ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಯಮಹಾ ಕಂಪನಿಯು ಭಾರತದಲ್ಲಿರುವ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿಗಳ ಪೈಕಿ ಒಂದಾಗಿದೆ. ಯಮಹಾ ಕಂಪನಿಯು ತನ್ನ ಬೈಕ್‍‍ಗಳನ್ನು ಯುವ ಜನತೆಯನ್ನು ಗಮನದಲ್ಲಿಟ್ಟಿಕೊಂಡು ಉತ್ಪಾದಿಸುತ್ತದೆ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಯಮಹಾ ಕಂಪನಿಯು ತನ್ನ ಟೆನಾರೆ 700 ಬೈಕ್ ಅನ್ನು ಅಡ್ವೆಂಚರ್ ಬೈಕಿನ ರೀತಿ ಅಪ್‍‍ಗ್ರೇಡ್‍‍ಗೊಳಿಸುತ್ತಿರುವುದಾಗಿ ತಿಳಿಸಿದೆ. ಅಡ್ವೆಂಚರ್ ಬೈಕ್ ಪ್ರಿಯರನ್ನು ಆಕರ್ಷಿಸುವ ಉದ್ದೇಶದಿಂದ ಈ ಬೈಕ್ ಅನ್ನು ಅಪ್‍‍ಗ್ರೇಡ್ ಮಾಡುತ್ತಿರುವುದಾಗಿ ಯಮಹಾ ತಿಳಿಸಿದೆ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಬೈಕ್ ಪ್ರಿಯರು ಟೆನಾರೆ ಮಾದರಿಯಲ್ಲಿ ಎರಡು ಆಯ್ಕೆಗಳನ್ನು ಪಡೆಯಲಿದ್ದಾರೆ. ಈ ಬೈಕ್ ಹೊಸ ವಿನ್ಯಾಸದೊಂದಿಗೆ ಮಧ್ಯಮ ಗಾತ್ರದ ತೂಕವನ್ನು ಹೊಂದಿರಲಿದೆ. ಈ ವಿಷಯವನ್ನು ಬೈಕ್ ಉತ್ಪಾದನಾ ಘಟಕದ ಅಧ್ಯಕ್ಷರಾದ ಯೊಗಾಶಿರೊ ಶಿರೈಶಿರವರು ಖಚಿತಪಡಿಸಿದ್ದಾರೆ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಇತ್ತೀಚಿನ ದಿನಗಳಲ್ಲಿ ಅಡ್ವೆಂಚರ್ ಬೈಕ್‍‍ಗಳು ಹೆಚ್ಚು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದರು. ಟೆನಾರೆ 700 ಬೈಕ್ ಅನ್ನು ಬೇರೆ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಈ ಬೈಕ್ ಅನ್ನು ಅಡ್ವೆಂಚರ್ ಮಾದರಿಯಲ್ಲಿ ಬಿಡುಗಡೆಗೊಳಿಸಬೇಕೆಂಬ ಗ್ರಾಹಕರ ಬೇಡಿಕೆಯ ಹಿನ್ನೆಲೆಯಲ್ಲಿ ಟೆನಾರೆ 700 ಬೈಕ್ ಅನ್ನು ಅಡ್ವೆಂಚರ್ ಬೈಕ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಭಿವೃದ್ಧಿಪಡಿಸಲಾಗುತ್ತಿರುವ ಟೆನಾರೆ 700 ಬೈಕಿನಲ್ಲಿ ದೊಡ್ಡ ಗಾತ್ರದ ಫ್ಯೂಯಲ್ ಟ್ಯಾಂಕ್ ಇರಲಿದೆ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಇದರ ಜೊತೆಗೆ ಅದರ ಸಸ್ಪೆಂಷನ್ ಹಾಗೂ ಬಿಡಿಭಾಗಗಳನ್ನು ಅಡ್ವೆಂಚರ್ ಬೈಕಿಗೆ ಅನುಗುಣವಾಗಿ ಅಳವಡಿಸಲಾಗುವುದು. ಎಲ್ಲಾ ಅಡ್ವೆಂಚರ್ ಬೈಕ್‍‍ಗಳಲ್ಲಿರುವಂತಹ ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಸ ಟೆನಾರೆ 700 ಅಡ್ವೆಂಚರ್ ಬೈಕಿನಲ್ಲಿ ಅಳವಡಿಸುವ ಸಾಧ್ಯತೆಗಳಿಲ್ಲ.

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಈ ಫೀಚರ್ ಹೊಂದಿಲ್ಲದ ಟೆನಾರೆ ಬೈಕ್ ಅನ್ನು ಎಕ್ಸ್ ಟ್ರೀಂ ಆವೃತ್ತಿಗೆ ಬದಲಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಯಮಹಾ ಕಂಪನಿಯು ಈ ಬೈಕ್ ಅನ್ನು ಭಾರತಕ್ಕಾಗಿ ಅಭಿವೃದ್ಧಿಪಡಿಸುತ್ತಿಲ್ಲ. ಈ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದೇ ಇಲ್ಲವೇ ಎಂಬುದನ್ನು ಯಮಹಾ ಕಂಪನಿಯು ಖಚಿತಪಡಿಸಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಯಮಹಾ ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸರಣಿಯ ಎಲ್ಲಾ ವಾಹನಗಳನ್ನು ಬಿಎಸ್ 6 ನಿಯಮಕ್ಕೆ ಅನುಸಾರವಾಗಿ ಅಪ್‍‍ಗ್ರೇಡ್‍‍ಗೊಳಿಸುವತ್ತ ನಿರತವಾಗಿದೆ. ಯಮಹಾ ಕಂಪನಿಯು ಇತ್ತೀಚಿಗಷ್ಟೇ ಆರ್ 15 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಈ ಬೈಕಿನ ಬೆಲೆಯು ರೂ.4,000ದಷ್ಟು ಏರಿಕೆಯಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಯಮಹಾ ಆರ್ 15 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.46 ಲಕ್ಷಗಳಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಕಾರಣಕ್ಕೆ ಹೊಸ ಆರ್ 15 ಬೈಕಿನ ಬೆಲೆಯಲ್ಲಿ ಏರಿಕೆಯಾಗಿದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲಿದೆ ಯಮಹಾ

ಇದನ್ನು ಹೊರತು ಪಡಿಸಿ ಆರ್ 15 ಬೈಕಿನಲ್ಲಿ ಬೇರೆ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಯಮಹಾ ಆರ್ 15 ಬೈಕಿನ ಮಾರಾಟಕ್ಕಾಗಿ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಇದೇ ತಿಂಗಳ ಮೂರನೇ ವಾರದಿಂದ ಬೈಕ್‍‍ಗಳನ್ನು ವಿತರಿಸಲಾಗುವುದು.

Article Published On: Thursday, December 12, 2019, 12:04 [IST]
English summary
Yamaha working on an extreme version of Tenere 700 adventure bike - Read in Kannada
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+