ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಬಜಾಜ್ ಆಟೋ ಕಂಪನಿಯು ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದೀಗ ಬಜಾಜ್ ಕಂಪನಿಯು ತನ್ನ ಜನಪ್ರಿಯ ಮಾದರಿಯಾದ ಪಲ್ಸರ್ 125 ನಿಯೊನ್ ಬೈಕಿನ ಬೆಲೆಯನ್ನು ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಬಿಎಸ್-6 ಬಜಾಜ್ ಪಲ್ಸರ್ 125 ನಿಯೊನ್ ಬೈಕನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.69.997 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಈ ಮಾದರಿಯ ಬೆಲೆಯನ್ನು ರೂ.998ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಬಿಎಸ್-6 ಬಜಾಜ್ ಪಲ್ಸರ್ 125 ನಿಯೊನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.70,995 ಗಳಾಗಿದೆ. ಕೊರೊನಾ ಭೀತಿಯ ನಡುವೆ ಪಲ್ಸರ್ ಪ್ರಿಯರಿಗೆ ಬಜಾಜ್ ಕಂಪನಿಯು ಬೆಲೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಇನ್ನು ಪಲ್ಸರ್ ಸರಣಿಯ 125 ನಿಯೊನ್ ಎಂಟ್ರಿ ಲೆವೆಲ್ ಬೈಕನ್ನು ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.ಇನ್ನು ಪಲ್ಸರ್ 125 ಟಾಪ್-ಸ್ಪೆಕ್ ‘ಡಿಸ್ಕ್' ರೂಪಾಂತರದ ಬೆಲೆಯನ್ನು ರೂ.1,376 ಗಳವರೆಗೆ ಹೆಚ್ಚಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಬೆಲೆ ಹೆಚ್ಚಿಸಿದ ಬಳಿಕ ಟಾಪ್ ಸ್ಪೆಕ್ ಪಲ್ಸರ್ 125 ನಿಯೊನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.75,494 ಗಳಾಗಿದೆ. ಬಜಾಜ್ ಪಲ್ಸರ್ 125 ನಿಯೊನ್ ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಎಂಜಿನ್ 12 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಮಾದರಿಯಂತೆ ಪವರ್ ಮತ್ತು ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು -ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಬಿಎಸ್-6 ನವೀಕರಣದ ಹೊರತಾಗಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್ 140 ಕಿಲೋಗ್ರಾಂಗಳಷ್ಟು ತೂಕವಿದೆ. ಈ ಸರಣಿಯಲ್ಲಿ ಹೆಚ್ಚು ತೂಕ ವಿರುವ ಬೈಕ್ ಆಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಹೊಸ ಬಜಾಜ್ ಪಲ್ಸರ್ 125 ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್, ಅಲಾಯ್ ವ್ಹೀಲ್, ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಬೈಕಿನ ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್, ಹ್ಯಾಲೊಜೆನ್ ಹೆಡ್‍‍ಲೈಟ್ ಅನ್ನು ಹೊಂದಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಹೊಸ ಬಜಾಜ್ ಪಲ್ಸರ್ 125 ನಿಯೊನ್ ಬೈಕಿನ ಹಿಂಭಾಗದಲ್ಲಿ ಕೌಲ್‌ನಲ್ಲಿ 3 ಡಿ ರೂಪಾಂತರ ಲೋಗೊ, ಅಲಾಯ್ ವ್ಹೀಲ್, ಪಲ್ಸರ್ ಲೋಗೊ ಮತ್ತು ಗ್ರ್ಯಾಬ್ ರೈಲ್ ಅನ್ನು ಹೂಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಹೊಸ ಪಲ್ಸರ್ 125 ನಿಯೊನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಮತ್ತು ಆರ್‍‍ಸಿ 125 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿಎಸ್-6 ಬಜಾಜ್ ಪಲ್ಸರ್ 125 ನಿಯೊನ್ ಬೈಕಿನ ಬೆಲೆ ಏರಿಕೆ ಮಾಡಿರುವುದರಿಂದ ಮಾರಾಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

Article Published On: Wednesday, June 3, 2020, 19:46 [IST]
English summary
Bajaj Pulsar 125 Neon BS6 gets slightly costlier. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+