TATA Punch EV Review-10.99 ಲಕ್ಷಕ್ಕೆ ಟಾಟಾ ಪಂಚ್‌ ಇವಿ: 421 ಕಿಮೀ ರೇಂಜ್‌ಗೆ ಎದುರಾಳಿಗಳು ಧೂಳಿಪಟ

ಭಾರತದ ಇತರ ಎಲೆಕ್ಟ್ರಿಕ್‌ ವಾಹನ ನಿರ್ಮಾಣ ಕಂಪನಿಗಳಿಗೆ ಹೋಲೀಸಿದರೆ ಟಾಟಾ ಮೊಟಾರ್ಸ್‌ ಬಹಳಷ್ಟು ಮುಂದೆ ಇದೆ ಎಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ಟಾಟಾ ಇತ್ತೀಚೆಗೆ ಭಾರತೀಯ ಎಲೆಕ್ಟ್ರಿಕ್‌ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಇಡುತ್ತಿರುವ ಹೆಜ್ಜೆಗಳು. ಅವರ ಈ ಸಾಲಿಗೆ ಇದೀಗ ಮತ್ತೊಂದು ವಾಹನ ಸೇರಿಕೊಂಡಿದೆ.

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ತನ್ನ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿಯಾದ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಅನ್ನು ಬಿಡುಗಡೆ ಮಾಡಿದೆ. ನಾವಿದನ್ನು ಈಗಾಗಲೇ ರಿವ್ಯೂವ್‌ ಮಾಡಿದ್ದು, ಇಂದಿನ ಈ ಲೇಖನದಲ್ಲಿ ಈ ಕುರಿತಾದ ಸಂಪೂರ್ಣ ವಿವರವನ್ನು ನೀಡುತ್ತಿದ್ದೇವೆ. ಪರಿಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ.

TATA Punch EV Review Specifications, Features, Battery And More

ಟಾಟಾ ಪಂಚ್‌ ಇವಿ ಡಿಸೈನ್‌: ಮೊದಲ ನೋಟದಲ್ಲಿ ಟಾಟಾ ಪಂಚ್‌ ಎಲೆಕ್ಟ್ರಿಕ್‌ (TATA Punch EV) ಅನ್ನು ನೋಡಿದರೆ ಥೇಟ್‌ ಟಾಟಾ ಪಂಚ್‌ ಐಸಿಇ ಎಂಜಿನ್‌ ಕಾರಿನಂತೆಯೇ ಕಾಣುತ್ತದೆ. ಹೌದು, ಇದರ ಗಾತ್ರ ಮತ್ತು ಇತರ ಬಹುತೇಕ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು ಪೆಟ್ರೋಲ್‌ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿ ಲಭ್ಯವಿರುವುದೇ ಪ್ರಮುಖವಾದ ಬದಲಾವಣೆ. ಆದರೆ ಇದರಲ್ಲಿ ಆ ಕಾರಿಗಿಂತಲೂ ಹಲವು ಫೀಚರ್‌ಗಳನ್ನು ಸೇರಿಸಲಾಗಿದ್ದು ಇದು ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಎರಡು ಮಾತಿಲ್ಲ.

ಹೊಸ ಟಾಟಾ ಪಂಚ್‌ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್‌ ಸೆಟ್‌ಅಪ್‌ ಅನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿನ ಗ್ರಿಲ್‌ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಇದು ಮಾತ್ರವಲ್ಲದೇ ಕಾರಿನ ಗ್ರಿಲ್‌ನಲ್ಲಿಯೇ ನಿಮಗೆ ಚಾರ್ಜಿಂಗ್‌ ಸಾಕೆಟ್‌ ಸಹ ದೊರಕಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಇಂಬು ನಿಡುತ್ತದೆ ಎನ್ನಬಹುದು.

TATA Punch EV Review Specifications, Features, Battery And More

ಇಷ್ಟು ಮಾತ್ರವಲ್ಲದೇ ಹೊಸ ಟಾಟಾ ನೆಕ್ಸಾನ್‌ನಂತೆ ಈ ಕಾರಿನಲ್ಲೂ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಇದ್ದು, ಈ ಕಾರಿನ ಡಿಸೈನ್‌ ಅನ್ನು ಮತ್ತಷ್ಟು ಪ್ರೀಮಿಯಂ ಗೊಳಿಸುತ್ತಿದೆ. ಇನ್ನು ಈ ಡಿಆರ್‌ಎಲ್‌ನ ಮಧ್ಯ ಕೆಳಭಾಗದಲ್ಲಿಯೇ ಟಾಟಾ ಲೋಗೋ ಸಹ ದೊರಕುತ್ತದೆ. ಇನ್ನು ಈ ಲೋಗೋ ಕಪ್ಪು ಮತ್ತು ಬಿಳುಪು ಫಿನಿಶಿಂಗ್‌ನಲ್ಲಿ ನೀಡಿದ್ದಾರೆ. ಬಂಪರ್‌ ಸಹ ಸಾಧಾರಣ ಪಂಚ್‌ಗಿಂತಲೂ ಕೊಂಚ ವಿಭಿನ್ನವಾಗಿದೆ.

ಇನ್ನು ಈ ಕಾರನ್ನು ಸೈಡ್‌ನಿಂದ ನೋಡುವಾಗ ನಮಗೆ ಎದ್ದು ಕಾಣುವ ವಿಷಯ ಇದರ ೧೬ ಇಂಚ್‌ನ ಡೈಮಂಡ್‌ ಕಟ್‌ ಅಲಾಯ್ ವ್ಹೀಲ್‌ಗಳು. ಇದು ಈ ಕಾರಿನ ಪ್ರೌಢಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ. ಓಆರ್‌ವಿಎಂನಲ್ಲಿ ಕ್ಯಾಮೆರಾಗಳು ಇದ್ದು ಇದು 360 ಡಿಗ್ರಿ ಕ್ಯಾಮೆರಾ ಸೆಟ್‌ಅಪ್‌ಗೆ ಸಹಾಯ ಮಾಡುತ್ತದೆ. ಇನ್ನು ಈ ಕಾರಿನ ಹಿಂಭಾಗದಲ್ಲಿ ಹೆಚ್ಚೇನೂ ಬದಲಾವಣೆಗಳನ್ನು ಮಾಡಲಾಗಿಲ್ಲ. 366 ಲೀಟರ್‌ ಬೂಟ್‌ಸ್ಪೇಸ್‌ ನಮಗೆ ಈ ಕಾರಿನಲ್ಲಿ ಸಿಗುತ್ತದೆ.

TATA Punch EV Review Specifications, Features, Battery And More

ಟಾಟಾ ಪಂಚ್‌ ಇವಿ ಇಂಟೀರಿಯರ್‌: ಈ ಕಾರಿನ ಒಳಭಾಗದಲ್ಲಿ ಗಮನಿಸಿದರೆ ಎಲ್ಲಾ ಸೀಟ್‌ಗಳಲ್ಲಿಯೂ ಅಂಡರ್‌ ಥೈ ಸಪೋರ್ಟ್‌ ಮತ್ತು ಲೆಗ್‌ರೂಮ್‌, ಹೆಡ್‌ ರೂಮ್‌ ಸಾಕಷ್ಟಿದೆ. ಹಿಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವುದು ಸೂಕ್ತ. ಮುಂಭಾಗಕ್ಕೆ ಬಂದರೆ ಈ ಕಾರಿನಲ್ಲಿ ಡ್ಯುಯಲ್‌ ಟೋನ್‌ ಡ್ಯಾಶ್‌ಬೋರ್ಡ್ ಸಿಗುತ್ತದೆ. ಮಧ್ಯಭಾಗದಲ್ಲಿ 10.25 ಇಂಚ್‌ನ ಒಂದು ಇನ್ಫೋಟೈನ್‌ಮೆಂಟ್‌ ಸಿಸ್ಟಂ ಸಿಗುತ್ತಿದ್ದು, ಇದರಲ್ಲಿ ಹದಿನೇಳಕ್ಕೂ ಅಧಿಕ ಆ್ಯಪ್‌ಗಳು ಲಭ್ಯವಿದೆ.

ಇನ್ನು ಚಾಲಕನಿಗೆ ಹೆಚ್ಚು ಸಹಕಾರಿಯಾಗಲು ಈ ಕಾರಿನಲ್ಲಿ 10.25 ಇಂಚ್‌ನ ಇನ್ಸ್ಟ್ರುಮೆಂಟ್‌ ಕ್ಲಸ್ಟರ್ ಸಹ ನೀಡಿದ್ದು, ಇದರಲ್ಲಿ ಕಾರಿನ ಕುರಿತಾದ ಎಲ್ಲಾ ಮಾಹಿತಿಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಎಸಿ ವೆಂಡ್ಸ್‌ಗಳಲ್ಲಿ ಕ್ರೋಮ್‌ ಬಣ್ಣದ ಫಿನಿಶಿಂಗ್‌ ನೀಡಿದ್ದು ಇದರ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಸಿ ಬಟನ್‌ಗಳನ್ನು ಬಿಟ್ಟು ಇತರ ಎಲ್ಲಾ ವಿಷಯಗಳಿಗೂ ಸಹ ಟಚ್ ಪ್ಯಾನೆಲ್‌ ಅನ್ನು ನೀಡಿರುವುದು ಈ ಕಾರಿನ ಅನುಭವವನ್ನು ಪ್ರೀಮಿಯಂ ಗೊಳಿಸುತ್ತದೆ.

TATA Punch EV Review Specifications, Features, Battery And More

ಈ ಕಾರಿನ ಒಳಭಾಗದ ಮತ್ತೊಂದು ಹೈಲೈಟ್ ಎಂದರೆ ಇದರ ಸನ್‌ರೂಫ್‌. ಜೊತೆಗೆ ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಷನ್‌ ವ್ಯವಸ್ಥೆಯನ್ನು ನೀಡಿದ್ದು, ದೊಡ್ಡ ಬಜೆಟ್‌ನ ಕಾರುಗಳ ಫೀಚರ್‌ ಇದೀಗ ಟಾಟಾ ಪಂಚ್‌ನಲ್ಲೂ ಲಭ್ಯವಾಗಿದೆ. ಆದರೆ ಸೀಟ್‌ಗಳಲ್ಲಿ ಯಾವುದೇ ಪವರ್‌ ಅಡ್ಜಸ್ಟ್‌ಮೆಂಟ್‌ ಲಭ್ಯವಾಗಿಲ್ಲ ಎಂಬುವುದನ್ನೂ ಸಹ ನಾವು ಗಮನಿಸಬೇಕಿದೆ.

ಈ ಕಾರಿನ ಸ್ಟಿಯರಿಂಗ್‌ ವ್ಹೀಲ್‌ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಇತ್ತೀಚೆಗೆ ಬಿಡುಗಡೆಯಾದ, ಸಫಾರಿ, ಹ್ಯಾರಿಯರ್‌ ಮತ್ತು ನೆಕ್ಸಾನ್‌ನಲ್ಲಿ ಇರುವಂತಹ ಇಲ್ಯುಮಿನೇಟೆಡ್‌ ಟಾಟಾ ಲೋಗೋ ಸಿಗುತ್ತದೆ. ಕಾರನ್ನು ಆನ್‌ ಮಾಡಿದ ಕೂಡಲೇ ಅನಿಮೇಷನ್‌ ಮುಖಾಂತರ ಸ್ಟಿಯರಿಂಗ್‌ನಲ್ಲಿ ಟಾಟಾ ಲೋಗೋ ಮಿನುಗಿ ಬರುವುದನ್ನು ಕಾಣಬಹುದಾಗಿದೆ.

TATA Punch EV Review Specifications, Features, Battery And More

ಟಾಟಾ ಪಂಚ್‌ ಇವಿ ಬ್ಯಾಟರಿ ಮತ್ತು ಪವರ್‌‌: ಟಾಟಾ ಮೋಟಾರ್ಸ್‌ ಈ ಕಾರಿಗೆ ಎರಡು ವೇರಿಯಂಟ್‌ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್‌ ಇವಿ ಮತ್ತು ಇನ್ನೊಂದು ಟಾಟಾ ಪಂಚ್‌ ಇವಿ ಲಾಂಗ್‌ ರೇಂಜ್‌. ಟಾಟಾ ಪಂಚ್‌ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್‌ ನೀಡುವುದರ ಜೊತೆಗೆ 80.46bhp/ 114Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ.

ಟಾಟಾ ಪಂಚ್‌ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್‌ ರೇಂಜ್‌ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್‌ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

TATA Punch EV Review Specifications, Features, Battery And More

ಇನ್ನು ಟಾಟಾ ಪಂಚ್ ಇವಿಯ ಎಲ್ಲಾ ವೇರಿಯಂಟ್‌ಗಳಲ್ಲಿಯೂ 3.3kWh ಚಾರ್ಜರ್‌ ಜೊತೆಗೆ ಬರುತ್ತಿದ್ದು ಇದರ ಸಹಾಯದಿಂದ ಈ ಕಾರು ಸಂಪೂರ್ಣ ಚಾರ್ಜ್‌ ಆಗಲು ಬೇಸ್‌ ವೇರಿಯಂಟ್‌ 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ವೇರಿಯಂಟ್ 13.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 7.2kWh ಫಾಸ್ಟ್‌ ಚಾರ್ಜಿಂಗ್‌ ಆಯ್ಕೆಯೂ ಸಹ ಲಭ್ಯವಿದ್ದು ಇದರ ಸಹಾಯದಿಂದ ಬೇಸ್‌ ವೇರಿಯಂಟ್‌ 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಟಾಟಾ ಪಂಚ್‌ ಇವಿಯ ಆಕ್ಸಿಲರೇಷನ್‌‌ ನೋಡುವುದಾದರೆ, 0-100km/h ತಲುಪಲು ಇದು ಕೇವಲ 9.5 ಸೆಕೆಂಡ್‌ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದ್ದು, ಇದರ ಟಾಪ್‌ ಸ್ಪೀಡ್‌ 140km/h. ಇನ್ನು ಈ ಕಾರಿನಲ್ಲಿ ಇಕೋ, ಸ್ಪೋರ್ಟ್ಸ್ ಮತ್ತು ಸಿಟಿ ಎಂಬ ಮೂರು ಡ್ರೈವಿಂಗ್‌ ಮೋಡ್‌ಗಳು ಸಹ ದೊರಕುತ್ತದೆ. ಇದರಲ್ಲಿ ರೀಜೆನ್‌ ಬ್ರೇಕಿಂಗ್‌ ವ್ಯವಸ್ಥೆಯೂ ದೊರಕುತ್ತದೆ.

TATA Punch EV Review Specifications, Features, Battery And More

ಸೇಫ್ಟಿ ಮತ್ತು ಫೀಚರ್‌ಗಳು: ಈಗಾಗಲೇ ಇದರಲ್ಲಿರುವ ಹಲವಾರು ಫೀಚರ್‌ಗಳನ್ನು ಮೇಲೆ ತಿಳಿಸಲಾಗಿದ್ದು ಇದನ್ನು ಹೊರತು ಪಡಿಸಿ, ಈ ಕಾರಿಲ್ಲಿ ಆರು ಏರ್‌ ಬ್ಯಾಗ್‌ಗಳು ಸಹ ಸಿಗುತ್ತದೆ. ಇದರ ಜೊತೆಗೆ ಎಬಿಎಸ್‌ ಮತ್ತು ಇಬಿಡಿ, ಡಿಸ್ಕ್‌ ಬ್ರೇಕ್‌ಗಳು, ಹಿಲ್‌ ಡಿಸೆಂಟ್‌ ಕಂಟ್ರೋಲ್‌, ಹಿಲ್‌ ಹೋಲ್ಡ್‌ ಕಂಟ್ರೋಲ್‌ ಮತ್ತು ಬ್ಲೈಂಡ್‌ ಸ್ಪಾಟ್‌ ವ್ಯೂವ್‌ ಮಿರರ್‌ಗಳು ಲಭ್ಯವಿದೆ.

ಟಾಟಾ ಮೋಟಾರ್ಸ್‌ ಈ ಹೊಸ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಅನ್ನು ಹೊಸ ಒಂದು ಪ್ಲಾಟ್‌ ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದ್ದು, ಇದರ ಇತರ ಕಂಪನಿಗಳಿಗೆ ಪ್ರಭಲ ಪ್ರತಿಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಸುಮಾರು 10.99 lakh (ex-showroom) ಇಂದು ಆರಂಭವಾಗುವ ಈ ಕಾರು ಇವಿ ಕ್ಷೇತ್ರದಲ್ಲಿ ಟಾಟಾಗೆ ಹೊಸ ಮೈಲುಗಲ್ಲು ಸ್ಥಾಪಿಸುವಲ್ಲಿ ಸಹಕಾರಿಯಾಗದೇ ಇರದು ಎಂಬುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, January 23, 2024, 16:00 [IST]
English summary
Tata punch ev review specifications features battery and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+