ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕ್
ಬಜಾಜ್ ಆಟೋ ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಎಸ್-6 ಡೋಮಿನಾರ್ 400 ಬೈಕನ್ನು ಬಿಡುಗಡೆಗೊಳಿಸಿತ್ತು. ಬಜಾಜ್ ಕಂಪನಿಯು ಇದೀಗ ಮೂರನೇ ಬಾರಿಗೆ ಈ ಬಿಎಸ್-6 ಡೋಮಿನಾರ್ 400 ಬೈಕಿನ ಬೆಲೆಯನ್ನು ಹೆಚ್ಚಿಸಿದೆ.

ಬಜಾಜ್ ಆಟೋ ಕಂಪನಿಯು ಬಿಎಸ್-6 ಡೋಮಿನಾರ್ 400 ಬೈಕನ್ನು ರೂ.1.91 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ನಂತರ ಒಂದು ತಿಂಗಳ ಬಳಿಕ ಬಜಾಜ್ ಕಂಪನಿಯು ಡೋಮಿನಾರ್ 400 ಬೈಕಿನ ಬೆಲೆಯನ್ನು ಮೊದಲ ಬಾರಿ ರೂ.3,000 ಹೆಚ್ಚಿಸಿದ್ದರು. ನಂತರ ಎರಡನೇ ಬಾರಿ ಈ ಬೈಕಿನ ಬೆಲೆಯನ್ನು ರೂ.1,507 ಗಳವರೆಗೆ ಹೆಚ್ಚಿಸಿದ್ದಾರೆ. ಇದೀಗ ಮತ್ತೆ ಡೋಮಿನಾರ್ 400 ಬೈಕಿನ ಬೆಲೆಯನ್ನು ರೂ.1,500 ಗಳವರೆಗೆ ಹೆಚ್ಚಿಸಿದೆ.

ಬೆಲೆ ಏರಿಲೆಯ ಬಳಿಕ, ಈ ಬಿಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ದೆಹೆಲಿ ಎಕ್ಸ್ ಶೋರೂಂ ಪ್ರಕಾರ ರೂ.1,97,758 ಗಳಾಗಿದೆ. ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಹೆಚ್‍ಸಿ ಎಂಜಿನ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಈ ಎಂಜಿನ್ 8800 ಆರ್‍ಪಿಎಂನಲ್ಲಿ 39.4 ಬಿಹೆಚ್‍ಪಿ ಪವರ್ ಮತ್ತು 7000 ಆರ್‍ಪಿಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅಳವಡಿಸಲಾಗಿದೆ. ಈ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಎಸ್-6 ಬಜಾಜ್ ಡೊಮಿನಾರ್ 400 ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್, ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್, ಸಿಂಗಲ್-ಪೀಸ್ ಹ್ಯಾಂಡಲ್ ಬಾರ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಬಿಎಸ್-6 ಬಜಾಜ್ ಡೊಮಿನಾರ್ 400 ಬೈಕ್ 13-ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಳಿಗಾಗಿ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಮತ್ತು ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸಗಳಾಗಿದೆ.

ಇದರೊಂದಿಗೆ ಬಜಾಜ್ ಕಂಪನಿಯು ಬಿಎಸ್-6 ಡೋಮಿನಾರ್ 250 ಬೈಕಿನ ಬೆಲೆಯನ್ನು ಕೂಡ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯನ್ನು ಎರಡನೇ ಬಾರಿ ರೂ.1,625 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ, ಬಿಎಸ್-6 ಡೋಮಿನಾರ್ 250 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1,65,715 ಗಳಾಗಿದೆ.

ಇನ್ನು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವಾ, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.


Click it and Unblock the Notifications