ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಯಮಹಾ ಕಂಪನಿಯು ತನ್ನ ಎಕ್ಸ್‌ಎಸ್‌ಆರ್ 155 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಎಕ್ಸ್‌ಎಸ್‌ಆರ್ 155 ಬೈಕ್ ಅನ್ನು ಈಗಾಗಲೇ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಗಾಡಿವಾಡಿ ವರದಿಗಳ ಪ್ರಕಾರ, ಈ ಬೈಕ್ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಎಕ್ಸ್‌ಎಸ್‌ಆರ್ 155, ಯಮಹಾ ಕಂಪನಿಯ ಸ್ಪೋರ್ಟ್ ಹೆರಿಟೇಜ್ ಸರಣಿಯಲ್ಲಿರುವ ಚಿಕ್ಕ ಬೈಕ್ ಆಗಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಕ್ಲಾಸಿಕ್ ರೆಟ್ರೊ ವಿನ್ಯಾಸ ಹಾಗೂ ಆಧುನಿಕ ಟಚ್ ಹೊಂದಿರುವ ಯಮಹಾ ಎಕ್ಸ್‌ಎಸ್‌ಆರ್ 155ರ ಜಾಗತಿಕ ಮಾದರಿಯ ಬೈಕ್ ಆಗಿದೆ. ಈ ಬೈಕ್ ರೌಂಡ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ರೆಟ್ರೊ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಲು ಟೇಲ್ ಲೈಟ್‌ಗಳನ್ನು ಹೊಂದಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಈ ಬೈಕಿನಲ್ಲಿ ಸಿಂಗಲ್ ಪೀಸ್ ಸೀಟ್‍‍ನ ಜೊತೆಗೆ ಪಿಲಿಯನ್ ಗ್ರಾಬ್ ಬೆಲ್ಟ್ ಅನ್ನು ಮಧ್ಯದಲ್ಲಿ ನೀಡಲಾಗಿದೆ. ಈ ಬೈಕ್ ಸಿಂಗಲ್ ಪಾಡ್ ಫುಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಹಲವಾರು ಮಾಹಿತಿಗಳನ್ನು ನೀಡುತ್ತದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಈ ಮಾಹಿತಿಗಳಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಹಾಗೂ ಟ್ರಿಪ್ ಇಂಡಿಕೇಟರ್‍‍ಗಳೂ ಸೇರಿವೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿರುವ ಕ್ಲೀನ್ ಲೇಔ‍‍ಟ್‍‍ನಿಂದ ಬೈಕ್ ಸವಾರನು ಸುಲಭವಾಗಿ ಮಾಹಿತಿಯನ್ನು ಓದಬಹುದಾಗಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಈ ಬೈಕಿನಲ್ಲಿರುವ ಎಂಜಿನ್ ಅನ್ನು ಎಂಟಿ 15 ಹಾಗೂ ಆರ್15 ವಿ3.0 ಬೈಕುಗಳಿಂದ ಪಡೆಯಲಾಗಿದೆ. ರೆಟ್ರೊ ಶೈಲಿಯ ಈ ಬೈಕ್ ಯಮಹಾದ ವಿವಿಎ ತಂತ್ರಜ್ಞಾನದ 155 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 18.9 ಬಿಹೆಚ್‌ಪಿ ಪವರ್ ಹಾಗೂ 14.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಈ ಎಂಜಿನ್‍‍ನಲ್ಲಿರುವ 6 ಸ್ಪೀಡಿನ ಗೇರ್‌ಬಾಕ್ಸ್‌ ಸ್ಲಿಪ್ ಹಾಗೂ ಅಸಿಸ್ಟ್ ಕ್ಲಚ್‌ಗಳನ್ನು ಹೊಂದಿದೆ. ಬೈಕ್ ಸವಾರಿ ಮಾಡುವಾಗ ಗರಿಷ್ಠ ಬಿಗಿತವನ್ನು ನೀಡಲು ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಯಮಹಾ ಕಂಪನಿಯ ಸ್ಟೀಲ್-ಡೆಲ್ಟಾಬಾಕ್ಸ್ ಫ್ರೇಮ್ ಅಳವಡಿಸಲಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಈ ಬೈಕಿನ ಸಸ್ಪೆಂಷನ್‍‍ಗಾಗಿ ಮುಂಭಾಗದಲ್ಲಿ ಅಪ್‌ಸೈಡ್-ಡೌನ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಬ್ರೇಕುಗಳಿಗಾಗಿ ಬೈಕಿನ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಈ ಬೈಕಿನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಬೈಕಿನ ಸ್ಪೆಸಿಫಿಕೇಶನ್‍‍ಗಳನ್ನೇ ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕ್ ಹೊಂದುವ ಸಾಧ್ಯತೆಗಳಿವೆ. ಆದರೆ ಆರ್ 15 ವಿ3.0 ಬೈಕಿನಲ್ಲಿರುವಂತಹ ಸಾಂಪ್ರದಾಯಿಕ ಫೋರ್ಕ್ ಸಸ್ಪೆಂಷನ್ ಅನ್ನು ಈ ಬೈಕಿನ ಮುಂಭಾಗದಲ್ಲಿ ಅಳವಡಿಸುವ ಸಾಧ್ಯತೆಗಳಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಯಮಹಾ ತನ್ನ ಬಿಎಸ್6 ಮಾದರಿಯ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಯಮಹಾ ಆರ್ 15 ಬಿಎಸ್ 6 ಬೈಕಿನ ಕೆಲವು ದಾಖಲೆಗಳು ಇಂಟರ್‍‍ನೆಟ್‍‍ನಲ್ಲಿ ಸೋರಿಕೆಯಾಗಿವೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಯಮಹಾ ಎಕ್ಸ್‌ಎಸ್‌ಆರ್ 155

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಹೊಸ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಎಕ್ಸ್‌ಎಸ್‌ಆರ್ 155 ರೆಟ್ರೊ ವಿನ್ಯಾಸದ ಆಧುನಿಕ ಬೈಕ್ ಆಗಿದೆ. ಈ ಸೆಗ್‍‍ಮೆಂಟಿನಲ್ಲಿ ರೆಟ್ರೊ ಶೈಲಿಯ ಹಲವಾರು ಬೈಕುಗಳು ಬಿಡುಗಡೆಯಾಗುತ್ತಿವೆ. ಆದರೆ ಈ ಬೈಕುಗಳು ಯಶಸ್ಸನ್ನು ಕಾಣಬೇಕಾದರೆ ಅವುಗಳ ಬೆಲೆಯು ಮುಖ್ಯವಾಗುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha XSR 155 Could Be Launched In India On December 19 - Read in Kannada
Story first published: Saturday, October 26, 2019, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X