂಕ್ಷನ್ ಗಳನ್ನು ಹೆಚ್ಚುವರಿಯಾಗಿ ಪಡೆಯಬಹುದು.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಹಿಂಭಾಗದಲ್ಲಿರುವ ಸೀಟುಗಳೂ ಸಹ ಅನೇಕ ವಿಧದ ಸೌಲಭ್ಯಗಳನ್ನು ಹೊಂದಿವೆ. ಅಡ್ಜಸ್ಟ್ ಮಾಡಬಹುದಾದ ರಿಕ್ಲೈನ್ ಗಳನ್ನು ಹೊಂದಿವೆ. ಸೀಟುಗಳು ಸಮವಾಗಿದ್ದು, ಆರಾಮದಾಯಕವಾಗಿರಲು ಹಿಂಭಾಗದ ಪ್ರಯಾಣಿಕರಿಗಾಗಿ ಮಧ್ಯದಲ್ಲಿ ಆರ್ಮ್ ರೆಸ್ಟ್ ನೀಡಲಾಗಿದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಈ ರೇಂಜ್ ರೋವರ್ ಸ್ಪೋರ್ಟ್ ನಲ್ಲಿ ಎಲ್ಲಾ ಕಡೆಯೂ ಸ್ಟೋರೇಜ್ ಗಳನ್ನು ನೀಡಲಾಗಿದೆ. ಅವುಗಳಲ್ಲಿ ಗ್ಲವ್ ಕಂಪಾರ್ಟ್ ಮೆಂಟ್, ಅದರ ಮೇಲೆ ಹೆಚ್ಚುವರಿ ಗ್ಲವ್ ಕಂಪಾರ್ಟ್ ಮೆಂಟ್ ಮತ್ತು ಸೆಂಟ್ರಲ್ ಕಂಸೋಲ್ ನಲ್ಲಿ ಚಿಕ್ಕ ಚಿಕ್ಕ ಜಾಗಗಳನ್ನು, ಬಾಗಿಲ ಬಳಿ, ಮುಂಭಾಗದ ಮತ್ತು ಹಿಂಭಾಗದ ಆರ್ಮ್ ರೆಸ್ಟ್ ಗಳ ಬಳಿ ನೀಡಲಾಗಿದೆ. ರೇಂಜ್ ರೋವರ್ ಸ್ಪೋರ್ಟ್, ಎಲೆಕ್ಟ್ರಾನಿಕ್ ಏರ್ ಸಸ್ಪೆಂಷನ್ ಹೊಂದಿದ್ದು, ಮೂರು ಮಾದರಿಗಳಲ್ಲಿದೊರೆಯುತ್ತದೆ. ಅವುಗಳೆಂದರೆ ಆಕ್ಸೆಸ್ ಹೈಟ್, ನಾರ್ಮಲ್ ಹೈಟ್ ಮತ್ತು ಆಫ್ ರೋಡ್ ಹೈಟ್. ಆಕ್ಸೆಸ್ ಹೈಟ್, ಕಾರನ್ನು ನೆಲದವರಗೆ ತಂದು ಪ್ರಯಾಣಿಕರು ಕಾರನ್ನು ಇಳಿಯಲು ಮತ್ತು ಹತ್ತಲು ಅನುಕೂಲ ಮಾಡುತ್ತದೆ. ನಾರ್ಮಲ್ ಹೈಟ್, ಆನ್ ರೋಡ್ ನಲ್ಲಿ ಚಲಾಯಿಸಲು ಅನುಕೂಲವಾದರೆ, ಆಫ್ ರೋಡ್ ಹೈಟ್ ನಲ್ಲಿ ಆಫ್ ರೋಡ್ ಗಳಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಗೆ ಅನುಕೂಲವಾಗುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಉಳಿದ ಫೀಚರ್ ಗಳಾದ ಫೋರ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಂಬಿಯಂಟ್ ಲೈಟಿಂಗ್ ಗಳು ಸ್ಟಾಂಡರ್ಡ್ ಆಗಿ ದೊರೆಯುತ್ತವೆ. ರೇಂಜ್ ರೋವರ್ ಸ್ಪೋರ್ಟ್ 19 ಸ್ಪೀಕರ್ ಗಳ 825 ಡಬ್ಲೂ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್ ಒಳಗೊಂಡಿದೆ. ಈ ಐದು ಸೀಟರ್ ಗಳ ಲಗ್ಷುರಿ ಎಸ್‍ಯುವಿಯಲ್ಲಿ ಎಲ್ಲಾ ಸೀಟುಗಳನ್ನು ಸರಿಯಾಗಿ ಜೋಡಣೆ ಮಾಡಿರುವ ಕಾರಣದಿಂದ 780 ಲೀಟರ್ ನಷ್ಟು ಬೂಟ್ ಸ್ಪೇಸ್ ನೀಡುತ್ತದೆ. ಹಿಂಭಾಗದಲ್ಲಿರುವ ಸೀಟುಗಳನ್ನು 60:40 ಅನುಪಾತದಲ್ಲಿ ಮಡುಚಿದರೆ 1,686 ಲೀಟರ್ ನಷ್ಟು ಬೂಟ್ ಸ್ಪೇಸ್ ದೊರೆಯಲಿದೆ. ರೇಂಜ್ ರೋವರ್ ಸ್ಪೋರ್ಟ್ ನಲ್ಲಿ ಎಲೆಕ್ಟ್ರಾನಿಕ್ ಆಧಾರಿತ ಟೈಲ್ ಗೇಟ್ ಇದ್ದು, ಟಚ್ ಬಟನ್ ನೊಂದಿಗೆ ಕ್ಲೋಸ್ ಮಾಡ ಬಹುದು.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್ ನ ಗಾತ್ರ ಈ ಕೆಳಗಿನಂತೆ ಇದೆ.

ಉದ್ದಳತೆ ಗಾತ್ರ (ಎಂಎಂಗಳಲ್ಲಿ)
ಉದ್ದ (ಎಂಎಂಗಳಲ್ಲಿ) 4,879
ಅಗಲ (ಎಂಎಂಗಳಲ್ಲಿ) 2,220
ಎತ್ತರ (ಎಂಎಂಗಳಲ್ಲಿ) 1,803
ವ್ಹೀಲ್ ಬೇಸ್ (ಎಂಎಂಗಳಲ್ಲಿ) 2,923
ಬೂಟ್ ಸ್ಪೇಸ್ (ಲೀಟರ್ ಗಳಲ್ಲಿ) 780
ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಎಂಜಿನ್ ನ ದಕ್ಷತೆ ಮತ್ತು ಚಾಲನಾ ಅನುಭವ

ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಅನೇಕ ಎಂಜಿನ್ ಗಳನ್ನು ಹೊಂದಿದೆ. ಅವುಗಳಲ್ಲಿ ನಾವು 3.0 ಲೀಟರಿನ ಟರ್ಬೋ ಚಾರ್ಜ್ ನ ವಿ6 ಡೀಸೆಲ್ ಎಂಜಿನ್ ಹೊಂದಿರುವ, 260 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುವ ವಾಹನವನ್ನು ಚಾಲನೆ ಮಾಡಿದೆವು. ಈ ಎಂಜಿನ್ ನಲ್ಲಿ 8 ಸ್ಪೀಡಿನ ಆಟೋ ಮ್ಯಾಟಿಕ್ ಟ್ರಾನ್ಸ್ ಮಿಷನ್ ಎಂಜಿನ್ ಇದೆ. ರೇಂಜ್ ರೋವರ್ ಸ್ಪೋರ್ಟ್ ಹೆಚ್ಎಸ್ಇ 0 ರಿಂದ 100 ಕಿ.ಮೀ ವೇಗವನ್ನು 7.7 ಸೆಕೆಂಡುಗಳಲ್ಲಿ ಕ್ರಮಿಸಿದರೆ, ಟಾಪ್ ಸ್ಪೀಡ್ ಪ್ರತಿ ಗಂಟೆಗೆ 209 ಆಗಿದೆ. ನಾವು ಚಾಲನೆ ಮಾಡಿದ ಕಾರು ಬೇಸ್ ಎಂಜಿನ್ ಆದರೂ ಅದರಲ್ಲಿ ಯಾವುದೇ ನ್ಯೂನತೆ ಕಂಡು ಬರಲಿಲ್ಲ. ಇದರ ಪವರ್ ಕಡಿಮೆ ಮತ್ತು ಮಧ್ಯಮ ಶ್ರೇಣಿಯಲ್ಲಿದ್ದು, ನಗರಗಳ ಟ್ರಾಫಿಕ್ ನಲ್ಲಿ ಯಾವುದೇ ತೊಂದರೆ ಆಗದಂತೆ ಚಾಲನೆ ಮಾಡ ಬಹುದು. ಇದು ಅತಿ ಕಡಿಮೆ ಎಂದರೆ 1,750 ಆರ್‍‍ಪಿಎಂ ನಲ್ಲಿ 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ನಾವು ರೇಂಜ್ ರೋವರ್ ಸ್ಪೋರ್ಟ್ ಅನ್ನು ಸ್ಪೋರ್ಟಿ ಎಂದು ಕರೆಯಲು ಸಾಧ್ಯವಿಲ್ಲ. ಕೆಳ ಮತ್ತು ಮಧ್ಯಮ ಶ್ರೇಣಿಯಲ್ಲಿ ಪವರ್ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಟ್ರಾನ್ಸ್ ಮಿಷನ್ ಮೆದುವಾಗಿ, ಚುರುಕಾಗಿದ್ದರೂ ತುಂಬಾ ವೇಗವಾಗಿ ಇಲ್ಲ. ಸ್ಟಿಯರಿಂಗ್ ಕಡಿಮೆ ತೂಕ ಹೊಂದಿದ್ದು, ನಗರಗಳಲ್ಲಿ ಚಾಲನೆ ಮಾಡುವುದು ಸರಳವಾಗಲಿದೆ. ವೇಗ ಹೆಚ್ಚಿದಂತೆಲ್ಲಾ ಎಸ್‍ಯುವಿ ಬದಲಾಗುತ್ತಾ ಹೋಗುತ್ತದೆ. ನಿಶಬ್ದ ಮತ್ತು ಶಾಂತವಾದ ಎಂಜಿನ್ ನಿಧಾನದ ಪರ್ಫಾಮೆನ್ಸ್ ನೀಡುತ್ತದೆ. ವೇಗವಾಗಿ ಹೋದಂತೆ ಸ್ಟಿಯರಿಂಗ್ ತೂಕವು ಬದಲಾದಂತಹ ಅನುಭವವಾಗುತ್ತದೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಸ್ಟೀಯರಿಂಗ್ ಸಹ ಅದ್ಭುತ ಅನುಭವ ನೀಡುತ್ತದೆ. ತನ್ನ ಗಾತ್ರ ಮತ್ತು ತೂಕದಿಂದ ಗಮನ ಸೆಳೆಯುತ್ತದೆ. ಈ ಎಸ್‍ಯುವಿಯ ತೂಕವು ಸುಮಾರು 2 ಟನ್ ನಷ್ಟು ಇದೆ. ಉದ್ದವಾಗಿರುವ ರಸ್ತೆಗಳಲ್ಲಿ ರೇಂಜ್ ರೋವರ್ ಸ್ಪೋರ್ಟ್ ದೃಢವಾಗಿ ಮತ್ತು ನಿಶಬ್ದವಾಗಿರುತ್ತದೆ. ಈ ಎಸ್‍ಯುವಿಯಲ್ಲಿರುವ ಎನ್‍ವಿಹೆಚ್ ಲೆವೆಲ್ ಗಳು ಟಾಪ್ ನಾಚ್ ನಲ್ಲಿದ್ದು, ಎಂಜಿನ್ ಇದ್ದರೂ ಇಲ್ಲದಿದ್ದರೂ ನಿಧಾನವಾಗಿ ಶಬ್ದ ಮಾಡುತ್ತವೆ. ಹೈ ವೇಗಳಲ್ಲಿ ಈ ವಾಹನವು ಆರಾಮವಾಗಿ 100 ಕಿ.ಮೀ ವೇಗದಲ್ಲಿ ಸಾಗುತ್ತದೆ. ಏರ್ ಸಸ್ಪೆಂಷನ್ ಚಿಕ್ಕದಾಗಿದ್ದರೂ ರಸ್ತೆಯಲ್ಲಿರುವ ಧೂಳನ್ನೆಲ್ಲಾ ಹೀರುತ್ತದೆ. ಈ ರೇಂಜ್ ರೋವರ್ ಚಾಲಕರಿಗೆ ದೃಢವಾದ ಚಾಲನಾ ಅನುಭವ ನೀಡುತ್ತದೆ, ದೊಡ್ಡದಾಗಿರುವ ಬ್ರೇಕ್ ಗಳು ಈ ಎಸ್‍ಯುವಿ ಯ ವೇಗವನ್ನು ನಿಯಂತ್ರಿಸುತ್ತವೆ.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಎಲ್ಲಾ ಲ್ಯಾಂಡ್ ರೋವರ್ ಕಾರುಗಳಲ್ಲಿರುವಂತೆ ಈ ಕಾರಿನಲ್ಲಿಯೂ ಸಹ ನಾವು ಆಫ್ ರೋಡಿಂಗ್ ಸಾಮರ್ಥ್ಯವನ್ನು ನಿರೀಕ್ಷಿಸಬಹುದು. ಆಫ್ ರೋಡ್ ಮಾದರಿಯನ್ನು ಆಯ್ಕೆ ಮಾಡಿ ಕೊಂಡಲ್ಲಿ ಆರಾಮದಾಯಕವಾಗಿ ಆಫ್ ರೋಡ್ ಗಳಲ್ಲಿ ಪಯಣಿಸಬಹುದು. ಈಗಾಗಲೇ ಹೊಂದಿರುವ ಆಫ್ ರೋಡ್ ಸಾಮರ್ಥ್ಯವನ್ನು ಇನ್ನಷ್ಟು ವಿಧದ ಡ್ರೈವ್ ಮೋಡ್ ಗಳನ್ನು ಒದಗಿಸಿ ಆರಾಮದಾಯಕವಾಗಿಸಿದೆ. ಇದರಲ್ಲಿರುವ ಆಫ್ ರೋಡ್ ವಿಧಗಳೆಂದರೆ, ಮಡ್, ರೈನ್, ಗ್ರಾವೆಲ್, ಸ್ನೋ ಮತ್ತು ಸ್ಯಾಂಡ್. ಇದಿಷ್ಟೇ ಅಲ್ಲದೇ ರೇಂಜ್ ರೋವರ್ ಸ್ಪೋರ್ಟ್ ಡ್ರೈವರ್ ಅನುಕೂಲವಾಗುವಂತಹ ಅನೇಕ ಫೀಚರ್ ಗಳನ್ನು ನೀಡಿದೆ, ಅವುಗಳೆಂದರೆ - ಕ್ರೂಸ್ ಕಂಟ್ರೋಲ್ ಮತ್ತು ಸ್ಪೀಡ್ ಲಿಮಿಟರ್, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪವರ್ ಅಸಿಸ್ಟೆಡ್ ಸ್ಟಿಯರಿಂಗ್, ರೋಲ್ ಸ್ಟಾಬಿಲಿಟಿ ಕಂಟ್ರೊಲ್ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್.

ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಸಮಗ್ರ ವರದಿ

ಎಂಜಿನ್ ಸಾಮರ್ಥ್ಯ 2993cc ಡೀಸೆಲ್
ಸಿಲಿಂಡರ್ ಗಳ ಸಂಖ್ಯೆ

6
ಬಿ ಹೆಚ್ ಪಿ

260
ಟಾರ್ಕ್ 600
ಟ್ರಾನ್ಸ್ ಮಿಷನ್ 8-ಸ್ಪೀಡ್
ಗರಿಷ್ಟ ವೇಗ

209
ತೂಕ (ಕೆ.ಜಿ ಗಳಲ್ಲಿ) 2143
ರಿವ್ಯೂ: ಮತ್ತಷ್ಟು ಹೊಸತನದೊಂದಿಗೆ ಬಂದ ರೇಂಜ್ ರೋವರ್ ಸ್ಪೋರ್ಟ್

ಮಾದರಿಗಳು ಮತ್ತು ಬೆಲೆಗಳು

ನಾವು ಚಾಲನೆ ಮಾಡಿದ ರೇಂಜ್ ರೋವರ್ ಸ್ಪೋರ್ಟ್ ಮಧ್ಯಮ ಶ್ರೇಣಿಯ ಹೆಚ್ ಎಸ್ ಇ ವೇರಿಯಂಟ್, ಇದರ ಹೊರತಾಗಿ ಈ ಎಸ್‍ಯುವಿಯಲ್ಲಿ ಇನ್ನೂ ಆರು ತರಹದ ಶ್ರೇಣಿಗಳಿವೆ ಅವುಗಳೆಂದರೆ - ಎಸ್, ಎಸ್ಇ, ಹೆಚ್ಎಸ್ಇ. ಡೈನಾಮಿಕ್ ಪ್ಯಾಕ್ ಹೊಂದಿರುವ ಹೆಚ್ಎಸ್ಇ, ಆಟೋ ಡೈನಾಮಿಕ್ ಪ್ಯಾಕ್ ಹೊಂದಿರುವ ಬಯೊಗ್ರಾಫಿ ಮತ್ತು ಎಸ್‍ವಿಆರ್.

ಈ ಎಲ್ಲಾ ಶ್ರೇಣಿಗಳು ನಾಲ್ಕು ಮಾದರಿಯ ಎಂಜಿನ್ ಗಳಲ್ಲಿ ದೊರೆಯುತ್ತವೆ. ಎರಡು ಪೆಟ್ರೋಲ್ ಮತ್ತು ಎರಡು ಡೀಸೆಲ್. ಪೆಟ್ರೋಲ್ ಎಂಜಿನ್ ಗಳಲ್ಲಿ 3.0 ಲೀಟರಿನ್ ಸೂಪರ್ ಚಾರ್ಜ್ ನ ವಿ6 ಮತ್ತು 5.0 ಲೀಟರಿನ ಸೂಪರ್ ಚಾರ್ಜ್ ನ ವಿ 8. ಡೀಸೆಲ್ ಎಂಜಿನ್ ನಲ್ಲಿ 3.0 ಲೀಟರಿನ ಟರ್ಬೋ ಚಾರ್ಜ್ ನ ವಿ 6 ಮತ್ತು 4.4 ಲೀಟರಿನ ಸೂಪರ್ ಚಾರ್ಜ್ ನ ವಿ 8. ಎಲ್ಲಾ ಎಂಜಿನ್ ಗಳು ಸ್ಟಾಂಡರ್ಡ್ 8 ಸ್ಪೀಡಿನ ಆಟೋ ಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿವೆ.

ರೇಂಜ್ ರೋವರ್ ಸ್ಪೋರ್ಟ್ ನ ದರಗಳು , ಬೇಸ್ ಮಾದರಿಯ ಎಸ್ ಡೀಸೆಲ್ ವೇರಿಯಂಟ್ ಗೆ ರೂ. 1.03 ಕೋಟಿಯಿಂದ ಶುರುವಾಗಿ, ಟಾಪ್ ಮಾದರಿಯ ಎಸ್‍ವಿಆರ್ ಗಳಿಗೆ ರೂ. 2.05 ಕೋಟಿಗಳವರೆಗೆ ಇರುತ್ತವೆ. ನಾವು ಚಾಲನೆ ಮಾಡಿದ ಮಾದರಿಯು ರೇಂಜ್ ರೋವರ್ ಸ್ಪೋರ್ಟ್ ಹೆಚ್ ಎಸ್ಇಟಿ ಡಿವಿ6 , ಭಾರತದಲ್ಲಿನ ಎಕ್ಸ್ ಶೋ ರೂಂ ದರದಂತೆ ರೂ 1.37 ಕೋಟಿ ಬೆಲೆ ಹೊಂದಿದೆ.ರೇಂಜ್ ರೋವರ್ ಸ್ಪೋರ್ಟ್ ನ ಎಂಜಿನ್ ಗಳು ಈ ಕೆಳಗಿನಂತೆ ಇವೆ.

ಎಂಜಿನ್ ಪವರ್ (ಬಿಹೆಚ್ ಪಿ) ಟಾರ್ಕ್ (ಎನ್ ಎಂ)
3.0-ಲೀಟರ್ V6 ಡೀಸೆಲ್ 260 600
4.4-ಲೀಟರ್ V8 ಡೀಸೆಲ್ 355 740
3.0-ಲೀಟರ್ V6 ಪೆಟ್ರೋಲ್ 296 450
5.0-ಲೀಟರ್ V8 ಪೆಟ್ರೋಲ್ 517/553 625/700

ಸುರಕ್ಷತಾ ಸೌಲಭ್ಯಗಳು

ರೇಂಜ್ ರೋವರ್ ಸ್ಪೋರ್ಟ್ ನಲ್ಲಿರುವ ಸುರಕ್ಷತಾ ಸೌಲಭ್ಯಗಳೆಂದರೆ - ಡ್ರೈವರ್ ಮತ್ತು ಪ್ಯಾಸೆಂಜರ್ ಗಳಿಗಾಗಿ ಏರ್ ಬ್ಯಾಗ್ ಗಳು, ರೋಲ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಇನ್ ಟ್ರೂಷನ್ ಸೆನ್ಸಾರ್, ಗ್ರೆಡಿಯಂಟ್ ಆಕ್ಸೆಲೇರೆಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ಲೇನ್ ಡಿಪಾರ್ ಚರ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್ ಗಳನ್ನು ಹೊಂದಿದೆ.

ಪೈಪೋಟಿ ಮತ್ತು ಪ್ರತಿಸ್ಪರ್ಧೆ

ಲ್ಯಾಂಡ್ ರೇಂಜ್ ರೋವರ್ ಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಪೋರ್ಷೆ ಕೇನ್, ಬಿ ಎಂ ಡಬ್ಲೂ ಎಕ್ಸ್ 6 ಮತ್ತು ಮರ್ಸಿಡಿಸ್ ಬೆಂಜ್ ಜಿ ಎಲ್ ಎಸ್ ಗಳಿಗೆ ಸ್ಪರ್ಧಿಯಾಗಲಿದೆ.

ರೇಂಜ್ ರೋವರ್ ಸ್ಪೋರ್ಟ್ ಗೆ ಹೋಲಿಸಿದರೆ ಬೇರೆ ಬೇರೆ ಮಾದರಿಯ ಪವರ್ ಔಟ್ ಪುಟ್ ಗಳು ಮತ್ತು ಬೆಲೆಗಳ ವಿವರ ಈ ಕೆಳಗಿನಂತೆ ಇದೆ.

ಮಾಡೆಲ್ ಗಳು ಪವರ್/ಟಾರ್ಕ್(ಬಿ ಹೆಚ್ ಪಿ/ಎನ್ ಎಂ) ಆರಂಭಿಕ ಬೆಲೆ(ರೂ.ಗಳಲ್ಲಿ)
ರೇಂಜ್ ರೋವರ್ ಸ್ಪೋರ್ಟ್ 260/600 1.02 ಕೋಟಿ
ಪೋರ್ಷೇ ಕೇನ್ 340/450 1.19 ಕೋಟಿ
ಮಸೆರೆಟಿ ಲವಾಂಟೆ 271/600 1.45 ಕೋಟಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ರೇಂಜ್ ರೋವರ್ ಸ್ಪೋರ್ಟ್ 2018ರಲ್ಲಿ ಮಾಡಿದ ಅಪ್ ಡೇಟ್ ನ ನಂತರ ಸುಧಾರಿತವಾಗಿದೆ. ಲ್ಯಾಂಡ್ ರೋವರ್ ಡಿಸೈನ್ ಗಳನ್ನು ಒಳಗೆ ಮತ್ತು ಹೊರಗೆ ಹೆಚ್ಚು ಆಕರ್ಷಕವಾಗಿ ಮಾಡಿದೆ. ರೇಂಜ್ ರೋವರ್ ಸ್ಪೋರ್ಟ್ ಆನ್ ರೋಡ್ ಮತ್ತು ಆಫ್ ರೋಡ್ ನಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಒಳಗೊಂಡಿದ್ದು, ಹೊಸ ಎಂಜಿನ್ ನೊಂದಿಗೆ ಹೆಚ್ಚು ಕಾರ್ಯ ಕ್ಷಮತೆಯನ್ನು ಹೊಂದಿದೆ.

MOST READ: ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

Most Read Articles

Kannada
English summary
Range Rover Sport Review — The Most Dynamic SUV Of Them All!- Read in Kannada
Story first published: Thursday, May 2, 2019, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X