ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಮಾರಾಟ ವರದಿಯನ್ನು ಬಜಾಜ್ ಆಟೋ ಕಂಪನಿಯು ಬಿಡುಗಡೆಗೊಳಿಸಿದೆ. 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್-ಜೂನ್ ನಡುವಿನ ಅವಧಿಯಲ್ಲಿ ಕಂಪನಿಯ ವ್ಯವಹಾರವು 60.92%ನಷ್ಟು ಕುಸಿದಿದೆ ಎಂದು ಬಜಾಜ್ ತನ್ನ ವರದಿಯಲ್ಲಿ ಹೇಳಿದೆ.

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ರೂ.395.51 ಕೋಟಿಗಳಾಗಿದೆ. ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ ಲಾಭದ ಪ್ರಮಾಣವು ರೂ.1,012 ಕೋಟಿಗಳಾಗಿತ್ತು. ಕೋವಿಡ್ -19 ಕಾರಣದಿಂದಾಗಿ ಮಾರಾಟವು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ರಫ್ತಿನಲ್ಲೂ ಭಾರಿ ಇಳಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ. ಲಾಕ್ ಡೌನ್ ಕಾರಣದಿಂದಾಗಿ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿ ಏಪ್ರಿಲ್ - ಮೇ ತಿಂಗಳ ವಾಹನ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿತ್ತು.

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಬಜಾಜ್ ಆಟೋದ ನಿರ್ವಹಣಾ ಆದಾಯವು 60.92%ನಷ್ಟು ಕುಸಿದು ರೂ.3,079.24 ಕೋಟಿಗಳಿಗೆ ತಲುಪಿದೆ.ಹಿಂದಿನ ಹಣಕಾಸು ವರ್ಷದಲ್ಲಿ ಆದಾಯವು ರೂ.7,755.82 ಕೋಟಿಗಳಾಗಿತ್ತು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಸ್ವತಂತ್ರ ಆಧಾರದ ಮೇಲೆ, ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ರೂ.528.04 ಕೋಟಿಗಳಾಗಿದೆ. 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಪ್ರಮಾಣವು ರೂ.1,125.67 ಕೋಟಿಗಳಾಗಿತ್ತು.

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಜಾಜ್ ಆಟೋ 4,43,103 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 12,47,174 ಯುನಿಟ್ ಮಾರಾಟ ಮಾಡಲಾಗಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಪ್ರತಿ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, 2020ರ ಜೂನ್ ತಿಂಗಳ ಮಾರಾಟ ಪ್ರಮಾಣವು 31%ನಷ್ಟು ಕುಸಿದು 2,78,097 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ 4,04,624 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

2019ರ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜೂನ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟವು 34%ನಷ್ಟು ಕುಸಿತ ಕಂಡಿದೆ ಎಂದು ಕಂಪನಿ ಹೇಳಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷ 1,51,189 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,29,225 ಯುನಿಟ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಮಾರಾಟವಾಗಿದ್ದವು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಬಜಾಜ್ ಆಟೋ ವಹಿವಾಟು

ಲಾಕ್‌ಡೌನ್ ಮುಗಿದ ನಂತರ, ಕಂಪನಿಯು ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಪುನರಾರಂಭಿಸಿದೆ. ಕಂಪನಿಯು ತನ್ನ ಪೂರೈಕೆ ಸರಪಳಿಯನ್ನು ನವೀಕರಿಸುತ್ತಿದೆ. ಇದರ ಜೊತೆಗೆ ತನ್ನ ಡೀಲರ್ ಗಳಿಗೆ ವಾಹನಗಳನ್ನು ಸಾಗಿಸುತ್ತಿದೆ.

Article Published On: Wednesday, July 22, 2020, 20:24 [IST]
English summary
Bajaj auto releases first quarter sales report for FY 2020-21. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+