ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಮೇ 3ರ ತನಕ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ಸಡಿಲಿಕೆ ಮಾಡಲಾಗಿದ್ದು, ಬಜಾಜ್ ಆಟೋ ಉತ್ಪಾದನಾ ಕಂಪನಿಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೊಸ ವಾಹನ ಉತ್ಪಾದನೆಗೆ ಚಾಲನೆ ನೀಡಿದೆ.

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

2ನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನು ಹತ್ತು ದಿನ ಬಾಕಿ ಇರುವಾಗಲೇ ಹಸಿರು ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದು ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸುತ್ತಿವೆ. ಬಜಾಜ್ ಆಟೋ ಕಂಪನಿಯು ಕೂಡಾ ಎರಡು ಉತ್ಪಾದನಾ ಘಟಕಗಳನ್ನು ತೆರೆಯುತ್ತಿದ್ದು, ಇನ್ನೊಂದು ಘಟಕದಲ್ಲಿನ ಆಟೋ ಉತ್ಪಾದನೆಗೆ ಅವಕಾಶ ಸಿಕ್ಕಿಲ್ಲ.

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಮಾಹಾರಾಷ್ಟ್ರದ ಔರಂಗಾಬಾದ್ ಮತ್ತು ಉತ್ತರಾಖಂಡ್‌ನಲ್ಲಿರುವ ರುದ್ರಪುರ್‌ನಲ್ಲಿರುವ ವಾಹನ ಉತ್ಪಾದನಾ ಘಟಕಗಳನ್ನು ತೆರಯಲು ಮಾತ್ರವೇ ಅವಕಾಶ ಸಿಕ್ಕಿದ್ದು, ಮತ್ತೊಂದು ಅತಿ ದೊಡ್ಡ ಬೈಕ್ ಉತ್ಪಾದನಾ ಘಟಕವಾಗಿರುವ ಪುಣೆ ಚಾಕನ್ ಘಟಕದಲ್ಲಿನ ಉತ್ಪಾದನೆಗೆ ಸದ್ಯಕ್ಕೆ ಅವಕಾಶ ದೊರೆಯುವುದು ಅನುಮಾನ.

MOST READ: ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚುತ್ತೆ ಈ ವಿಶೇಷ ಇನೋವಾ ಕಾರು..!

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಪುಣೆಯಲ್ಲಿ ಮಹಾಮಾರಿ ಕರೋನಾ ವೈರಸ್ ಹೆಚ್ಚಿರುವುದರಿಂದ ಯಾವುದೇ ಕೈಗಾರಿಕೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು, ಮೇ 3ರ ನಂತರವಷ್ಟೇ ರೆಡ್ ಝೋನ್‌ನಲ್ಲಿರುವ ಕೈಗಾರಿಕೆಗಳಿಗೆ ಉತ್ಪಾದನಾಗೆ ವಿನಾಯ್ತಿ ನೀಡುವ ಬಗ್ಗೆ ನಿರ್ಧಾರವಾಗಲಿದೆ.

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಕೇಂದ್ರ ಸರ್ಕಾರ ನೀಡಿರುವ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

MOST READ: ಕರೋನಾ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಹಣ

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಕೈಗಾರಿಕೆ ಸಂಸ್ಥೆಗಳು ಕೇವಲ ಶೇ.30 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬೇಕಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಬಳಕೆ ಮಾಡಬೇಕು.

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಗಳಿಲ್ಲದೆ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದ ಕೈಗಾರಿಕೆ ವಲಯವು ಇದೀಗ ನೀಡಿರುವ ಕೆಲವು ವಿನಾಯ್ತಿಗಳಿಂದ ಉತ್ಪಾದನಾಗೆ ಮತ್ತೆ ಚಾಲನೆ ನೀಡಿರುವುದು ತುಸು ಸಮಾದಾನ ತಂದಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಆದರೆ ಉತ್ಪಾದನಾ ಸ್ಥಳದಲ್ಲಿ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ತೆಗೆದುಕೊಳ್ಳಬೇಕಿರುವುದು ಆಯಾ ಕಂಪನಿಗಳ ಆದ್ಯ ಕರ್ತವ್ಯವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಖಾತ್ರಿ ವ್ಯಕ್ತಪಡಿಸಿವೆ.

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್ ಸಡಿಲಿಕೆ: ಆಟೋ ಉತ್ಪಾದನೆಯನ್ನು ಪುನಾರಂಭಿಸಿದ ಬಜಾಜ್

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪನ್ನಗಳನ್ನು ತಯಾರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತಿವೆ.

Article Published On: Thursday, April 23, 2020, 13:51 [IST]
English summary
Bajaj Auto to resume operations in Aurangabad Rudrapur plants details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+