ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ 125 ಬೈಕ್
ಬಜಾಜ್ ಆಟೋ ಕಂಪನಿಯು ಬಿಎಸ್-6 ಪಲ್ಸರ್ 125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಬಿಎಸ್-6 ಪಲ್ಸರ್ 125 ಮಾದರಿಯ ಹಲವು ಪ್ರಮುಖ ಮಾದರಿಗಳು ಬಹಿರಂಗವಾಗಿವೆ.

ಪಲ್ಸರ್ 125 ಬೈಕ್‍ಗಾಗಿ ಅನಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಪಲ್ಸರ್ 125 ಬೈಕಿನ ಬುಕ್ಕಿಂಗ್ ಮೊತ್ತವು ಡೀಲರ್‍ಗಳನ್ನು ಅವಲಂಭಿಸಿದೆ. ಬಿಎಸ್-6 ಪಲ್ಸರ್ 125 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.73,000 ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ರೂ.6,500 ಅಧಿಕವಾಗಬಹುದು. ಬಿಎಸ್-6 ಪಲ್ಸರ್ 125 ಬೈಕಿನ ಪ್ರಮುಖ ಮಾಹಿತಿಗಳನ್ನು ಇಂಡಿಯಾನ್ ಆಟೋ ಬ್ಲಾಗ್ ಬಹಿರಂಗಪಡಿಸಿದೆ.

ಬಹಿರಂಗವಾಗಿರುವ ಮಾಹಿತಿಯ ಪ್ರಕಾರ, ಬಿಎಸ್-6 ಬಜಾಜ್ ಪಲ್ಸರ್ 125 ಬೈಕಿನಲ್ಲಿ ಅದೇ 124.4 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಆದರೆ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗುತ್ತದೆ.

ಇದರಲ್ಲಿ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗುತ್ತದೆ. ಇದು ಸುಗುಮ ಥ್ರೊಟಲ್ ಪ್ರತಿಕ್ರಿಯೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ ಕಾಟಲ್ಯಾಕ್ ಕರ್ನವಾಟರ್ ಮತ್ತು ಆಕ್ಸಿಜನ್ ಸೆನ್ಸಾರ್ ಅನ್ನು ನವೀಕರಿಸಲಾಗಿದೆ.

ಆದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸದ ಈ ಎಂಜಿನ್ 8,500 ಆರ್‍ಪಿಎಂನಲ್ಲಿ 8.68 ಬಿಹೆಚ್‍ಪಿ ಪವರ್ ಅಥವಾ11.8 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನ ಟಾರ್ಕ್ ಉತ್ಪಾದನೆಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಹಿಂದಿನ ಮಾದರಿಯಂತೆ ಟಾರ್ಕ್ ಉತ್ಪಾದಿಸಬಹುದು. ಅಂದರೆ 6,500 ಆರ್‍ಪಿಎಂನಲ್ಲಿ 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಹೊಸ ಬಜಾಜ್ ಪಲ್ಸರ್ 125 ಬೈಕ್ 2,055 ಎಂಎಂ ಉದ್ದ, 755 ಎಂಎಂ ಅಗಲ ಮತ್ತು 1,060 ಎಂಎಂ ಎತ್ತರ ಮತ್ತು 1,320 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿರುತ್ತದೆ.

ಹೊಸ ಬಜಾಜ್ ಪಲ್ಸರ್ 125 ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್, ಅಲಾಯ್ ವ್ಹೀಲ್, ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಬೈಕಿನ ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್, ಹ್ಯಾಲೊಜೆನ್ ಹೆಡ್‍ಲೈಟ್ ಅನ್ನು ಹೊಂದಿರಲಿದೆ.

ಹೊಸ ಬಜಾಜ್ ಪಲ್ಸರ್ 125 ಬೈಕಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ. ಹೊಸ ಬಜಾಜ್ ಕಂಪನಿಯು ತನ್ನ ಪಲ್ಸರ್ 125 ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.


Click it and Unblock the Notifications