ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಬೈಕುಗಳು
ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ಪಲ್ಸರ್ ಸರಣಿಯ ಬೈಕುಗಳು ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕುಗಳು ಸಾಕಷ್ಟು ದಾಖಲೆಗಳನ್ನು ಮಾಡಿದೆ.

ಬಜಾಜ್ ಪಲ್ಸರ್ ಸರಣಿಯಲ್ಲಿ ಆರ್‍ಎಸ್200 ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಇದೀಗ ಬಜಾಜ್ ಆಟೋ ಕಂಪನಿಯು ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯನ್ನು ರೂ.3,501ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ,1,48,467 ಗಳಾಗಿದೆ. ಹೊಸ ಪಲ್ಸರ್ ಆರ್‍ಎಸ್200 ಬೈಕಿನಲ್ಲಿರುವ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‍ಗಳನ್ನು ಬೇರೆ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುವಂತೆ ಅಪ್‍ಗ್ರೇಡ್ ಮಾಡಲಾಗಿದೆ. ಯುವಜನತೆಯನ್ನು ಆಕರ್ಷಿಸುವಂತಹ ಆಕರ್ಷಕ ಲುಕ್ ಅನ್ನು ಈ ಬೈಕ್ ಹೊಂದಿದೆ.

ಹೊಸ ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿಹೆಚ್‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಲಿರುವ ಪಲ್ಸರ್ ಆರ್‍ಎಸ್ 200 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ. ಆಂಕರಿಂಗ್ ಪವರ್‍ಗಾಗಿ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್ ಡಿಸ್ಕ್ ಬ್ರೇಕ್‌ಗಳಿವೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಪಲ್ಸರ್ ಆರ್‍ಎಸ್ 200 ಬೈಕಿನಲ್ಲಿ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಟ್ವಿನ್ ಪಾಡ್ ಪ್ರೊಜೆಕ್ಟರ್‍ಗಳು, ಎಲ್ಇಡಿ ಟೇಲ್‍ಲೈಟ್, ಬ್ಲಿಂಕರ್‍ಗಳು, ಪೂರ್ಣ ಪ್ರಮಾಣದ ಫೇರಿಂಗ್ ಡಿಸೈನ್, ಮಸ್ಕ್ಯುಲರ್ ಶೇಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳಿವೆ.

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಮಾದರಿಯಾದ ಪಲ್ಸರ್ ಎನ್‍ಎಸ್200 ಬೈಕ್ ಅನ್ನು ಬಿಎಸ್-6 ಆವೃತ್ತಿಯಲ್ಲಿ ಇತ್ತೀಚೆಗೆಬಿಡುಗಡೆಗೊಳಿಸಿತ್ತು. ಬಜಾಜ್ ಆಟೋ ಕಂಪನಿಯು ಈ ಪಲ್ಸರ್ ಎನ್‍ಎಸ್200 ಬೈಕಿನ ಬೆಲೆಯನ್ನು ಕೂಡ ಅದೇ ಮಾದರಿಯಲ್ಲಿ ರೂ.3,501ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ,1,28,531 ಗಳಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಎಸ್-6 ಪಲ್ಸರ್ ಎನ್‍ಎಸ್200 ಬೈಕಿನಲ್ಲಿ 99.5 ಸಿಸಿ, ನಾಲ್ಕು-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 24.2 ಬಿಹೆಚ್‌ಪಿ ಪವರ್ ಮತ್ತು 18.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಯಾವುದೇ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿಲ್ಲ. ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಬದಲಾವಣೆ ಮಾಡಲಾಗಿಲ್ಲ. ಹೊಸ ಪಲ್ಸರ್ ಎನ್‍ಎಸ್200 ಕಪ್ಪು, ಬಿಳಿ, ಕೆಂಪು ಮತ್ತು ಹಳದಿ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ


Click it and Unblock the Notifications








