ಬಿಡುಗಡೆಯಾಯ್ತು 2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್
ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ 2021ರ ಜಿಎಸ್ಎಕ್ಸ್-ಎಸ್750 ಬೈಕನ್ನು ಅಮೆರಿಕಾದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಕೆಲವು ಕಾಸ್ನೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

ಆದರೆ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕಿನ ಎಂಜಿನ್ ಅನ್ನು ಅಪ್ಡೇಟ್ ಮಾಡಲಾಗಿಲ್ಲ. ಅದೇ ಯುರೋ -4 ಪ್ರೇರಿತ ಎಂಜಿನ್ ಅನ್ನು ಹೊಂದಿದೆ. ಈ 2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಹೊಸ ಪ್ಯಾಲೆಟ್ ಬಣ್ಣದ ಅಂಶಗಳನ್ನು ಪಡೆದುಕೊಂಡಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್ 750 ಬೈಕನ್ನು ಎಬಿಎಸ್ ಮತ್ತು ಎಬಿಎಸ್ ಅಲ್ಲದ ಎರಡು ರೂಪಾಂತರಗಳಲ್ಲಿ ಅಮೆರಿಕಾದಲ್ಲಿ ಮಾರಾಟ ಮಾಡಲಾಗುತ್ತದೆ.

2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಪರ್ಲ್ ಬ್ರಿಲಿಯಂಟ್ ವೈಟ್ ಮತ್ತು ಚಾಂಪಿಯನ್ ಯೆಲ್ಲೊ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಫಾಂಗ್-ಆಕಾರದ ಡಿಆರ್ಎಲ್, ಸಿಂಗಲ್-ಪಾಡ್ ಹೆಡ್ ಲೈಟ್, ಎಲ್ಸಿಡಿ ಇನ್ಸ್ ಟ್ರೂಮೆಂಟ್ ಪ್ಯಾನಲ್, ಮಸ್ಕ್ಯುಲರ್ ಸ್ಟೈಲಿಂಗ್ ಮತ್ತು ಸ್ಪ್ಲಿಟ್-ಸ್ಟೈಲ್ ಸೀಟುಗಳಂತಹ ಫೀಚರ್ ಗಳನ್ನು ಒಳಗೊಂಡಿದೆ.

ಹಾರ್ಡ್‌ವೇರ್ ಕೂಡ ಬದಲಾಗದೆ ಉಳಿದಿದೆ, ಈ 2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕೆವೈಬಿ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಸುಜುಕಿ ಜಿಎಸ್ಎಕ್ಸ್-ಎಸ್ 750 ಬೈಕಿನ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ರೋಟರ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್ 750 ಬೈಕಿನ ಬ್ರೇಂಕಿಗ್ ಸಿಸ್ಟಂ ಉತ್ತಮವಾಗಿದೆ.

ಇನ್ನು ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್ 750 ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ, ಎಬಿಎಸ್ ಮತ್ತು ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ 2021ರ ಸುಜುಕಿ ಜಿಎಸ್ಎಕ್ಸ್-ಎಸ್ 750 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, 2021ರ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕಿನಲ್ಲಿ 749 ಸಿಸಿ ಇನ್-ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 113 ಬಿಹೆಚ್‌ಪಿ ಪವರ್ ಮತ್ತು 81 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸುಜಿಕಿ ಕಂಪನಿಯು ಎಂಜಿನ್ ಅಪ್ಡೇಟ್ ಮಾಡದೆ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕನ್ನು ಅಮೆರಿಕಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಆದರೆ ಈ ಮಾದರಿಯನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.


Click it and Unblock the Notifications








