ಹೊಸ ಉತ್ಪಾದನಾ ಘಟಕ ತೆರೆದ ಅಪೊಲೊ ಟಯರ್ಸ್
ಭಾರತದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಟಯರ್ ವ್ಯವಹಾರವೂ ಸಹ ಅಭಿವೃದ್ಧಿ ಹೊಂದುತ್ತಿದೆ. ಪ್ರಮುಖ ಟಯರ್ ತಯಾರಕ ಕಂಪನಿಗಳಲ್ಲಿ ಒಂದಾದ ಅಪೊಲೊ ಟಯರ್ಸ್ ಭಾರತದ ಪ್ರೀಮಿಯಂ ದ್ವಿಚಕ್ರ ವಾಹನ ಸೆಗ್ ಮೆಂಟಿನಲ್ಲಿ ಮುನ್ನಡೆ ಸಾಧಿಸುವ ಗುರಿಯನ್ನು ಹೊಂದಿದೆ.

ಉತ್ತಮ ಗುಣಮಟ್ಟದ ಸ್ಟೀಲ್ ರೇಡಿಯಲ್ ಟಯರ್ ಉತ್ಪಾದಿಸುವ ಗುರಿಯೊಂದಿಗೆ ಕಂಪನಿಯು ಗುಜರಾತ್‌ನ ವಡೋದರಾದಲ್ಲಿ ಹೊಸ ಟೆಕ್ನಾಲಜಿಯ ಉತ್ಪಾದನಾ ಘಟಕವನ್ನು ಹೊಂದಿದೆ. ಈ ಘಟಕವು 10,000 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಈ ಘಟಕದಲ್ಲಿ ತಿಂಗಳಿಗೆ 30,000 ಮೋಟಾರ್‌ಸೈಕಲ್ ರೇಡಿಯಲ್ ಹಾಗೂ 60,000 ಕ್ರಾಸ್ ಪ್ಲೈ ಟಯರ್‌ಗಳನ್ನು ಉತ್ಪಾದಿಸಲಾಗುವುದು. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದೆಂದು ಕಂಪನಿ ಹೇಳಿದೆ.

ಕಂಪನಿಯು ಈ ಘಟಕದಲ್ಲಿ ಪ್ರೀಮಿಯಂ ಪ್ರಯಾಣಿಕರ ಮೋಟಾರ್‌ಸೈಕಲ್ ಸೆಗ್ ಮೆಂಟಿನ ಹೈ ಎಂಡ್ ಟಯರ್‌ಗಳನ್ನು ಉತ್ಪಾದಿಸಲಿದೆ. ಆಪೊಲೊ ಕಂಪನಿಯು 2016ರಲ್ಲಿ ಭಾರತದ ಟಯರ್ ಉದ್ಯಮಕ್ಕೆ ಕಾಲಿಟ್ಟಿತು. ಅಪೊಲೊ ಟಯರ್ ಭಾರತದಲ್ಲಿ ಸೊನ್ನೆ ಡಿಗ್ರಿಯಲ್ಲಿ ಸ್ಟೀಲ್ ರೇಡಿಯಲ್ ಟಯರ್‌ಗಳನ್ನು ಉತ್ಪಾದಿಸಿದ ಮೊದಲ ಕಂಪನಿಯಾಗಿದೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಅಪೊಲೊ ಟಯರ್ ಭಾರತದ ಟಯರ್ ಮಾರುಕಟ್ಟೆಯಲ್ಲಿ 20%ನಷ್ಟು ಪಾಲನ್ನು ಹೊಂದಿದೆ. ಪ್ರೀಮಿಯಂ ದ್ವಿಚಕ್ರ ವಾಹನ ಸೆಗ್ ಮೆಂಟಿನ ಬಗ್ಗೆ ಮಾತನಾಡಿರುವ ಅಪೊಲೊ ಟಯರ್ಸ್ ಲಿಮಿಟೆಡ್‌ನ ಉಪಾಧ್ಯಕ್ಷ ಹಾರು ಎಂಡಿ ನೀರಜ್ ಕನ್ವಾರ್ ರವರು ನಾವು ಹೆಚ್ಚಿನ ಮೌಲ್ಯದ, ಹೆಚ್ಚು ಲಾಭದಾಯಕವಾದ ಪ್ರೀಮಿಯಂ ಮೋಟಾರ್‌ಸೈಕಲ್ ಸೆಗ್ ಮೆಂಟಿನಲ್ಲಿ ಮುನ್ನಡೆ ಸಾಧಿಸುವ ಗುರಿ ಹೊಂದಿದ್ದೇವೆ. ಯುರೋಪ್, ಅಮೆರಿಕಾ ಹಾಗೂ ಭಾರತದ ಮಾರುಕಟ್ಟೆಯಲ್ಲಿ 20%ನಷ್ಟು ಪಾಲನ್ನು ಹೊಂದುವ ಗುರಿ ನಿಗದಿಪಡಿಸಲಾಗಿದೆ.

ಭಾರತದಲ್ಲಿನ ಆರ್ಥಿಕ ಬೆಳವಣಿಗೆಯಿಂದಾಗಿ ವಾಹನಗಳ ಮಾರಾಟ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, ಟಯರ್‌ಗಳ ಬೇಡಿಕೆಯೂ ಹೆಚ್ಚಾಗಿದೆ. ಭಾರತದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಖರೀದಿಸುತ್ತಿರುವುದರಿಂದ ಟಯರ್ ಉದ್ಯಮವು ಬೆಳೆಯಲು ಅವಕಾಶ ದೊರೆತಿದೆ.
MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಭಾರತವು ದ್ವಿಚಕ್ರ ವಾಹನಗಳ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಭವಿಷ್ಯದಲ್ಲಿ ಅದರ ಬೆಳವಣಿಗೆಗೆ ಹಲವಾರು ಆಯ್ಕೆಗಳಿವೆ ಎಂದು ಅವರು ಹೇಳಿದರು. ಕರೋನಾ ವೈರಸ್ ಕಾರಣದಿಂದಾಗಿ ಖಾಸಗಿ ವಾಹನಗಳಿಗೆ ಹೆಚ್ಚಿನ ಬೇಡಿಕೆಯುಂಟಾಗಿದೆ. ಜನರು ಸಾರ್ವಜನಿಕ ಸಾರಿಗೆಯ ಬದಲು ಖಾಸಗಿ ವಾಹನಗಳ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಟಯರ್ ಮಾರುಕಟ್ಟೆಯ ಬೆಳವಣಿಗೆಗೆ ಹಲವು ಆಯ್ಕೆಗಳಿವೆ ಎಂದು ಅವರು ಹೇಳಿದರು.

ಈ ಉತ್ಪಾದನಾ ಘಟಕವನ್ನು ಅಪೊಲೊ ಟಯರ್ಸ್‌ನ ಅಧ್ಯಕ್ಷ ಓಂಕಾರ್ ಎಸ್. ಕನ್ವಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಾಗೂ ಎಂಡಿ ನೀರಜ್ ಕನ್ವರ್ ಹಾಗೂ ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಇತರ ಸದಸ್ಯರು ಭಾಗಿಯಾಗಿದ್ದರು.


Click it and Unblock the Notifications