ಅಥೆರ್ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ದಿನಾಂಕ ಬಹಿರಂಗ
ಅಥೆರ್ ಎನರ್ಜಿ ಸಂಸ್ಥೆಯು ತನ್ನ ಜನಪ್ರಿಯ 450 ಎಲೆಕ್ಟ್ರಿಕ್ ಮಾದರಿಯ ಸ್ಪೆಷಲ್ ಎಡಿಷನ್ 450ಎಕ್ಸ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಇದೇ ತಿಂಗಳು 28ರಂದು ಅನಾವರಣಗೊಳಿಸುವುದಾಗಿ ಹೇಳಿಕೊಂಡಿದೆ.

ಸಾಮಾನ್ಯ 450 ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿರುವ ಸ್ಪೆಷಲ್ ಎಡಿಷನ್ 450 ಎಕ್ಸ್ ಮಾದರಿಯು ನಿಗದಿತ ಅವಧಿಯೊಳಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಸಾಮಾನ್ಯ ಮಾದರಿಯ ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಮತ್ತೊಂದು ಪ್ರಮುಖ ಗಮನಿಸಬೇಕಾದ ವಿಚಾರ ಅಂದರೆ, 450 ಎಕ್ಸ್ ಮಾದರಿಯ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಆರಂಭಿಸಲಿರುವ ಅಥೆರ್ ಸಂಸ್ಥೆಯು ನಿಗದಿತ ಅವಧಿಯೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರವೇ ಸ್ಪೆಷಲ್ ಎಡಿಷನ್ ಸಿದ್ದಪಡಿಸಲಿದೆ.

ಮಾಹಿತಿ ಪ್ರಕಾರ, ಸ್ಪೆಷಲ್ ಸ್ಕೂಟರ್‌ನಲ್ಲಿ ಸಾಮಾನ್ಯ ಮಾದರಿಗಿಂತ ಪರ್ಫಾಮೆನ್ಸ್ ಹೆಚ್ಚಳ ಮಾಡಿರುವುದಲ್ಲದೇ ಪ್ರೀಮಿಯಂ ಕನೆಕ್ವಿಟಿ ಫೀಚರ್ಸ್ ಮತ್ತು ಆಕರ್ಷಕ ಗ್ರಾಫಿಕ್ಸ್ ಡಿಸೈನ್ ನೀಡಿರುವುದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 450 ಮಾದರಿಯು 2.4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ 5.4kW ಪವರ್ ಉತ್ಪಾದನೆ ಮಾಡುವ ಮೂಲಕ 20.5ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇದರೊಂದಿಗೆ ಪ್ರತಿ ಗಂಟೆಗೆ 80ಕಿ.ಮೀ ಟಾಪ್ ಸ್ಪೀಡ್ ಸಾಮಾರ್ಥ್ಯ ಹೊಂದಿರುವ 450 ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದೀಗ ಬಿಡುಗಡೆಯಾಗಲಿರುವ 450ಎಕ್ಸ್ ಮಾದರಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ. ಸಾಮಾನ್ಯ 450 ಮಾದರಿಯು ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1,13,715 ಬೆಲೆ ಹೊಂದಿದ್ದು, 450ಎಕ್ಸ್ ಮಾದರಿಯು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1.40 ಲಕ್ಷದಿಂದ ರೂ.1.50 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಗಳಿವೆ.

ಹೊಸ ಸ್ಕೂಟರ್ ಮಾದರಿಯು ಅನಾವರಣಗೊಂಡ ನಂತರ ಮುಂದಿನ ತಿಂಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ 450 ಅಥವಾ 450ಎಕ್ಸ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಮಾರಾಟ ವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದ್ದು, ಶೀಘ್ರದಲ್ಲೇ ಹೈದ್ರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಆರಂಭಕ್ಕೆ ಯೋಜನೆ ರೂಪಿಸಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದ ವೇಳೆ ಬೆಂಗಳೂರಿನಲ್ಲಿ ಮಾತ್ರವೇ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಅಥೆರ್ ಎನರ್ಜಿ ಸಂಸ್ಥೆಯು ಕಳೆದ ವರ್ಷ ಚೆನ್ನೈನಲ್ಲಿ ಮೊದಲ ಬಾರಿಗೆ ಇ-ಸ್ಕೂಟರ್ ಮಾರಾಟ ಪ್ರಕ್ರಿಯೆಯನ್ನು ಆಂಭಿಸಿತ್ತು.

ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಹೈದ್ರಾಬಾದ್‌ನಲ್ಲಿ ಮೂರನೇ ಹಂತದ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕೊಯಮುತ್ತೂರು, ಕೊಚ್ಚಿನ್, ಮುಂಬೈ, ದೆಹಲಿ, ಪುಣೆ ಮತ್ತು ನಾಪ್ಪುರ ಮತ್ತು ಅಹಮದಾಬಾದ್‌ನಲ್ಲೂ ಮಾರಾಟ ಪ್ರಕ್ರಿಯೆಯನ್ನು ಹೊಂದಲಿದೆ.


Click it and Unblock the Notifications