ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ 2021ರ ಎಸ್ 1000 ಆರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ನೇಕೆಡ್ ರೋಡ್‌ಸ್ಟರ್ ಸ್ಟೈಲಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ನೇಕೆಡ್ ರೋಡ್‌ಸ್ಟರ್ ಒಡಹುಟ್ಟಿದವರಾಗಿದ್ದು, ಇದನ್ನು ಕಳೆದ ವರ್ಷ ನವೀಕರಿಸಲಾಗಿದೆ .ಬಿಎಂಡಬ್ಲ್ಯು ಎಸ್ 1000 ಆರ್ ವಿನ್ಯಾಸ ಮಾತ್ರವಲ್ಲದೇ ಇದರ ಪರ್ಫಾಮೆನ್ಸ್ ಮತ್ತು ಉತ್ತಮ ಕಂಟ್ರೋಲ್ ಗಳಿಂದ ಹೆಚ್ಚು ಜನಪ್ರಿಯತೆಯ ಗಳಿಸಿದ ಬೈಕ್ ಆಗಿದೆ. ಇನ್ನು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದರಲ್ಲಿ ಹೊಸ ಸಿಂಗಲ್-ಪೀಸ್ ಎಲ್ಇಡಿ ಹೆಡ್ ಲ್ಯಾಂಪ್ ಅದರ ಮಧ್ಯ ಎಲ್ಇಡಿ ಡಿಆರ್ಎಲ್ ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಇದರೊಂದಿಗೆ ಫ್ಯೂಯಲ್ ಟ್ಯಾಂಕ್ ವಿನ್ಯಾಸ, ಕ್ವಾರ್ಟರ್ ಫೇರಿಂಗ್, ಎಕ್ಸಾಸ್ಟ್ ಮತ್ತು ಟೈಲ್ ವಿಭಾಗದಲ್ಲಿಯು ಸಣ್ಣ ಮಟ್ಟದ ನವೀಕರಿಸಲಾಗಿದೆ. ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನ ವಿನ್ಯಾಸದಲ್ಲಿನ ಬದಲಾವಣೆಗಳ ಜೊತೆಗೆ ಚಾಸಿಸ್ ಅನ್ನು ಫ್ಲೆಕ್ಸ್ ಫ್ರೇಮ್ನೊಂದಿಗೆ ನವೀಕರಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಇದು ಈ ಹೊಸ ಬೈಕಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಅದರ ಕೇಂದ್ರದಲ್ಲಿ ಅಗಲವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ, ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನ ತೂಕದ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಹಿಂದಿನ ಮಾದರಿಗೆ ಹೋಲಿಸಿದರೆ 6.5 ಕೆಜಿ ತೂಕ ಕಡಿಮೆಯಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ 199 ಕೆಜೆ ತೂಕವನ್ನು ಹೊಂದಿರಬಹುದು ಎಂದು ಕೆಲವು ಸುಳಿವು ಕಂಪನಿ ನೀಡಿದೆ. ಈ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನೊಂದಿಗೆ ಮತ್ತಷ್ಟು ‘ಎಂ ಪ್ಯಾಕೇಜ್' ಆಯ್ಕೆ ಮಾಡಿಕೊಳ್ಳಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ತೂಕವನ್ನು ಕಡಿಮೆ ಮಾಡಲಾಗಿದ್ದರೂ, ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯ ಎಂಜಿನ್ ಅನ್ನು ಮುಂದೆಸಾಗಿಸಿದೆ. ಆದರೆ ಎಂಜಿನ್ ಅನ್ನು ಯುರೋ -5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನಲ್ಲಿ ಅದೇ 999 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 162 ಬಿಹೆಚ್‍ಪಿ ಪವರ್ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಇನ್ನು ಬಿಎಂಡಬ್ಲ್ಯು ಕಂಪನಿಯು ಈ ಬೈಕಿನ ಮತ್ತು 6ನೇ ಗೇರ್ ಅನ್ನು ನವೀಕರಿಸಿದ್ದಾರೆ. ಇದರಿಂದ ಗೇರ್ ಗಳನ್ನು ಯಾವುದೇ ಲ್ಯಾಗ್ ಗಳಿಲ್ಲದೇ ಮತ್ತಷ್ಟು ಸುಲಭವಾಗಿ ಬದಲಾಯಿಸುವಂತೆ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಹೊಸ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿರಲಿದೆ. ಇದು ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಸಹ ಹೊಂದಿದೆ. ಇದರೊಂದಿಗೆ ರೈನ್, ರೋಡ್, ಡೈನಾಮಿಕ್ ಮತ್ತು ಡೈನಾಮಿಕ್ ಪ್ರೊ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್

ಡ್ರೈವ್‌ಸ್ಪಾಕ್ ಅಭಿಪ್ರಾಯ

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಹಲವಾರು ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ರೋಡ್‌ಸ್ಟರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಕಂಪನಿಯು ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಒಂದು ವೇಳೆ 2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಕವಾಸಕಿ ಝಡ್1000 ಮತ್ತು ಟ್ರಯಂಫ್ ಸ್ಪೀಡ್ ಟ್ರಿಪಲ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Friday, November 20, 2020, 12:27 [IST]
English summary
2021 BMW S 1000 R Unveiled Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+