ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಬಜಾಜ್ ಕಂಪನಿಯ ಸರಣಿಯಲ್ಲಿ ಜನಪ್ರಿಯ ಬೈಕುಗಳಲ್ಲಿ ಡೊಮಿನಾರ್ 400 ಕೂಡ ಒಂದಾಗಿದೆ. ಫಿಲಿಪೈನ್ಸ್ ಮೂಲದ ಎಂಸಿ ಕಸ್ಟಮ್ಸ್ ಪಿಹೆಚ್ ಅವರು ಬಜಾಜ್ ಡೊಮಿನಾರ್ 400 ಬೈಕನ್ನು ಆಕರ್ಷಕವಾಗಿ ಮಾಡಿಫೈ ಮಾಡಲಾಗಿದೆ.

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಡೊಮಿನಾರ್ 400 ಬೈಕಿನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಮಾಡಿಫೈ ಮಾಡಲಾದ ಬಜಾಜ್ ಡೊಮಿನಾರ್ ಬೈಕ್ ಸ್ಟ್ರೀಟ್ ಫೈಟರ್ ಹೈಬ್ರಿಡ್ ಮಾದರಿಯ ಲುಕ್ ಅನ್ನು ಹೊಂದಿದೆ. ಎಂಸಿ ಕಸ್ಟಮ್ಸ್ ಪಿಹೆಚ್ ಅವರು ಈ ಬೈಕನ್ನು ಮಾಡಿಫೈಗೊಳಿಸಿ ಲಿನೊ ಎಂಬ ಹೆಸರನ್ನು ಇಡಲಾಗಿದೆ. ಎಂಸಿ ಕಸ್ಟಮ್ಸ್ ಪಿಹೆಚ್ ಅವರು ಮಾಡಿಫೈ ಮಾಡಲಾದ ಡೊಮಿನಾರ್ ಬೈಕನ್ನು ಎರುಬ್ಜ್ ಜುನಿಯೊ ಅವರು ಹೊಂದಿದ್ದಾರೆ. ಅವರ ಬಳಿ ಕವಾಸಕಿ ಇಆರ್ 6 ಎನ್ ಮತ್ತು ನಿಂಜಾ 650 ಬೈಕುಗಳು ಸೇರಿದಂತೆ ಅನೇಕ ಸೂಪರ್ ಬೈಕನ್ನು ಹೊಂದಿದ್ದಾರೆ.

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಮಾಡಿಫೈ ಮಾಡಲಾದ ಡೊಮಿನಾರ್ 400 ಬೈಕನ್ನು ಇವರು ದೈನಂದಿನವಾಗಿ ಓಡಾಡಲು ಬಳಕೆ ಮಾಡುತ್ತಾರೆ. ಅವರು ಸ್ವತಃ ಬೈಕನ್ನು ಡೊಮಿನಾರ್ 400 ಬೈಕನ್ನು ಮಾಡಿಫೈ ಮಾಡಿದ್ದಾರೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಬಜಾಜ್ ಡೊಮಿನಾರ್ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಎಲ್ಇಡಿ ಹೆಡ್ ಲ್ಯಾಂಪ್, ರೌಂಡ್ ಮಿರರ್ಸ್, ರೈಸ್ಡ್ ಹ್ಯಾಂಡಲ್ ಬಾರ್, ಬಾರ್-ಎಂಡ್ ಟರ್ನ್ ಸಿಗ್ನಲ್ ಇಂಡಿಕೇಟರ್, ಡ್ಯುಯಲ್-ಸ್ಪೋರ್ಟ್ ಟಯರ್, ಟ್ಯಾನ್ ಕಲರ್ ಸೀಟ್ ಮತ್ತು ಹೊಸ ಹ್ಯಾಂಡಲ್ ಬಾರ್ ಅನ್ನು ಅಳವಡಿಸಲಾಗಿದೆ. ಇನ್ನು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಬಜಾಜ್ ಕಂಪನಿಯು ಬಿಎಸ್-6 ಡೊಮಿನಾರ್ 400 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕಿನ ಬೆಲೆಯು ರೂ. 1.91 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಹೊಸ ಎಮಿಷನ್ ನಿಯಮದ ನಂತರವು ಡೊಮಿನಾರ್ 400 ಪರ್ಫಾಮೆನ್ಸ್‌‌ನಲ್ಲಿ ಯಾವುದೇ ರೀತಿಯ ಕಡಿತ ಮಾಡದ ಬಜಾಜ್ ಆಟೋ ಕಂಪನಿಯು ಉತ್ತಮ ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆ ಮತ್ತು ಕನಿಷ್ಠ ಪ್ರಮಾಣದ ಮಾಲಿನ್ಯ ಹೊರಸೂಸುವಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿರಲಿದೆ.ಈ ಎಂಜಿನ್ 8800 ಆರ್‍‍ಪಿಎಂನಲ್ಲಿ 39.4 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಹಾಗೆಯೇ ಹೊಸ ಬೈಕಿನಲ್ಲಿ ಈ ಹಿಂದಿನಂತೆಯೇ ಸಸ್ಪೆಷನ್ ಮತ್ತು ಬ್ರೇಕಿಂಗ್ ಸೆಟ್‌ಅಪ್ ಜೋಡಿಸಲಾಗಿದ್ದು, ಮುಂಭಾಗದಲ್ಲಿ ಯುಎಸ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ಜೊತೆಗೆ 320-ಎಂಎಂ ಫ್ರಂಟ್ ಮತ್ತು 230-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಸ್ಟ್ರೀಟ್ ಫೈಟರ್ ಶೈಲಿಯಲ್ಲಿ ಮಾಡಿಫೈಗೊಂಡ ಬಜಾಜ್ ಡೊಮಿನಾರ್ 400 ಬೈಕ್

ಬಿಎಸ್-6 ಡೋಮಿನಾರ್ 400 ಬೈಕ್ ಭಾರತದಲ್ಲಿ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Bajaj Dominar 400 Modified By MC Customs Ph. Read in Kaannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X