ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಜನಪ್ರಿಯ 450 ಎಲೆಕ್ಟ್ರಿಕ್ ಮಾದರಿಯ ಸ್ಪೆಷಲ್ ಎಡಿಷನ್ 450ಎಕ್ಸ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬೆಂಗಳೂರು ಸೇರಿದಂತೆ ಒಟ್ಟು ಆರು ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಬೆಂಗಳೂರು ಮತ್ತು ಚೆನ್ನೈ‌ನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಚಾಲನೆ ನೀಡಿರುವ ಅಥೆರ್ ಸಂಸ್ಥೆಯು ಸದ್ಯದಲ್ಲೇ ಹೈದ್ರಾಬಾದ್‌ನಲ್ಲೂ ಹೊಸ ಸ್ಕೂಟರ್ ಮಾರಾಟ ಮಳಿಗೆಯನ್ನು ತೆರೆಯುತ್ತಿದ್ದು, 450ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡುವ ಹೊತ್ತಿಗೆ ಕೊಯಮುತ್ತೂರು, ಕೊಚ್ಚಿನ್, ಮುಂಬೈ, ದೆಹಲಿಯಲ್ಲಿ ಹೊಸ ಸ್ಕೂಟರ್ ಮಾರಾಟಕ್ಕೆ ಚಾಲನೆ ನೀಡಲಿಯೆಂತೆ. 450 ಎಲೆಕ್ಟ್ರಿಕ್ ಸ್ಕೂಟರ್‌ಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಗ್ರಾಹಕರ ಬೇಡಿಕೆ ಮೇರೆಗೆ ಅಲ್ಫಾವಧಿಗಾಗಿ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಸಾಮಾನ್ಯ ಆವೃತ್ತಿಗಿಂತ ಕೆಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿರುವ ಸ್ಪೆಷಲ್ ಎಡಿಷನ್ ಮಾದರಿಯು ನಿಗದಿತ ಅವಧಿಯೊಳಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಸಾಮಾನ್ಯ ಮಾದರಿಯ ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಮತ್ತೊಂದು ಪ್ರಮುಖ ಗಮನಿಸಬೇಕಾದ ವಿಚಾರ ಅಂದರೆ, 450 ಎಕ್ಸ್ ಮಾದರಿಯ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಆರಂಭಿಸಲಿರುವ ಅಥೆರ್ ಸಂಸ್ಥೆಯು ನಿಗದಿತ ಅವಧಿಯೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರವೇ ಸ್ಪೆಷಲ್ ಎಡಿಷನ್ ಸಿದ್ದಪಡಿಸಲಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಮಾಹಿತಿ ಪ್ರಕಾರ, ಸ್ಪೆಷಲ್ ಸ್ಕೂಟರ್‌ನಲ್ಲಿ ಸಾಮಾನ್ಯ ಮಾದರಿಗಿಂತ ಪರ್ಫಾಮೆನ್ಸ್ ಹೆಚ್ಚಳ ಮಾಡಿರುವುದಲ್ಲದೇ ಪ್ರೀಮಿಯಂ ಕನೆಕ್ವಿಟಿ ಫೀಚರ್ಸ್ ಮತ್ತು ಆಕರ್ಷಕ ಗ್ರಾಫಿಕ್ಸ್ ಡಿಸೈನ್ ನೀಡಿರುವುದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 450 ಮಾದರಿಯು 2.4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ 5.4kW ಪವರ್ ಉತ್ಪಾದನೆ ಮಾಡುವ ಮೂಲಕ 20.5ಎನ್ಎಂ ಟಾರ್ಕ್‌ ಉತ್ಪಾದನೆ ಮಾಡುತ್ತದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಇದರೊಂದಿಗೆ ಪ್ರತಿ ಗಂಟೆಗೆ 80ಕಿ.ಮೀ ಟಾಪ್ ಸ್ಪೀಡ್ ಸಾಮಾರ್ಥ್ಯ ಹೊಂದಿರುವ 450 ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದೀಗ ಬಿಡುಗಡೆಯಾಗಲಿರುವ 450ಎಕ್ಸ್ ಮಾದರಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಸಾಮಾನ್ಯ 450 ಮಾದರಿಯು ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1,13,715 ಬೆಲೆ ಹೊಂದಿದ್ದು, 450ಎಕ್ಸ್ ಮಾದರಿಯು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬೆಂಗಳೂರು ಆನ್‌ರೋಡ್ ಪ್ರಕಾರ ರೂ.1.40 ಲಕ್ಷದಿಂದ ರೂ.1.50 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಗಳಿವೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಹೊಸ ಸ್ಕೂಟರ್ ಮಾದರಿಯು ಮುಂದಿನ ತಿಂಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ 450 ಅಥವಾ 450ಎಕ್ಸ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಮಾರಾಟ ವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದ್ದು, ಶೀಘ್ರದಲ್ಲೇ ಹೈದ್ರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಆರಂಭಕ್ಕೆ ಯೋಜನೆ ರೂಪಿಸಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದ ವೇಳೆ ಬೆಂಗಳೂರಿನಲ್ಲಿ ಮಾತ್ರವೇ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಅಥೆರ್ ಎನರ್ಜಿ ಸಂಸ್ಥೆಯು ಕಳೆದ ವರ್ಷ ಚೆನ್ನೈನಲ್ಲಿ ಮೊದಲ ಬಾರಿಗೆ ಇ-ಸ್ಕೂಟರ್ ಮಾರಾಟ ಪ್ರಕ್ರಿಯೆಯನ್ನು ಆಂಭಿಸಿತ್ತು.

ಬೆಂಗಳೂರು ಸೇರಿ ದೇಶದ ಪ್ರಮುಖ ಆರು ನಗರಗಳಲ್ಲಿ ಬಿಡುಗಡೆಯಾಗಲಿದೆ ಅಥೆರ್ 450ಎಕ್ಸ್

ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಹೈದ್ರಾಬಾದ್‌ನಲ್ಲಿ ಮೂರನೇ ಹಂತದ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕೊಯಮುತ್ತೂರು, ಕೊಚ್ಚಿನ್, ಮುಂಬೈ, ದೆಹಲಿ, ಪುಣೆ ಮತ್ತು ನಾಪ್ಪುರ ಮತ್ತು ಅಹಮದಾಬಾದ್‌ನಲ್ಲೂ ಮಾರಾಟ ಪ್ರಕ್ರಿಯೆಯನ್ನು ಹೊಂದಲಿದೆ.

Article Published On: Friday, January 10, 2020, 17:38 [IST]
English summary
Ather Energy is planning to launch the 450X e-scooter in phased manner in India. It will be available in 6 metro cities in India soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+