ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಬಜಾಜ್ ಆಟೋ ಭಾರತದ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿರುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಬಜಾಜ್ ಆಟೋ ಕಂಪನಿಯು ಈಗ ಪ್ರೀಮಿಯಂ ಬೈಕುಗಳ ತಯಾರಿಕೆಗಾಗಿ ಮಹಾರಾಷ್ಟ್ರದಲ್ಲಿ ಹೊಸ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಬಜಾಜ್ ಆಟೋ ಕಂಪನಿಯು ಸದ್ಯಕ್ಕೆ ಮಹಾರಾಷ್ಟ್ರದ ಪುಣೆಯ ಬಳಿಯ ಚಕಾನ್‌ನಲ್ಲಿ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಹೊಂದಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಈ ಘಟಕವು ಬಜಾಜ್ ಆಟೋ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಟಿಎಂ ಹಾಗೂ ಹಸ್ಕ್​ವರ್ನಾದಂತಹ ಪ್ರೀಮಿಯಂ ಬೈಕುಗಳನ್ನು ಸಹ ಉತ್ಪಾದಿಸುತ್ತದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ಬೈಕುಗಳನ್ನು ಭಾರತದಲ್ಲಿ ಮಾತ್ರಲ್ಲದೆ ವಿದೇಶಗಳಲ್ಲಿಯೂ ಬಳಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ತನ್ನ ಉತ್ಪಾದನಾ ಘಟಕದಲ್ಲಿ ಅಗ್ಗದ ಪ್ರೀಮಿಯಂ ಬೈಕುಗಳ ಉತ್ಪಾದನೆಗಾಗಿ ಇಂಗ್ಲೆಂಡ್ ಮೂಲದ ಟ್ರಯಂಫ್‌ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಜಾಜ್ ಆಟೋ ಕಂಪನಿಯು ನಿರ್ಧರಿಸಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಚಕಾನ್‌ನಲ್ಲಿರುವ ಬಜಾಜ್ ಉತ್ಪಾದನಾ ಘಟಕದಲ್ಲಿ ಬಜಾಜ್-ಟ್ರಯಂಫ್ ಬೈಕ್‌ಗಳನ್ನು ಉತ್ಪಾದಿಸಲು ಯೋಜಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಉತ್ಪಾದಿಸಲಾಗುವ ಎಲ್ಲಾ ಬೈಕುಗಳ ಅಗತ್ಯವನ್ನು ಪರಿಗಣಿಸಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಜಾಜ್ ಆಟೋ ನಿರ್ಧರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಬಜಾಜ್ ಆಟೋ, ಚಕಾನ್‌ನಲ್ಲಿ ಹೊಸ ಸ್ಥಾವರವನ್ನು ಸ್ಥಾಪಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.ರೂ.650 ಕೋಟಿಗಳ ಹೂಡಿಕೆಯೊಂದಿಗೆ ಹೊಸ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ಬಜಾಜ್ ಆಟೋ ತಿಳಿಸಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಈ ಹೊಸ ಉತ್ಪಾದನಾ ಘಟಕದಲ್ಲಿ 2023ರಿಂದ ವಾಹನಗಳ ಉತ್ಪಾದನೆಯನ್ನು ಆರಂಭಿಸಲಾಗುವುದು. ಈ ಘಟಕವು ಕೆಟಿಎಂ, ಹಸ್ಕ್​ವರ್ನಾ ಹಾಗೂ ಟ್ರಯಂಫ್ ಪ್ರೀಮಿಯಂ ಬೈಕ್‌ಗಳನ್ನು ಉತ್ಪಾದಿಸಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಇದರ ಜೊತೆಗೆ ಬಜಾಜ್ ಆಟೋ ತನ್ನದೇ ಆದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಈ ಘಟಕದಲ್ಲಿ ಉತ್ಪಾದಿಸಲು ನಿರ್ಧರಿಸಿದೆ. ಬಜಾಜ್ ಆಟೋ ಕಂಪನಿಯು ತನ್ನ ಸರಣಿಯ ಹಲವು ಜನಪ್ರಿಯ ಬೈಕುಗಳ ಬೆಲೆಯನ್ನು ಪರಿಷ್ಕರಿಸಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಇವುಗಳಲ್ಲಿ ಪ್ಲಾಟಿನ ಸರಣಿಯ ಪ್ಲಾಟಿನ 100 ಹಾಗೂ 110 ಮಾದರಿಗಳು ಕೂಡ ಸೇರಿವೆ. ಪ್ಲಾಟಿನಾ 100 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಈ ಬೈಕಿನಲ್ಲಿ ಹೆಚ್ಚಿನ ಮೈಲೇಜ್ ಹಾಗೂ ಪರ್ಫಾಮೆನ್ಸ್ ಪಡೆಯಲು ಬಜಾಜ್ ಆಟೋ ಕಂಪನಿಯು ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಿದೆ.

ಹೊಸ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾದ ಬಜಾಜ್ ಆಟೋ

ಬಜಾಜ್ ಕಂಪನಿಯು ತನ್ನ ಪಲ್ಸರ್‌ ಬೈಕಿನ ಎಲ್ಲಾ ಮಾದರಿಗಳ ಬೆಲೆಯನ್ನು ರೂ.1000ಗಳಿಂದ ರೂ.1500ಗಳವರೆಗೆ ಹೆಚ್ಚಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪಲ್ಸರ್ 125 ಸ್ಪ್ಲಿಟ್ ಸೀಟ್ ಡ್ರಮ್ ಮಾದರಿಯ ಬೆಲೆಯನ್ನೂ ಸಹ ಹೆಚ್ಚಿಸಲಾಗಿದೆ.

Most Read Articles

Kannada
English summary
Bajaj auto company to set up new manufacturing unit. Read in Kannada.
Story first published: Wednesday, December 23, 2020, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X