ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವೆಲ್ ಸಿಟಿ ಬಿಎಸ್-6 ಮಾದರಿಯ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಈ ಹೊಸ ಸಿಟಿ 100 ಬೈಕನ್ನು ಎರಡು ರೂಪಾಂತರಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು.

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಿಎಸ್-6 ಬಜಾಜ್ ಸಿಟಿ 100 ಬೈಕಿನ ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಎಂಬ ಎರಡು ರೂಪಾಂತರಗಳ ಬೆಲೆಯನ್ನು ರೂ.1,996ರವರೆಗೆ ಹೆಚ್ಚಿಸಿದೆ. ಇದೀಗ ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.42,790ಗಳಾದರೆ, ಟಾಪ್ ಸ್ಪೆಕ್ ಸೆಲ್ಫ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.50,470 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಇದು ಎರಡನೇ ಬಾರಿ ಬೆಲೆಯನ್ನು ಏರಿಸಲಾಗಿದೆ. ಹೊಸ ಬಜಾಜ್ ಸಿಟಿ 100 ಬೈಕಿನ ಬೆಲೆಗಳ ಹೆಚ್ಚಳದ ಹೊರತಾಗಿ, ಇದು ಬ್ರ್ಯಾಂಡ್ ನಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಉತ್ತಮ ಮಾದರಿಗಳಲ್ಲಿ ಒಂದಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಇದರಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಬಿಎಸ್-6 ಬಜಾಜ್ ಸಿಟಿ 100 ಬೈಕಿನಲ್ಲಿ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ 102 ಸಿಸಿ ಎಂಜಿನ್ ಅನ್ನು ಹೊಂದಿದೆ.

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.5 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ನವೀಕರಿಸಿದ ಎಂಜಿನ್ ಹೊರತುಪಡಿಸಿ, ಇನ್ನಿತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಬಿಎಸ್-6 ಬಜಾಜ್ ಸಿಟಿ 100 ಬೈಕಿನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.5-ಲೀಟರ್ ಇಂಧನ ಟ್ಯಾಂಕ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್-ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಿಎಸ್-6 ಬಜಾಜ್ ಸಿಟಿ 100 ಬೈಕಿನಲ್ಲಿ ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಸಂಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ ಬ್ರಾಂಡ್‌ನ ‘ಎಸ್‌ಎನ್‌ಎಸ್' ಸಂಸ್ಪೆಕ್ಷನ್ ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಿಎಸ್-6 ಬಜಾಜ್ ಸಿಟಿ 100 ಬೈಕ್ 114 ಕೆಜೆ ತೂಕವಿದೆ. ಇದರಲ್ಲಿ 17 ಇಂಚಿನ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಬೈಕ್ 90 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಬೈಕುಗಳ ಪಟ್ಟಿಯಲ್ಲಿ ಈ ಬೈಕ್ ಆಗ್ರಸ್ಥಾನದಲ್ಲಿದೆ.

ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ಬಜಾಜ್ ಸಿಟಿ 100 ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯ ಬೈಕ್ ಆಗಿದೆ. ಬಿಎಸ್-6 ಬಜಾಜ್ ಸಿಟಿ 100 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ಸ್ಪೋರ್ಟ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Wednesday, June 10, 2020, 19:52 [IST]
English summary
Bajaj CT 100 BS6 Prices Marginally Increased Across Variants. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+