ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಹೋಂಡಾದ ಹೊಸ ಕ್ವಾರ್ಟರ್ ಲೀಟರ್ ಬೈಕ್ ಹೆಚ್ಚು ಎಂಜಿನ್ ಪವರ್ ಹಾಗೂ ಹೊಸ ತಂತ್ರಜ್ಞಾನವನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಬೈಕ್‌ನಲ್ಲಿ 249 ಸಿಸಿ ಪ್ಯಾರೆಲಲ್-ಟ್ವಿನ್, 8-ವಾಲ್ವ್, ಡಿಒಸಿಹೆಚ್, ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಈ ಎಂಜಿನ್ 12,500 ಆರ್‌ಪಿಎಂನಲ್ಲಿ 38 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 23 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 249 ಸಿಸಿ ಎಂಜಿನ್‌ ಹೊಂದಿರುವ 2020 ಸಿಬಿಆರ್ 250 ಆರ್ ಆರ್ ಬೈಕಿನಲ್ಲಿ ಹೊಸ ವಿನ್ಯಾಸದ ಪಿಸ್ಟನ್ ಅಳವಡಿಸಲಾಗಿದೆ. ಈ ಬೈಕ್ ಅನ್ನು ಭಾರತದಲ್ಲಿ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಎಂಜಿನ್ ಔಟ್ ಪುಟ್ ಉತ್ಪಾದನೆಯು 38 ಬಿಹೆಚ್‌ಪಿಯಿಂದ 41 ಬಿಹೆಚ್‌ಪಿಗೆ ಏರಿದೆ. ಹೋಂಡಾ ಕಂಪನಿಯ ಈ ಹೊಸ ಬೈಕ್ ಕವಾಸಕಿ ಕಂಪನಿಯ ಝಡ್‌ಎಕ್ಸ್ 25 ಆರ್ ಬೈಕಿಗೆ ಪೈಪೋಟಿ ನೀಡಲಿದೆ. ಕವಾಸಕಿ ಝಡ್‌ಎಕ್ಸ್ 25 ಬೈಕಿನಲ್ಲಿರುವ ಎಂಜಿನ್ 41 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಕವಾಸಕಿಯ ಈ ಬೈಕಿನಲ್ಲಿ 250 ಸಿಸಿ ಸ್ಟ್ಯಾಂಡರ್ಡ್ ಇನ್-ಲೈನ್ 4-ಸಿಲಿಂಡರ್ ಹೈ-ರಿವೈವಿಂಗ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 45 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಕವಾಸಕಿ ಕಂಪನಿಯು ಈ ಹೊಸ ಬೈಕ್ ಅನ್ನು ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್ ಸ್ಲಿಪ್ಪರ್ ಕ್ಲಚ್ ಹಾಗೂ 3 ಬಿಹೆಚ್‌ಪಿ ಪವರ್ ಉತ್ಪಾದಿಸುವ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಗಳನ್ನು ಹೊಂದಿರಲಿದೆ. ಹೋಂಡಾದ ಈ ಹೊಸ ಕ್ವಾರ್ಟ್-ಲೀಟರ್ ಬೈಕ್ ಸ್ಮಾರ್ಟ್ ಕೀ ಸಿಸ್ಟಂ ಅನ್ನು ನೀಡುತ್ತದೆ. ಈ ಸಿಸ್ಟಂ ಕೀ ಲೆಸ್ ಇಗ್ನಿಷನ್ ಒದಗಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಕೀ ಫ್ಯಾಬ್‌ನಲ್ಲಿರುವ ಲಾಕ್ ಬಟನ್ ಮೂಲಕ ಬೈಕ್ ಮಾಲೀಕರು ಹ್ಯಾಂಡಲ್‌ಬಾರ್‌ಗಳನ್ನು ಲಾಕ್ ಹಾಗೂ ಅನ್ಲಾಕ್ ಮಾಡಬಹುದು. ಈ ಪ್ರೀಮಿಯಂ ಫೀಚರ್ ಅನ್ನು ಡುಕಾಟಿ ಮಲ್ಟಿಸ್ಟ್ರಾಡಾ ಹಾಗೂ ಬಿಎಂಡಬ್ಲ್ಯು ಜಿಎಸ್ ಸರಣಿ ಬೈಕ್‌ಗಳಲ್ಲಿ ಕಾಣಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬ್ಲೂಟೂತ್ ಕನೆಕ್ಟಿವಿಯೊಂದಿಗೆ ಮಾರ್ಪಡು ಮಾಡಲಾಗಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಹೊಸ ಸಿಬಿಆರ್ 250 ಆರ್ ಆರ್ ಬೈಕ್ ಅನ್ನು ಮ್ಯಾಟ್ ಶೈನಿ ವೈಟ್, ಮ್ಯಾಟ್ ಬ್ಲ್ಯಾಕ್ ಹಾಗೂ ಪ್ರಿಕ್ಸ್ ರೆಡ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಮೊದಲ ಎರಡು ಬಣ್ಣದ ಮಾದರಿಗಳ ಬೆಲೆ ರೂ.5.84 ಲಕ್ಷಗಳಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ಹೋಂಡಾ ಸಿಬಿಆರ್ 250 ಆರ್ ಬೈಕಿನ ಮಾರಾಟವನ್ನು ಈ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಈ ಬೈಕಿನ ಮಾರಾಟವನ್ನು ಗಮನಿಸಿ ಹೋಂಡಾ ಕಂಪನಿಯು ಭಾರತದಲ್ಲಿ 500 ಸಿಸಿ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ.

ಮೂಲ: ಯಂಗ್ ಮೆಷಿನ್

More from DriveSpark

Article Published On: Wednesday, March 25, 2020, 13:10 [IST]
English summary
New 2020 Honda CBR 250 RR to be launched in July. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+