Just In
- 36 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 40 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 42 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 52 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ
ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಎಥರ್ ಎನರ್ಜಿ ಸ್ಕೂಟರ್ಗಳನ್ನು ಬಾಡಿಗೆಗೆ ನೀಡುವ ಬೌನ್ಸ್ ಕಂಪನಿಯ ಸಹಯೋಗದಲ್ಲಿ ಹೊಸ ಬಾಡಿಗೆ ಯೋಜನೆಯನ್ನು ಆರಂಭಿಸುತ್ತಿದೆ. ಈ ಯೋಜನೆಯಡಿಯಲ್ಲಿ ಎಥರ್ 450 ಸ್ಕೂಟರ್ ಹೊಂದಿರುವ ಗ್ರಾಹಕರು ಅವುಗಳನ್ನು ಬಳಸದೇ ಇದ್ದಾಗ ಬೌನ್ಸ್ನಲ್ಲಿ ಬಾಡಿಗೆಗೆ ನೀಡಬಹುದು.
ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್ನ ಮಾಲೀಕರು ತಮ್ಮ ಸ್ಕೂಟರ್ ಬಗ್ಗೆ ಬೌನ್ಸ್ ಅಪ್ಲಿಕೇಶನ್ನಲ್ಲಿ ಮಾಹಿತಿ ನೀಡಬಹುದು. ಸ್ಕೂಟರ್ ಬಳಸದಿದ್ದಾಗ ಅದನ್ನು ಬಾಡಿಗೆಗೆ ನೀಡಿ ಹಣ ಸಂಪಾದಿಸಬಹುದು. ಸ್ಕೂಟರ್ ಅನ್ನು ಯಾವಾಗ, ಹೇಗೆ ಹಾಗೂ ಎಷ್ಟು ಕಾಲ ಬಾಡಿಗೆಗೆ ನೀಡುವುದು ಎಂಬುದು ಸ್ಕೂಟರ್ ಮಾಲೀಕರ ಮೇಲೆ ಅವಲಂಬಿತವಾಗಿರುತ್ತದೆ.
ಈ ಹೊಸ ಯೋಜನೆಯಡಿಯಲ್ಲಿ ತಮ್ಮ ಸ್ಕೂಟರ್ಗಳನ್ನು ಬೌನ್ಸ್ ಅಪ್ಲಿಕೇಶನ್ನಲ್ಲಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಮಾಡಲು ರೂ.499 ಪಾವತಿಸಬೇಕಾಗುತ್ತದೆ. ಈ ಮೊತ್ತವು ಸ್ಕೂಟರ್ಗಳ ವಿಮೆ, ಕಮರ್ಷಿಯಲ್ ರಿಜಿಸ್ಟ್ರೇಷನ್ ಹಾಗೂ ಫೇಮ್ ಯೋಜನೆಯಡಿ 5 ವರ್ಷಗಳ ಉಚಿತ ಟ್ಯಾಕ್ಸ್ಗಳನ್ನು ಒಳಗೊಂಡಿರುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಎಥರ್ ಸ್ಕೂಟರ್ನ ಮಾಲೀಕರು ತಮ್ಮ ಸ್ಕೂಟರ್ ಅನ್ನು ಬೌನ್ಸ್ ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಂಡ ನಂತರ ಸ್ಕೂಟರ್ ಬಾಡಿಗೆಗೆ ನೀಡುವ ಸಮಯ ಹಾಗೂ ದಿನವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಯೋಜನೆಯ ಮುಖ್ಯ ಸಂಗತಿಯೆಂದರೆ ಸ್ಕೂಟರ್ಗಳನ್ನು ಬಾಡಿಗೆಗೆ ಪಡೆಯುವವರು ಸ್ಕೂಟರ್ ಮಾಲೀಕರ ಮನೆಯಿಂದ ಸ್ಕೂಟರ್ಗಳನ್ನು ತೆಗೆದುಕೊಂಡು ನಂತರ ಅಲ್ಲಿಯೇ ಬಿಡಬೇಕಾಗುತ್ತದೆ.
ಹೊಸ ಹಾಗೂ ಹಳೆಯ ಎಥರ್ ಸ್ಕೂಟರ್ಗಳನ್ನು ಹೊಂದಿರುವವರು ಈ ಯೋಜನೆಗಾಗಿ ತಮ್ಮ ಸ್ಕೂಟರ್ಗಳನ್ನು ನೋಂದಾಯಿಸಿಕೊಳ್ಳಬಹುದು. ಸ್ಕೂಟರ್ ಮಾಲೀಕರು ತಮ್ಮ ಸ್ಕೂಟರ್ಗಳನ್ನು ಆರ್ಟಿಒ ಕಚೇರಿಗಳಲ್ಲಿ ಕಮರ್ಷಿಯಲ್ ಉದ್ದೇಶಕ್ಕಾಗಿ ಮರು ನೋಂದಾಯಿಸಿಕೊಳ್ಳಬೇಕಾಗುತ್ತದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ
ಈ ಯೋಜನೆಯಡಿಯಲ್ಲಿ ಸ್ಕೂಟರ್ ಮಾಲೀಕರು ಪ್ರತಿ ತಿಂಗಳಿಗೆ ರೂ.2500-3000ಗಳವರೆಗೆ ಸಂಪಾದಿಸಬಹುದು. ಸ್ಕೂಟರ್ ಮಾಲೀಕರು ತಮ್ಮ ಎಥರ್ ಸ್ಕೂಟರ್ನಲ್ಲಿರುವ ಟ್ರ್ಯಾಕ್ ಫೀಚರ್ನಿಂದಾಗಿ ಸ್ಕೂಟರ್ನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಸ್ಕೂಟರ್ ಮಾಲೀಕರು ಯಾವುದೇ ಜಾಗದಲ್ಲಿದ್ದರೂ ಸ್ಕೂಟರ್ನ ವೇಗ, ಬ್ಯಾಟರಿ ಚಾರ್ಜ್, ಮಾರ್ಗ, ಬಳಕೆಯ ಸಮಯ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬಹುದು.
ಈ ಯೋಜನೆಯಡಿಯಲ್ಲಿ ಸ್ಕೂಟರ್ ಮೆಂಟೆನೆನ್ಸ್ಗಾಗಿ ಎಥರ್ ನಿರ್ದಿಷ್ಟ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. ಈ ಪ್ಯಾಕೇಜ್ನಡಿಯಲ್ಲಿ ಬೆಂಗಳೂರು ನಗರದಲ್ಲಿ ಎಥರ್ನ ಫಾಸ್ಟ್ ಚಾರ್ಜ್ ನೆಟ್ವರ್ಕ್ ಅನ್ನು ಒಂದು ವರ್ಷ ಉಚಿತವಾಗಿ ಬಳಸಬಹುದು. ಸದ್ಯಕ್ಕೆ ಈ ಪ್ಯಾಕೇಜ್ ಅನ್ನು ಬೆಂಗಳೂರು ನಗರದಲ್ಲಿ ಮಾತ್ರ ಆರಂಭಿಸಲಾಗಿದೆ.