ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಅಥೆರ್ ಸಂಸ್ಥೆಯು ಸದ್ಯ 450 ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಜನಪ್ರಿಯಗೊಳ್ಳುತ್ತಿದ್ದು, ಸದ್ಯದಲ್ಲೇ 450ಎಕ್ಸ್ ಎನ್ನುವ ಸ್ಪೆಷಲ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

450 ಎಲೆಕ್ಟ್ರಿಕ್ ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಗ್ರಾಹಕರ ಬೇಡಿಕೆ ಮೇರೆಗೆ ಅಲ್ಫಾವಧಿಗಾಗಿ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸಿದೆ. ಸಾಮಾನ್ಯ ಆವೃತ್ತಿಗಿಂತ ಕೆಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿರುವ ಸ್ಪೆಷಲ್ ಎಡಿಷನ್ ಮಾದರಿಯು ನಿಗದಿತ ಅವಧಿಯೊಳಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಸಾಮಾನ್ಯ ಮಾದರಿಯ ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಮತ್ತೊಂದು ಪ್ರಮುಖ ಗಮನಿಸಬೇಕಾದ ವಿಚಾರ ಅಂದರೆ, 450 ಎಕ್ಸ್ ಮಾದರಿಯ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಆರಂಭಿಸಲಿರುವ ಅಥೆರ್ ಸಂಸ್ಥೆಯು ನಿಗದಿತ ಅವಧಿಯೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರವೇ ಸ್ಪೆಷಲ್ ಎಡಿಷನ್ ಸಿದ್ದಪಡಿಸಲಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಮಾಹಿತಿ ಪ್ರಕಾರ, ಸ್ಪೆಷಲ್ ಸ್ಕೂಟರ್‌ನಲ್ಲಿ ಸಾಮಾನ್ಯ ಮಾದರಿಗಿಂತ ಪರ್ಫಾಮೆನ್ಸ್ ಹೆಚ್ಚಳ ಮಾಡಿರುವುದಲ್ಲದೇ ಪ್ರೀಮಿಯಂ ಕನೆಕ್ವಿಟಿ ಫೀಚರ್ಸ್ ಮತ್ತು ಆಕರ್ಷಕ ಗ್ರಾಫಿಕ್ಸ್ ಡಿಸೈನ್ ನೀಡಿರುವುದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 450 ಮಾದರಿಯು 2.4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ 5.4kW ಪವರ್ ಉತ್ಪಾದನೆ ಮಾಡುವ ಮೂಲಕ 20.5ಎನ್ಎಂ ಟಾರ್ಕ್‌ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಪ್ರತಿ ಗಂಟೆಗೆ 80ಕಿ.ಮೀ ಟಾಪ್ ಸ್ಪೀಡ್ ಸಾಮಾರ್ಥ್ಯ ಹೊಂದಿರುವ 450 ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದೀಗ ಬಿಡುಗಡೆಯಾಗಲಿರುವ 450ಎಕ್ಸ್ ಮಾದರಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಸಾಮಾನ್ಯ 450 ಮಾದರಿಯು ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1,13,715 ಬೆಲೆ ಹೊಂದಿದ್ದು, 450ಎಕ್ಸ್ ಮಾದರಿಯು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1.40 ಲಕ್ಷದಿಂದ ರೂ.1.50 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಗಳಿವೆ.

ಹೊಸ ಸ್ಕೂಟರ್ ಮಾದರಿಯು ಮುಂದಿನ ತಿಂಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ 450 ಅಥವಾ 450ಎಕ್ಸ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಮಾರಾಟ ವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದ್ದು, ಶೀಘ್ರದಲ್ಲೇ ಹೈದ್ರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಆರಂಭಕ್ಕೆ ಯೋಜನೆ ರೂಪಿಸಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದ ವೇಳೆ ಬೆಂಗಳೂರಿನಲ್ಲಿ ಮಾತ್ರವೇ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಅಥೆರ್ ಎನರ್ಜಿ ಸಂಸ್ಥೆಯು ಕಳೆದ ವರ್ಷ ಚೆನ್ನೈನಲ್ಲಿ ಮೊದಲ ಬಾರಿಗೆ ಇ-ಸ್ಕೂಟರ್ ಮಾರಾಟ ಪ್ರಕ್ರಿಯೆಯನ್ನು ಆಂಭಿಸಿತ್ತು.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಹೈದ್ರಾಬಾದ್‌ನಲ್ಲಿ ಮೂರನೇ ಹಂತದ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು, ಮುಂದಿನ ಎರಡು ವರ್ಷದೊಳಗಾಗಿ ಮುಂಬೈ, ದೆಹಲಿ, ಪುಣೆ ಮತ್ತು ನಾಪ್ಪುರ ಮತ್ತು ಅಹಮದಾಬಾದ್‌ನಲ್ಲೂ ಮಾರಾಟ ಪ್ರಕ್ರಿಯೆಯನ್ನು ಹೊಂದಲಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದ್ದು, ಈ ಹಿನ್ನೆಲೆ ಬಹುತೇರಕ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನುಅಭಿವೃದ್ದಿಗೊಳಿಸಿ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿವೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಇದಕ್ಕಾಗಿ ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಕಾರ್ಯವು ಜೋರಾಗಿದ್ದು, ಅಥೆರ್ ಎನರ್ಜಿ ಕೂಡಾ ಈ ನಿಟ್ಟಿನಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅಥೆರ್ ಸಂಸ್ಥೆಗೆ ತನ್ನ ಮಾರಾಟ ಜಾಲವನ್ನು ದೇಶದ ವಿವಿಧ ನಗರಗಳಿಗೆ ವಿಸ್ತರಿಸಲು ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆ ಅಡಿಯಾಗುತ್ತಿದ್ದು, ಇದರಿಂದ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ಬೃಹತ್ ಯೋಜನೆ ರೂಪಿಸಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಅಥೆರ್ ಸಂಸ್ಥೆಯು ವರ್ಷಾಂತ್ಯಕ್ಕೆ 200 ಚಾರ್ಜಿಂಗ್ ಸ್ಪೆಷನ್‌ಗಳನ್ನು ದೇಶದ ವಿವಿಧಡೆ ತೆರೆಯಲು ನಿರ್ಧರಿಸಿದ್ದು, ಹಾಗೆಯೇ 2022ರ ವೇಳೆಗೆ ಬರೋಬ್ಬರಿ 6,500 ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಗುರಿ ಹೊಂದಿದೆ. ಇದಕ್ಕಾಗಿ ರೂ.130 ಕೋಟಿ ಮೀಸಲಿಟ್ಟಿರುವ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭಾರೀ ಪ್ರಮಾಣದ ಸಬ್ಸಡಿ ಪಡೆದುಕೊಳ್ಳಲಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಈ ಮೂಲಕ ದೇಶದ ಪ್ರಮುಖ ಪ್ರಮುಖ ನಗರಗಳಲ್ಲಿ ತನ್ನ ಸ್ಕೂಟರ್ ಮಾರಾಟ ಜಾಲವನ್ನು ವಿಸ್ತರಿಸಲು ಯೋಜಿಸಿರುವ ಅಥೆರ್ ಸಂಸ್ಥೆಯು ಅತ್ಯುತ್ತಮ ಬೆಲೆ ಮತ್ತು ಗ್ರಾಹಕರ ಸೇವೆಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಇದಲ್ಲದೇ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿಗೆ ಅರ್ಹವಾಗಿರುವ ಕೆಲವೇ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅತ್ಯುತ್ತಮ ಬ್ಯಾಟರಿ ಬಳಕೆಯೊಂದಿಗೆ ಗ್ರಾಹಕರ ಸ್ನೇಹಿಯಾಗಿರುವ ಈ ಸ್ಕೂಟರ್‌ ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಅಥೆರ್ ಸಂಸ್ಥೆಯು ಸದ್ಯ ಗ್ರಾಹಕರ ಬೇಡಿಕೆ ಅನ್ವಯ ಎಸ್ 450 ಸ್ಕೂಟರ್‌ಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಮೊದಲು ಬಿಡುಗಡೆಯಾಗಿದ್ದ ಎಸ್ 340 ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದೆ.

ಹೈ ಪರ್ಫಾಮೆನ್ಸ್ 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಅಥೆರ್

ಇದಕ್ಕೆ ಕಾರಣ, ಶೇ.98 ಗ್ರಾಹಕರು ಎಸ್ 450 ಸ್ಕೂಟರ್ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಎಸ್ 340 ಸ್ಕೂಟರ್ ಉತ್ಪಾದನೆಯನ್ನು ಬಂದ್ ಮಾಡಿರುವ ಅಥೆರ್ ಸಂಸ್ಥೆಯು ಎಸ್ 450 ಸ್ಕೂಟರ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

More from DriveSpark

Article Published On: Tuesday, January 7, 2020, 18:14 [IST]
English summary
Ather 450X Electric Scooter Coming Soon: The All-New Limited-Edition Offering From Ather Energy. Read more in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+