100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಖ್ಯಾತ ಬೈಕ್ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪ್ಯಾಸೆಂಜರ್ ಬೈಕ್ ಸೆಗ್ ಮೆಂಟ್ ಅನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಈ ಕಾರಣಕ್ಕೆ ಕಂಪನಿಯು ತನ್ನ ಬಜಾಜ್ ಪ್ಲಾಟಿನಾ 100 ಬೈಕ್ ಸರಣಿಯಲ್ಲಿ ಮತ್ತೊಂದು ಬೈಕ್ ಅನ್ನು ಬಿಡುಗಡೆಗೊಳಿಸಿದೆ.

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಬಜಾಜ್ ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸಿರುವ ಡಿಸ್ಕ್ ಬ್ರೇಕ್ ಮಾದರಿಯಲ್ಲಿ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ವರ್ಷದ ಆರಂಭದಲ್ಲಿ ಬಜಾಜ್ ಆಟೋ ಕಂಪನಿಯು 13 ಬದಲಾವಣೆಗಳೊಂದಿಗೆ ಹೊಸ ಪ್ಲಾಟಿನಾ 100 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈಗ ಬಿಡುಗಡೆಯಾಗಿರುವ ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ 59,373ಗಳಾಗಿದೆ.

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.55,546ಗಳಾಗಿದೆ. ಈ ಬೈಕಿನ ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.49,261ಗಳಾಗಿದೆ. ಹೊಸ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಕಂಪನಿಯು ಈ ಬೈಕಿನಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಕಂಪನಿಯು ಬೈಕಿನ ಬೆಲೆಯನ್ನು ರೂ.4,000ಗಳಷ್ಟು ಹೆಚ್ಚಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಯಾವುದೇ ಕಂಪನಿಯು 100 ಸಿಸಿ ಸೆಗ್ ಮೆಂಟಿನಲ್ಲಿ ಹಾಗೂ ಪ್ಯಾಸೆಂಜರ್ ಬೈಕ್ ಸೆಗ್ ಮೆಂಟಿನಲ್ಲಿ ಡಿಸ್ಕ್ ಬ್ರೇಕ್ ಮಾದರಿಯನ್ನು ಬಿಡುಗಡೆಗೊಳಿಸಿಲ್ಲ.

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಬಜಾಜ್ ಪ್ಲಾಟಿನಾ 100 ಸರಣಿಯ ಬೈಕಿನಲ್ಲಿ 102 ಸಿಸಿಯ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.7 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡಿನ ಗೇರ್‌ಬಾಕ್ಸ್ ಹೊಂದಿರುವ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಪ್ಲಾಟಿನಾ 100 ಬೈಕ್ ಇಇಎಸ್ ಹ್ಯಾಲೊಜೆನ್ ಹೆಡ್‌ಲೈಟ್‌ನೊಂದಿಗೆ ಎಲ್‌ಇಡಿ ಟೇಲ್‌ಲೈಟ್ ಹಾಗೂ ಹೆಡ್‌ಲೈಟ್‌ನಲ್ಲಿ ಉದ್ದವಾದ ವೈಸರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕ್ವಿಲ್ಟೆಡ್ ಸೀಟ್ ಹಾಗೂ ಆರಾಮದಾಯಕ ಸವಾರಿಗಾಗಿ ನೈಟ್ರಾಕ್ಸ್ ಸಸ್ಪೆಂಷನ್ ಅಳವಡಿಸಲಾಗಿದೆ.

100 ಸಿಸಿ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಸ್ಕ್ ಬ್ರೇಕ್ ನಲ್ಲಿ ಬಿಡುಗಡೆಯಾದ ಪ್ಲಾಟಿನಾ ಬೈಕ್

ಈ ಬೈಕಿನಲ್ಲಿ ಪಿಲಿಯನ್ ರೈಡರ್ ಗಳಿಗಾಗಿ ರಬ್ಬರ್ ಫುಟ್‌ಪ್ಯಾಡ್‌ಗಳನ್ನು ನೀಡಲಾಗಿದೆ. ಪ್ಲಾಟಿನಾ ಬೈಕ್ ಇತರ 100 ಸಿಸಿ ಬೈಕ್‌ಗಳಿಗಿಂತ ಹೆಚ್ಚಿನ ಆರಾಮವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ಲಾಟಿನಾ 100 ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 75-100 ಕಿ.ಮೀವರೆಗಿನ ಮೈಲೇಜ್ ನೀಡುತ್ತದೆ.

Article Published On: Tuesday, July 7, 2020, 19:03 [IST]
English summary
Bajaj launches Platina 100 ES Disc brake variant details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+