ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಜನಪ್ರಿಯ ಮಾದರಿಗಳ ಬೆಲೆಯನ್ನು ಏರಿಸಿದೆ. ಈ ಪಟ್ಟಿಯಲ್ಲಿ ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯು ಕೂಡ ಸೇರ್ಪಡೆಯಾಗಿದೆ.

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಈ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.93,677 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ನಂತರ ಈ ಮಾದರಿಯ ಬೆಲೆಯನ್ನು ರೂ.1,216 ರವರೆಗೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಈ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕಿನ ಬೆಲೆಯನ್ನು ರೂ.1,000 ಗಳವರೆಗೆ ಹೆಚ್ಚಿಸಲಾಗಿದೆ.

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಬೆಲೆಯನ್ನು ಹೆಚ್ಚಿಸಿದರು ಬಜಾಜ್ ಅವೆಂಜರ್ ಸ್ಟ್ರೀಟ್ 160 ಉತ್ತಮ ಕ್ರೂಸರ್ ಮಾದರಿಯಾಗಿದೆ. ಇನ್ನು ಅವೆಂಜರ್ ಸ್ಟ್ರೀಟ್ 160 ಬೈಕನ್ನು ತನ್ನ ಪ್ರತಿಸ್ಪರ್ಧಿ ಸುಜುಕಿ ಇನ್‌ಟ್ರುಡರ್ ಮಾದರಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಇದೀಗ ಈ ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.95,891 ಗಳಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಿಎಸ್-6 ಅಪ್‌ಡೇಟ್‌ನ ನಂತರ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯು ಪಡೆದ ಎರಡನೇ ಬೆಲೆ ಏರಿಕೆ ಇದಾಗಿದೆ.

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಬೆಲೆಯನ್ನು ಹೊರತುಪಡಿಸಿ ಇತರ ಬದಲಾವಣೆಗಳು ಯಾವುದು ಇಲ್ಲ. ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನಲ್ಲಿ ಸಹ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿರುವ ಎಂಜಿನ್ 14.8 ಬಿಹೆಚ್‌ಪಿ ಪವರ್ ಹಾಗೂ 13.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಈ ಬೈಕಿನಲ್ಲಿ ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಅವೆಂಜರ್ ಕ್ರೂಸ್ 220 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಇದರೊಂದಿಗೆ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್ 200 ಬೈಕಿನ ಬೆಲೆಯನ್ನು ರೂ.999 ಗಳವರೆಗ ಹೆಚ್ಚಿಸಿದೆ. ಇದೀಗ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್ 200 ಬೈಕಿನ ಬೆಲೆಯು ಪುಣೆಯ ಎಕ್ಸ್ ಶೋರೂಂ ಪ್ರಕಾರ ರೂ.1,28,506 ಗಳಾಗಿದೆ.

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಿದ ಬಜಾಜ್

ಬಜಾಜ್ ಆಟೋ ಕಂಪನಿಯು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.

Most Read Articles

Kannada
English summary
Bajaj Avenger 160 Street BS6 price increased for the second time in India. Read In Kannada.
Story first published: Monday, July 13, 2020, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X