450ಎಕ್ಸ್ ಕಲೆಕ್ಟರ್ಸ್ ಎಡಿಷನ್ ಇವಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಎಥರ್
ಬೆಂಗಳೂರು ಮೂಲದ ಇವಿ ಸ್ಕೂಟರ್ ಉತ್ಪಾದನಾ ಕಂಪನಿಯಾದ ಎಥರ್ ಎನರ್ಜಿಯು ಶೀಘ್ರದಲ್ಲೇ ತನ್ನ ಹೊಸ ಇವಿ ಸ್ಕೂಟರ್ ಮಾದರಿಯಾದ 450ಎಕ್ಸ್ ಸ್ಟ್ಯಾಂಡರ್ಡ್ ಆವೃತ್ತಿಯನ್ನು ವಿತರಣೆಯನ್ನು ಆರಂಭಿಸುವ ಸಿದ್ದತೆಯಲ್ಲಿದ್ದು, ಇದಕ್ಕೂ ಮುನ್ನ ಸೀಮಿತ ಅವಧಿಗಾಗಿ ಬಿಡುಗಡೆಗೊಳಿಸಲಾಗಿದ್ದ 450ಎಕ್ಸ್ ಕಲೆಕ್ಟರ್ಸ್ ಎಡಿಷನ್ ಸ್ಕೂಟರ್ ಮಾದರಿಯ ವಿತರಣೆಗೆ ಚಾಲನೆ ನೀಡಲಾಗಿದೆ.

450ಎಕ್ಸ್ ಸ್ಟ್ಯಾಂಡರ್ಡ್ ಮಾದರಯನ್ನೇ ಆಧರಿಸಿರುವ 450ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶೇಷ ವಿನ್ಯಾಸಕ್ಕಾಗಿ ಟೀಂಟೆಡ್ ಟ್ರಾನ್ಸ್‌ಕ್ಯೂಲೆಂಟ್ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದ್ದು, ಮುಂಬರುವ 2021ರ ಜನವರಿ ತಿಂಗಳ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದೆ. ನಿಗದಿತ ಸಂಖ್ಯೆಯ ಮಾರಾಟ ನಂತರ ಸ್ಥಗಿತಗೊಳ್ಳಲಿದ್ದು, ಸ್ಟ್ಯಾಂಡರ್ಡ್ 450ಎಕ್ಸ್ ಮಾದರಿಯು ಮಾರಾಟವು ಸಾಮಾನ್ಯವಾಗಿ ಮುಂದುವರಿಯಲಿದೆ.

450ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬೆಂಗಳೂರು ಮತ್ತು ಚೆನ್ನೈನಲ್ಲಿ ಈಗಾಗಲೇ ವಿತರಣೆಗೆ ಚಾಲನೆ ನೀಡಲಾಗಿದ್ದು, ಸ್ಪೋರ್ಟಿ ಲುಕ್ ಹೆಚ್ಚಿಸುವುದಕ್ಕಾಗಿ ಸಂಪೂರ್ಣ ಗ್ಲಾಸ್ ಬ್ಲ್ಯಾಕ್ ಬಣ್ಣದೊಂದಿಗೆ ರೆಡ್ ಆಕ್ಸೆಂಟ್‌ಗಳನ್ನು ಜೋಡಣೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ 450ಎಕ್ಸ್ ಸ್ಪೆಷಲ್ ಎಡಿಷನ್ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷ ಬೆಲೆ ಹೊಂದಿದ್ದು, ಬಣ್ಣದ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಾದ 450ಎಕ್ಸ್ ಮಾದರಿಯಲ್ಲೇ ಸ್ಪೆಷಲ್ ಎಡಿಷನ್ ಕೂಡಾ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಸ್ಟ್ಯಾಂಡರ್ಡ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರೇ, ವೈಟ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಹೊಂದಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಎಥರ್ ಕಂಪನಿಯು ಸ್ಟ್ಯಾಂಡರ್ಡ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ವಿತರಣೆಯನ್ನು ಕೂಡಾ ಶೀಘ್ರದಲ್ಲೇ ಆರಂಭಿಸಲಿದ್ದು, ಈಗಾಗಲೇ ಪ್ರಮುಖ ಡೀಲರ್ಸ್‌ಗಳಲ್ಲಿ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಟೆಸ್ಟ್ ರೈಡ್ ಆರಂಭಿಸಲಾಗಿದೆ. 2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸ್ಟ್ಯಾಂಡರ್ಡ್ 450 ಪ್ಲಸ್ ಮಾದರಿಗಿಂತಲೂ 450ಎಕ್ಸ್ ಮಾದರಿಯು ಪ್ರತಿ ಚಾರ್ಜ್ 10 ಕಿ.ಮೀ ಹೆಚ್ಚುವರಿ ಮೈಲೇಜ್ ಹಿಂದಿರುಗಿಸುವುದಲ್ಲದೇ ಸ್ಕೂಟರ್ ಟಾಪ್ ಸ್ಪೀಡ್ ಕೂಡಾ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿದೆ. ಕೇವಲ 3.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ವೇಗ ಪಡೆದುಕೊಳ್ಳುವ 450ಎಕ್ಸ್ ಮಾದರಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲು ಪೂರಕವಾದ ವಾತಾವರಣವಿದ್ದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗೊಳ್ಳಲು ಹಿನ್ನಡೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಎಥರ್ ಎನರ್ಜಿ ಕಂಪನಿಯು ಸಹ ಇದೇ ವರ್ಷಾಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 135ಕ್ಕೂ ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾಗಿದೆ.

ಹಾಗೆಯೇ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 6,500 ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೊಂದುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಎಥರ್ ಕಂಪನಿಯು ವಿವಿಧ ನಗರಗಳಲ್ಲಿ ಆಯಕಟ್ಟಿನ ಸ್ಥಳಗಳನ್ನು ಗುರುತಿಸುತ್ತಿದೆ.


Click it and Unblock the Notifications








