ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಿಸಲು ವಿನೂತನ ಆಫರ್ ನೀಡಿದ ಎಥರ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು ತನ್ನ ನೆಚ್ಚಿನ ಗ್ರಾಹಕರ ಜೊತೆಗೆ ಹೊಸದಾಗಿ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೂ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದೆ.

ಎಥರ್ ಕಂಪನಿಯು ಘೋಷಣೆ ಮಾಡಿರುವ ಆಫರ್‌ನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿರುವ ಮಾಲೀಕರ ಜೊತೆಗೆ ಹೊಸದಾಗಿ ಮಾಲೀಕತ್ವ ಹೊಂದುವ ಗ್ರಾಹಕರಿಗೂ ಅನ್ವಯವಾಗುವಂತೆ ಹೊಸ ಆಫರ್ ನೀಡುತ್ತಿದೆ. ಎಥರ್ ನಿರ್ಮಾಣದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವಂತೆ ಈಗಾಗಲೇ ಮಾಲೀಕ್ವತ ಹೊಂದಿರುವ ಗ್ರಾಹಕರು ತಮ್ಮ ಸ್ನೇಹಿತರು ಮತ್ತು ಬಂಧು ಮಿತ್ರರಿಗೆ ಸಲಹೆ ನೀಡಿ ಇವಿ ಸ್ಕೂಟರ್ ಖರೀದಿ ಮಾಡುವಂತೆ ಮಾಡಿದ್ದಲ್ಲಿ ರೂ. 2,500 ಮೌಲ್ಯದ ಕ್ರೆಡಿಕ್ ಸ್ಕೋರ್ ಆಫರ್ ನೀಡಿದೆ.

ಸದ್ಯ ಮಾಲೀಕತ್ವ ಹೊಂದಿರುವ ಗ್ರಾಹಕರಿಗೆ ರೆಫರಲ್ ಕೋಡ್ ನೀಡಿರುವ ಎಥರ್ ಕಂಪನಿಯು ರೆಫರಲ್ ಕೋಡ್ ಆಧರಿಸಿ ಬರುವ ಗ್ರಾಹಕರಿಗೆ ಮತ್ತು ರೆಫರಲ್ ಕೋಡ್ ನೀಡಿ ಇವಿ ಸ್ಕೂಟರ್ ಖರೀದಿಗೆ ಬೆಂಬಲಿಸಿದ ಗ್ರಾಹಕನಿಗೂ ಆಫರ್ ನೀಡಲಿದೆ.

ರೂ. 2,500 ಮೌಲ್ಯದ ಕ್ರೆಡಿಡ್ ಸ್ಕೋರ್‌ಗಳನ್ನು ಹೊಸದಾಗಿ ಮಾಲೀಕತ್ವ ಹೊಂದುತ್ತಿರುವ ಮತ್ತು ಈಗಾಗಲೇ ಮಾಲೀಕತ್ವ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದ್ದು, ಕ್ರೆಡಿಟ್ ಸ್ಕೋರ್‌ಗಳ ಮೂಲಕ ಸರ್ವಿಸ್ ಚಾರ್ಜ್‌ಗಳಲ್ಲಿ ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ಇನ್ನು ಎಥರ್ ಎನರ್ಜಿ ಕಂಪನಿಯು ಆಟೋ ಮಾರುಕಟ್ಟೆಗೆ ಕಾಲಿಟ್ಟು ಯಶಸ್ವಿಯಾಗಿ 2 ವರ್ಷ ಪೂರೈಸಿ 3ನೇ ವರ್ಷದತ್ತ ಮುಂದುವರಿದಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ ಮಾಡುತ್ತಿದೆ.

ಬೆಂಗಳೂರು ಮತ್ತು ಚೆನ್ನೈ ನಂತರ ದೇಶದ ಪ್ರಮುಖ ಎಂಟು ನಗರಗಳಲ್ಲಿ ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದ್ದು, ನವೆಂಬರ್ ಆರಂಭದಲ್ಲಿ ಪುಣೆ ಮತ್ತು ಡಿಸೆಂಬರ್‌ನಲ್ಲಿ ಮುಂಬೈ ಮಾಹಾನಗರಗಳಲ್ಲಿ ಎಥರ್ ಇವಿ ಸ್ಕೂಟರ್ ಮಾರಾಟ ಆರಂಭವಾಗಲಿದೆ.

ತದನಂತರ ಹಂತ-ಹಂತವಾಗಿ ಮಾರಾಟ ಮಳಿಗೆಗಳನ್ನು ಎರಡನೇ ದರ್ಜೆ ಮಾಹಾನಗರಗಳಿಗೂ ವಿಸ್ತರಣೆ ಮಾಡಲಿದ್ದು, ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಆಧಾರದ ಮೇಲೆ ಇವಿ ವಾಹನ ಮಾರಾಟವನ್ನು ಹೆಚ್ಚಿಸಲಾಗುತ್ತಿದೆ.
MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ ಕಂಪನಿಯು ಸಾಮಾನ್ಯ ಮಾದರಿಯಾದ 450 ಮತ್ತು ಹೈ ಎಂಡ್ ಮಾದರಿಯಾಗಿ 450ಎಕ್ಸ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಗ್ರಾಹಕರ ಆಕರ್ಷಣೆಯಾಗಿದೆ.

ಸ್ಟ್ಯಾಂಡರ್ಡ್ ಮಾದರಿಯಾದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಪ್ಯಾನ್ ಇಂಡಿಯಾ ಪ್ರಕಾರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99 ಸಾವಿರ ಬೆಲೆ ಹೊಂದಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರು ಮಾಸಿಕ ಚಂದಾದಾರಿಕೆ ಯೋಜನೆಯಡಿ ಮೂರು ವರ್ಷಗಳ ತನಕ ಬ್ಯಾಟರಿ ಸೌಲಭ್ಯಕ್ಕಾಗಿ 450ಎಕ್ಸ್ ಪ್ಲಸ್ ಮಾದರಿಗೆ ಪ್ರತಿ ತಿಂಗಳು(ರೂ. 1,699) ಮತ್ತು 450ಎಕ್ಸ್ ಪ್ರೊ ಮಾದರಿಗೆ ಪ್ರತಿ ತಿಂಗಳು(ರೂ.1,999) ಪಾವತಿಸಬೇಕು.


Click it and Unblock the Notifications








