Just In
Don't Miss!
- News
ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: 2 ಪ್ರಶಸ್ತಿ ಗೆದ್ದ ಹೆರಿಟೇಜ್ ಫುಡ್ಸ್
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Movies
ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Technology
ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್
- Lifestyle
ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
13,348 ಯುನಿಟ್‍ಗಳನ್ನು ರಿಕಾಲ್ ಮಾಡಿದ ಯಮಹಾ
ಮುನ್ನೆಚ್ಚರಿಕಾ ಕ್ರಮವಾಗಿ, ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಯಮಹಾ ಭಾರತದ ಮಾರುಕಟ್ಟೆಯಲ್ಲಿರುವ ಎಫ್‌ಝಡ್ 25 ಹಾಗೂ ಫೇಜರ್ 25 ಬೈಕುಗಳನ್ನು ರಿಕಾಲ್ ಮಾಡಿದೆ. ಎಂಜಿನ್ ಹೆಡ್ ಕವರ್ ಬೋಲ್ಟ್ ಸಡಿಲವಾಗಿ ಉಂಟಾಗುವ ಸಮಸ್ಯೆಗಳನ್ನು ಸರಿಪಡಿಸಲು ಯಮಹಾ ಕಂಪನಿಯು ತಾನೇ ಸ್ವತಃ ಈ ರಿಕಾಲ್‍ಗೆ ಮುಂದಾಗಿದೆ.

ಯಮಹಾ ಕಂಪನಿಯ ಪ್ರಕಾರ, ಎಫ್‌ಝಡ್ 25 ಬೈಕಿನ 12,620 ಯುನಿಟ್ ಹಾಗೂ ಫೇಜರ್ 25 ಬೈಕಿನ 728 ಯುನಿಟ್ ಸೇರಿದಂತೆ ಒಟ್ಟು 13,348 ಯುನಿಟ್‌ಗಳಲ್ಲಿ ದೋಷ ಕಂಡುಬಂದಿದೆ. ಯಮಹಾ ಕಂಪನಿಯು ಈ ಬೈಕುಗಳ ಮಾಲೀಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಿದೆ.

ಈ ಬೈಕುಗಳಲ್ಲಿ ಕಂಡು ಬಂದಿರುವ ದೋಷವನ್ನು ಯಮಹಾ ಕಂಪನಿಯ ಅಧಿಕೃತ ಡೀಲರ್‍ಗಳ ಬಳಿ ಉಚಿತವಾಗಿ ಸರಿಪಡಿಸಲಾಗುವುದು. ಈ ಸಮಸ್ಯೆಯ ಬಗ್ಗೆ ಹೇಳುವುದಾದರೆ, ಈ ಸಮಸ್ಯೆಯು ಎಂಜಿನ್ ಹೆಡ್‍ನ ಕ್ಯಾಮ್ ಕವರ್‌ನಲ್ಲಿ ಉಂಟಾಗಿದೆ.

ದೋಷ ಉಂಟಾಗಿರುವ ಜಾಗದಲ್ಲಿ ಗ್ಯಾಸ್ಕೆಟ್ ಹಾಗೂ ಒ-ರಿಂಗ್ ಅನ್ನು ಹೊಸ ಬೋಲ್ಟ್ ನಿಂದ ಬದಲಿಸಿ, ಲೋಕ್ಟೈಟ್ ಎಂಬ ಅಡೆಸಿವ್‍ನಿಂದ ಮುಚ್ಚಬೇಕು. ಈ ಬೋಲ್ಟ್‌ಗಳು ಸಡಿಲವಾಗಿ ಬೈಕುಗಳು ಚಾಲನೆಯಲ್ಲಿರುವಾಗ ಎಂಜಿನ್‌ಗೆ ಬಿದ್ದರೆ, ಎಂಜಿನ್ ಸೀಜ್ ಆಗುತ್ತದೆ.

ಆದ ಕಾರಣ, ಆದಷ್ಟು ಬೇಗ ನಿಮ್ಮ ಬಳಿಯಿರುವ ಯಮಹಾ ಬೈಕ್ ಅನ್ನು ಹತ್ತಿರದಲ್ಲಿರುವ ಅಧಿಕೃತ ಯಮಹಾ ಅಧಿಕೃತ ಸೇವಾ ಕೇಂದ್ರಕ್ಕೆ ಕೊಂಡೊಯ್ಯಿರಿ. ಈ ಸಮಸ್ಯೆಯನ್ನು 10ರಿಂದ 20 ನಿಮಿಷಗಳಲ್ಲಿ ಸರಿಪಡಿಸಲಾಗುವುದು.

ಯಮಹಾ ಕಂಪನಿಯು ಮುಂದಿನ ತಿಂಗಳು ಬಿಎಸ್ 6 ಎಂಜಿನ್ ಹೊಂದಿರುವ ಆರ್ 15 ವಿ 3.0 ಹಾಗೂ ಫ್ಯಾಸಿನೊಗಳನ್ನು ಬಿಡುಗಡೆಗೊಳಿಸಲಿದೆ. ಯಮಹಾ ಕಂಪನಿಯು ಯಾವಾಗಲೂ ತನ್ನ ವಾಹನಗಳ ಗುಣಮಟ್ಟಕ್ಕೆ ಹಾಗೂ ಸುರಕ್ಷತೆಗೆ ಬದ್ಧವಾಗಿದೆ.

ಈ ಬದ್ಧತೆಗೆ ಅನುಗುಣವಾಗಿ, ಯಮಹಾ ತಕ್ಷಣವೇ ಜಾರಿಗೆ ಬರುವಂತೆ ಭಾರತದಲ್ಲಿರುವ ಯಮಹಾ ಎಫ್‌ಝಡ್ 25 ಹಾಗೂ ಯಮಹಾ ಫೇಜರ್ 25 ಬೈಕುಗಳನ್ನು ರಿಕಾಲ್ ಮಾಡಿದೆ. ಅದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

2018ರ ಜೂನ್ ನಂತರ ತಯಾರಾದ ಎಫ್‌ಝಡ್ 25 ಹಾಗೂ ಫೇಜರ್ 25 ಬೈಕುಗಳಲ್ಲಿರುವ ಹೆಡ್ ಕವರ್ ಬೋಲ್ಟ್ ಸಡಿಲಗೊಳಿಸುವಿಕೆ ಸಮಸ್ಯೆಯನ್ನು ಸರಿಪಡಿಸಲು ಈ ಸ್ವಯಂಪ್ರೇರಿತ ರಿಕಾಲ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ವಾಹನಗಳಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸುವುದು ಅನುಕೂಲಕರವಾಗಿದೆ ಹಾಗೂ ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಯಮಹಾ ಕಂಪನಿಯು ಡೀಲರ್ ಪಾಲುದಾರರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ವಾಹನಗಳಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಈ ರೀತಿಯ ಸಮಸ್ಯೆಗಳು ಎದುರಾದಾಗ ಕಂಪನಿಗಳೇ ಸ್ವತಃ ಮುಂದೆ ಬಂದು ವಾಹನಗಳನ್ನು ರಿಕಾಲ್ ಮಾಡುತ್ತವೆ. ಕೆಲ ತಿಂಗಳ ಹಿಂದಷ್ಟೇ ಮಾರುತಿ ಸುಜುಕಿ ಕಂಪನಿಯು ಸಹ ತನ್ನ ವಾಹನಗಳನ್ನು ರಿಕಾಲ್ ಮಾಡಿತ್ತು.