ಅನಾವರಣವಾಯ್ತು ಬಹುನಿರೀಕ್ಷಿತ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ಬೈಕುಗಳು
ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಪ್ರಮುಖ ನೇಕಡ್ ಬೈಕುಗಳಾದ 2021ರ ಸ್ಟ್ರೀಟ್‌ಫೈಟರ್ ವಿ4 ಮತ್ತು ವಿ4 ಎಸ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಎರಡು ಬೈಕುಗಳನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಮತ್ತೊಂದು ಪ್ರಮುಖ ಬದಲಾವಣೆಯೆಂದರೆ 2021ರ ಸ್ಟ್ರೀಟ್‌ಫೈಟರ್ ಬೈಕುಗಳು ಹೊಸ ‘ಡಾರ್ಕ್ ಸ್ಟೆಲ್ತ್' ಬಣ್ಣದ ಆಯ್ಜೆಯನ್ನು ಪಡೆದುಕೊಂಡಿದೆ. ಇದಲ್ಲದೆ ಬ್ರ್ಯಾಂಡ್ ಕಾರ್ಯಕ್ಷಮತೆಯ ನೇಕೆಡ್ ಬೈಕುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಸ್ಟ್ರೀಟ್‌ಫೈಟರ್ ವಿ4 ಮತ್ತು ಸ್ಟ್ರೀಟ್‌ಫೈಟರ್ ವಿ 4ಎಸ್ ನಡುವೆ ದೊಡ್ಡ ವ್ಯತ್ಯಾಸಗಳಿಲ್ಲ. ಇನ್ನು ಈ ಎರಡು ಹೊಸ ಬೈಕುಗಳಲ್ಲಿ ಎಂಜಿನ್ ಒಂದೇ ಆಗಿರುತ್ತದೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಮತ್ತು ವಿ4 ಎಸ್ ಬೈಕುಗಳಲ್ಲಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ 90 ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 206 ಬಿಹೆಚ್‍ಪಿ ಪವರ್ ಮತ್ತು 9.500 ಆರ್‌ಪಿಎಂನಲ್ಲಿ 123 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಬ್ರ್ಯಾಂಡ್‌ನ ಬೈ-ಡೈರಕ್ಷನಲ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಇವಿಒ 2 ಜೊತೆಗೆ ಸ್ಲಿಪ್-ಅಸಿಸ್ಟೆಡ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಎರಡು ಹೊಸ ಬೈಕುಗಳಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್ ಪ್ಲೇಯನ್ನು ಸಹ ನೀಡಲಾಗಿದೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಐದು-ಸ್ಪೀಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ವಿ4 ಎಸ್ ಮಾರ್ಚೆಸಿನಿ 3-ಸ್ಪೋಕ್ ಖೋಟಾ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಎರಡು ಬೈಕುಗಳು ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ II ಪರ್ಫಾರ್ಮೆನ್ಸ್ ಟಯರುಗಳನ್ನು ಹೊಂದಿರುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸ್ಟ್ಯಾಂಡರ್ಡ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಬಿಪಿಎಫ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸ್ಯಾಚ್ಸ್ ಮೊನೊ-ಶಾಕ್ ಯುನಿಟ್ ಅನ್ನು ಹೊಂದಿದೆ.

ಇನ್ನು 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕಿನ ಮುಂಭಾಗದಲ್ಲಿ ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ಓಹ್ಲಿನ್ಸ್ ಎನ್ಐಎಕ್ಸ್ 30 ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊ-ಶಾಕ್ ಯುನಿಟ್ ಗಳನ್ನು ಒಳಗೊಂಡಿದೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಎರಡು ಬೈಕುಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಜ್ ಗಳ ಜೊತೆಯಲ್ಲಿ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ4.30 4-ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿವೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕಿನಲ್ಲಿ ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ 2, ಡುಕಾಟಿ ವ್ಹೀಲಿ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಸ್ಲೈಡ್ ಕಂಟ್ರೋಲ್ ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ಒಳಗೊಂಡಿದೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ಬೈಕುಗಳು ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಕಂಪನಿಯು ಟಾಪ್-ಸ್ಪೆಕ್ ವಿ4 ಎಸ್ ಬೈಕನ್ನು ಮೊದಲು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.


Click it and Unblock the Notifications








