ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಬಜಾಜ್ ಆಟೋ ತನ್ನ ಸರಣಿಯ ಹಲವಾರು ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ ಪಟ್ಟಿಯಲ್ಲಿ ಪ್ಲಾಟಿನಾ 100 ಮತ್ತು 110 ಮಾದರಿಗಳು ಕೂಡ ಸೇರಿವೆ. ಈ ಎರಡು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಬಿಎಸ್-6 ಪ್ಲಾಟಿನಾ 100 ಮತ್ತು ಪ್ಲಾಟಿನಾ 110 ಬೈಕುಗಳ ಬೆಲೆಯನ್ನು ಕ್ರಮವಾಗಿ ರೂ.1,498 ಮತ್ತು ರೂ 2,349 ಗಳವರೆಗೆ ಹೆಚ್ಚಿಸಿದೆ. ಈ ಎರಡು ಮಾದರಿಗಳಿಗೆ ಬಜಾಜ್ ಆಟೋ ಕಂಪನಿಯು ಬೆಲೆ ಹೆಚ್ಚಿಸಿದ ಬಳಿಕ ಪ್ಲಾಟಿನಾ 100 ಬೈಕಿಗೆ ರೂ.49,261 ಗಳಾದರೆ, ಪ್ಲಾಟಿನಾ 110 ಬೆಲೆ ರೂ.62,899 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಈ ಪ್ಲಾಟಿನಾ 100 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಮೈಲೇಜ್ ಗಾಗಿ ಮತ್ತು ಕಾರ್ಯಕ್ಷಮತೆಗಾಗಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.7 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಬಜಾಜ್ ಪ್ಲಾಟಿನಾ 100 ಬೈಕ್ ಪ್ರತಿ ಗಂಟೆಗೆ 90 ಕಿ.ಮೀ ಕ್ರಮಿಸುತ್ತದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಹೊಸ ಬಜಾಜ್ ಪ್ಲಾಟಿನಾ 100 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಹೊರತಾಗಿ ಈ ಬೈಕಿನ ವಿನ್ಯಾಸದಲ್ಲಿಯು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬೈಕಿನಲ್ಲಿ ಹೊಸ ಬಣ್ಣದ ವಿಂಡ್‌ಸ್ಕ್ರೀನ್ ಅಳವಡಿಸಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

2020 ಬಜಾಜ್ ಪ್ಲಾಟಿನಾ 100 ಬೈಕ್ ಗಾತ್ರದಲ್ಲಿ ಬದಲಾಗಿಲ್ಲ ಎಂಬುದನ್ನೂ ಗಮನಿಸಬೇಕಾದ ಸಂಗತಿ. ಬಜಾಜ್ ಪ್ಲಾಟಿನಾ 100 ಬೈಕ್ 2003 ಎಂಎಂ ಉದ್ದ, 713 ಎಂಎಂ ಅಗಲ ಮತ್ತು 1100 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಬೈಕ್ 1,255 ಎಂಎಂ ಉದ್ದದ ವ್ಹೀಲ್ ಬೇಸ್‌ ಅನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಬಿಎಸ್-6 ಬಜಾಜ್ ಪ್ಲಾಟಿನಾ 110 ಈ ಬೈಕಿನಲ್ಲಿ ಹಿಂದಿನ ಮಾದರಿಯಂತೆ 115.45 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಮತ್ತು 5000 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ದುಬಾರಿ ಕವಾಸಕಿ ಝಡ್‍ಎಕ್ಸ್ 25ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಹೊಸ ಬಜಾಜ್ ಪ್ಲಾಟಿನಾ 110 ಬೈಕಿನಲ್ಲಿ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಸ್ಪ್ರಿಂಗ್ ಸೆಟಪ್ ಅನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪ್ಲಾಟಿನಾ ಬೈಕುಗಳು

ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಬಿಎಸ್ (ಕಾಂಬಿ-ಬ್ರೇಕಿಂಗ್ ಸಿಸ್ಟಂ) ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

Most Read Articles

Kannada
English summary
Bajaj Platina 100 & 110 BS6 Price Increase Announced. Read In Kannada.
Story first published: Thursday, June 11, 2020, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X