ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವಾರು ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಪ್ರೀಮಿಯಂ ಸ್ಕೂಟರ್ ಮತ್ತು ಬೈಕ್‌ಗಳನ್ನು ಪರಿಚಯಿಸಲು ಮುಂದಾಗಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯಡಿ ವಿವಿಧ ಮಾದರಿಯ 5 ದ್ವಿಚಕ್ರವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಮಾರಾಟ ಮಾಡಲು ನಿರ್ಧರಿಸಿರುವ ಹೋಂಡಾ ಸಂಸ್ಥೆಯು ಹೊಸ ಸ್ಕೂಟರ್ ಮತ್ತು ಬೈಕ್‌ಗಳನ್ನು ಶೀಘ್ರದಲ್ಲೇ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ. ಆಮದು ನೀತಿಯಲ್ಲಿನ ವಿನಾಯ್ತಿಯಿಂದಾಗಿ ವಿದೇಶಿ ಆಟೋ ಆಟೋ ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಅನುಕೂಲಕವಾಗಿದ್ದು, ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2500 ವಾಹನಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಈ ಹಿನ್ನಲೆ ಜಪಾನ್ ಮೋಟಾರ್ ಸೈಕಲ್ ಕಂಪನಿಯಾಗಿರುವ ಹೋಂಡಾ ಬಿಗ್‌ವಿಂಗ್ ಕೂಡಾ ಇದೀಗ ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಕೆಲವು ಸೂಪರ್ ಬೈಕ್ ಮತ್ತು ಲೈಫ್ ಸ್ಟೈಲ್ ಸ್ಕೂಟರ್ ಮಾದರಿಗಳನ್ನು ಮುಂದಿನ ಒಂದು ವರ್ಷಗಳ ಅವಧಿಯಲ್ಲಿ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೋಂಡಾ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್, ಸಿಬಿ1000ಆರ್, ಆಫ್ರಿಕನ್ ಟ್ವಿನ್ ಮತ್ತು ಗೋಲ್ಡ್‌ವಿಂಗ್ ಸೂಪರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಬೈಕ್‌ ಮತ್ತು ಸ್ಕೂಟರ್‌ಗಳು 250 ಸಿಸಿ ಯಿಂದ 500 ಸಿಸಿ ಮಧ್ಯದ ಎಂಜಿನ್ ವೈಶಿಷ್ಟ್ಯತೆ ಹೊಂದಿರಲಿವೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಹೋಂಡಾ ಕಂಪನಿಯು ಹೊಸದಾಗಿ ರೆಬೆಲ್ 500, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಸೂಪರ್ ಬೈಕ್‌ ಮಾದರಿಗಳ ಜೊತೆಗೆ ಫೋರ್ಜಾ 300 ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ. ಫೋರ್ಜಾ 300 ಸ್ಕೂಟರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದ್ದು, ಹೊಸ ಸ್ಕೂಟರ್ ಅನ್ನು ಈಗಾಗಲೇ ಕೆಲವು ಗ್ರಾಹಕರು ದುಬಾರಿ ಬೆಲೆಯೊಂದಿಗೆ ವಿದೇಶಿ ಮಾರುಕಟ್ಟೆಯಿಂದ ಆಮದು ನೀಡಿಯಡಿ ಖರೀದಿಸಿದ್ದಾರೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ದೆಹಲಿ ಮತ್ತು ಮುಂಬೈನಲ್ಲಿ ಇದುವರೆಗೆ ಸುಮಾರು 10ಕ್ಕೂ ಹೆಚ್ಚು ಫೋರ್ಜಾ 300 ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಸ್ಕೂಟರ್ ಅನ್ನು ಭಾರತದಲ್ಲೇ ಅಧಿಕೃತವಾಗಿ ಬಿಡುಗಡೆಗೊಳಿಸಲಾಗುತ್ತಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಯುರೋ-5 ವೈಶಿಷ್ಟ್ಯತೆ ಹೊಂದಿರುವ ಫೋರ್ಜಾ 300 ಸ್ಕೂಟರ್ ಮಾದರಿಯು ಯುರೋಪಿನ್ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಯುರೋ-5 ಎಮಿಷನ್ ನಿಯಮವು ಭಾರತದಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮಕ್ಕೆ ಸರಿಸಮನಾಗಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಪರ್ಫಾಮೆನ್ಸ್ ಜೊತೆಗೆ ಲೈಫ್‌ಸ್ಟೈಲ್ ಆವೃತ್ತಿಯಾಗಿರುವ ಹೊಸ ಫೋರ್ಜಾ 300 ಸ್ಕೂಟರ್ ಮಾದರಿಯು 1,510ಎಂಎಂ ಉದ್ದಳತೆ ಹೊಂದಿದ್ದು, ಇದು ಅರಾಮದಾಯಕ ರೈಡಿಂಗ್‌ಗೆ ಸಹಕಾರಿಯಾಗಿರುವುಲ್ಲದೇ ಹಿಂಬದಿ ಸವಾರರಿಗೂ ಅನೂಕಲಕರ ಸ್ಥಳಾವಕಾಶ ಒದಗಿಸುತ್ತದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಫೋರ್ಜಾ 300 ಸ್ಕೂಟರ್ ಮಾದರಿಯು 279-ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್, SOHC ಫೋರ್ ವ್ಲಾವೆ ಎಂಜಿನ್ ಹೊಂದಿದ್ದು, 24.8-ಬಿಎಚ್‌ಪಿ ಮತ್ತು 27.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಸ್ಕೂಟರ್ ಅನ್ನು ಟ್ಯಾಬ್ಯೂಲರ್ ಸ್ಟೀಲ್ ಫ್ರೆಮ್ ಚಾರ್ಸಿ ಮೇಲೆ ನಿರ್ಮಾಣ ಮಾಡಲಾಗಿದ್ದು, ಅಲ್ಯುಮಿನಿಯಂ ಪ್ರೇರಿತ 15-ಇಂಚಿನ ಮುಂಭಾಗ ಚಕ್ರ ಮತ್ತು 14-ಇಂಚಿನ ಹಿಂಭಾಗದ ಚಕ್ರದ ಜೊತೆಗೆ 256-ಎಂಎಂ ಮುಂಭಾದ ಡಿಸ್ಕ್ ಬ್ರೇಕ್ ಮತ್ತು 240-ಎಂಎಂ ಹಿಂಭಾಗದ ಡಿಸ್ಕ್ ಜೋಡಿಸಲಾಗಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಎಲೆಕ್ಟ್ರಿಕ್ ವೀಂಡ್ ಸ್ಕೀನ್, ಎರಡು ಫುಲ್ ಫೇಸ್ ಹೆಲ್ಮೆಟ್ ಹಿಡಿಯುವಷ್ಟು ಅಂಡರ್ ಸೀಟ್ ಸ್ಟೋರೆಜ್, 12-ವಿ ಚಾರ್ಜಿಂಗ್ ಸಾಕೆಟ್, ಇಗ್ನಿಷನ್ ನಾಬ್ ಕಂಟ್ರೋಲ್ ಮಾಡಬಹುದಾದ ಸ್ಮಾರ್ಟ್ ಕೀ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್, ಸಿಂಗಲ್ ಪೀಸ್ ಅಲ್ಯುಮಿಯಂ ಸ್ವಿಂಗ್ ಆರ್ಮ್ ಪಡೆದುಕೊಂಡಿದೆ.

ಭಾರತದಲ್ಲಿ ಹೋಂಡಾ ನಿರ್ಮಾಣದ ಫೋರ್ಜಾ 300 ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಫೋರ್ಜಾ 300 ಸ್ಕೂಟರ್ ಬೆಲೆ(ಅಂದಾಜು)

ಭಾರತದಲ್ಲಿ ಫೋರ್ಜಾ ಸ್ಕೂಟರ್ ಅಧಿಕೃತವಾಗಿ ಬಿಡುಗಡೆಗೊಂಡಲ್ಲಿ ಸ್ಕೂಟರ್ ಬೆಲೆಯು ಇಳಿಕೆಯಾಗುವ ಸಾಧ್ಯತೆಗಳಿದ್ದು, ಸದ್ಯ ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ದುಬಾರಿ ಬೆಲೆಯೊಂದಿಗೆ ಆಮದು ಮಾಡಿಕೊಂಡು ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಆಮದು ಸುಂಕ ಮತ್ತು ಮೂಲಬೆಲೆಯೊಂದಿಗೆ ಸುಮಾರು ರೂ.3.50 ಲಕ್ಷದಿಂದ ರೂ.4 ಲಕ್ ಬೆಲೆ ಹೊಂದಿದ್ದು, ಅಧಿಕೃತ ಬಿಡುಗಡೆಯ ನಂತರ ಹೊಸ ಸ್ಕೂಟರ್ ಬೆಲೆಯು ರೂ.2.30 ಲಕ್ಷದಿಂದ 2.80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
2020 Honda Forza 300 Revealed India Launch In next year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more