ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಬೈಕ್ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕ್‌ಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸುತ್ತಿದೆ. ಈ ಪಟ್ಟಿಯಲ್ಲಿ ಬಜಾಜ್‌ನ ಅವೆಂಜರ್ ಸ್ಟ್ರೀಟ್ 160 ಬಿಎಸ್ 6 ಹಾಗೂ ಅವೆಂಜರ್ ಕ್ರೂಸ್ 220 ಬಿಎಸ್ 6 ಬೈಕುಗಳು ಸಹ ಸೇರಿವೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಬಜಾಜ್ ಕಂಪನಿಯು ಈ ಎರಡು ಬೈಕುಗಳನ್ನು ಬಿಡುಗಡೆಗೊಳಿಸಿದೆ. ಅವೆಂಜರ್ ಸ್ಟ್ರೀಟ್ 160 ಬಿಎಸ್ 6 ಬೈಕಿನ ಬೆಲೆ ರೂ.93,677ಗಳಾಗಿದ್ದರೆ, ಅವೆಂಜರ್ ಕ್ರೂಸ್ 220 ಬಿಎಸ್ 6 ಬೈಕಿನ ಬೆಲೆ ರೂ.1.16 ಲಕ್ಷಗಳಾಗಿದೆ. ಈ ದರಗಳು ಎಕ್ಸ್ ಶೋರೂಂ ಬೆಲೆಗಳಾಗಿವೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಬಿಎಸ್ 4 ಬೈಕುಗಳಿಗೆ ಹೊಲಿಸಿದರೆ ಅವೆಂಜರ್ ಸ್ಟ್ರೀಟ್ 160 ಬೈಕಿನ ಬೆಲೆ ರೂ.12,000ಗಳಷ್ಟು ಹೆಚ್ಚಾಗಿದ್ದರೆ, ಅವೆಂಜರ್ ಕ್ರೂಸ್ 220 ಬೈಕಿನ ಬೆಲೆ ರೂ.11,500ಗಳಷ್ಟು ಹೆಚ್ಚಾಗಿದೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಅವೆಂಜರ್ ಕ್ರೂಸ್ 220 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಬಜಾಜ್ ಅವೆಂಜರ್ ಕ್ರೂಸ್ 220 ಬೈಕಿನಲ್ಲಿ 220 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್‌ನಲ್ಲಿ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಬಳಸಲಾಗಿದೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.7 ಬಿಹೆಚ್‌ಪಿ ಪವರ್ ಹಾಗೂ 7,000 ಆರ್‌ಪಿಎಂನಲ್ಲಿ 17.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನಲ್ಲಿಯೂ ಸಹ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಬಳಸಲಾಗಿದೆ.

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಬಜಾಜ್ ಬೈಕುಗಳು

ಹೊಸ ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿರುವ ಎಂಜಿನ್ 14.8 ಬಿಹೆಚ್‌ಪಿ ಪವರ್ ಹಾಗೂ 13.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

Article Published On: Friday, April 3, 2020, 18:42 [IST]
English summary
Bajaj Avenger bikes launched in BS6 engine. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+