ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 400 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಈ ಸ್ಪೋರ್ಟ್ ಟೂರರ್ ಬೈಕ್ ಆದ ಡೋಮಿನಾರ್ 400 ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಆಟೋ ಕಂಪನಿಯು ಕಳೆದ ವಾರ ತನ್ನ ಪಲ್ಸರ್ 150 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿತ್ತು. ಬಿಎಸ್-6 ಡೋಮಿನಾರ್ ಬೈಕಿನ ಬೆಲೆಯನ್ನು ತುಸು ಹೆಚ್ಚಿಸಲಾಗಿದೆ. ಬಿಎಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,90,002 ಲಕ್ಷಗಳಾಗಿದೆ. ಇನ್ನೂ ಡೋಮಿನಾರ್ 400 ಬೈಕಿನ ಅನ್‍-ರೋಡ್ ಬೆಲೆಯು ಸುಮಾರು ರೂ.2.35 ಲಕ್ಷಗಳಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಇನ್ನು ಹಿಂದಿನ ಮಾದರಿ ಬಿಎಸ್-4 ಡೋಮಿನಾರ್‍ ಬೆಲೆಯನ್ನು ಹೋಲಿಸಿದರೆ ಕೇವಲ ರೂ.1,749 ಹೆಚ್ಚಿಸಿದೆ. ಬಜಾಜ್ ಆಟೋ ಕಂಪನಿಯು 2019ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಿಂದಿನ ಮಾದರಿ ಡೋಮಿನಾರ್ 400 ಬೈಕಿನ ಬೆಲೆಯನ್ನು ಸುಮಾರು ರೂ,10,000ಗಳವರೆಗೆ ಹೆಚ್ಚಿಸಿದರು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ನಂತರದ ದಿನಗಳಲ್ಲಿ ಇದೇ ಬೈಕಿನ ಬೆಲೆಯನ್ನು ಮತ್ತೆ ರೂ.6,000 ಗಳವರೆಗೆ ಹೆಚ್ಚಿಸಲಾಗಿತ್ತು. ಹೊಸ ಡೋಮಿನಾರ್ 400 ಬೈಕ್ ಬಿಎಸ್-6 ಪ್ರೇರಣ ಎಪ್‍‍ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍‍ನೊದಿಗೆ ಇಸಿಯು ಮತ್ತು ಕಟಲ್ಯಾಟಿಕ್ ಕರ್ನ್‍‍ವಾಟರ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್‍ನ ಕಾರ್ಯಕ್ಷಮತೆಯ ಬಗ್ಗೆ ಕುರಿತು ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಡೋಮಿನಾರ್ 400 ಬೈಕ್ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 8650 ಆರ್‍‍ಪಿಎಂನಲ್ಲಿ 40 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಹೊಸ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಬೈಕ್ ಅನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಡೋಮಿನಾರ್ ಬೈಕಿನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಈ ಡೋಮಿನಾರ್ ಬೈಕಿನ 180 ಯುನಿ‍ಟ್‍‍ಗಳು ಮಾತ್ರ ಮಾರಾಟವಾಗಿವೆ. ಬಜಾಜ್ ಕಂಪನಿಯ ಸರಣಿಯಲ್ಲಿ ಅತಿ ಕಡೆಮೆ ಮಾರಾಟವಾಗುವ ಬೈಕ್‍‍ಗಳಲ್ಲಿ ಒಂದಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಡೋಮಿನಾರ್ ಬಿಎಸ್-6 ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಬಿಎಸ್-6 ಡೋಮಿನಾರ್ 400 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
BS6 Bajaj Dominar launch price is Rs 2k more than BS4. Read in Kannada.
Story first published: Thursday, February 13, 2020, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X