ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160
ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.04 ಲಕ್ಷಗಳಾಗಿದೆ.

ಹೊಸ ಪಲ್ಸರ್ ಎನ್‍ಎಸ್160 ಬೈಕಿನಲ್ಲಿ ಬಿಎಸ್-6 ಎಂಜಿನ್ ಫ್ಯೂಯಲ್ ಇಂಜೆಕ್ಟಡ್ ಆಗಿರುವುದರಿಂದ ಪವರ್ ಅನ್ನು ಹೆಚ್ಚಿಸಲಾಗಿದೆ. ಹೊಸ ಬಜಾಜ್ ಪಲ್ಸರ್ 160 ಬಿಎಸ್-6, 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ ಹೆಚ್ಚಿನ ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಪಲ್ಸರ್ ಎನ್‍ಎಸ್160 ಎಂಜಿನ್ 9,000 ಆರ್‍ಪಿಎಂನಲ್ಲಿ 17.2 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಪಲ್ಸರ್ ಎನ್‍ಎಸ್ 160 ಬೈಕಿನ ಬಿಎಸ್-4 ಎಂಜಿನ್ 15.2 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗಿಂತ ಹೆಚ್ಚು ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಬೈಕಿನ ಎಂಜಿನ್ 6500 ಆರ್‍ಪಿಎಂನಲ್ಲಿ 14.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾರ್ಕ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನಲ್ಲಿ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೈಕ್ 2017 ಎಂಎಂ ಉದ್ದ, 804 ಎಂಎಂ ಅಗಲ, 1060 ಎಂಎಂ ಎತ್ತರ ಮತ್ತು 1372 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ. ಎಂಜಿನ್‍ನಲ್ಲಿ ಮಾತ್ರ ಬದಲಾವಣೆಯನ್ನು ಹೊರತುಪಡಿಸಿ ಇನ್ನು ಯಾವುದೇ ಬದಲಾವಣೆಗಳಿಲ್ಲ.

ಪಲ್ಸರ್ ಎನ್‍ಎಸ್160 ಬೈಕಿನ ವಿನ್ಯಾಸವು ಪಲ್ಸರ್ ಎನ್‍ಎಸ್200 ಬೈಕಿನ ಮಾದರಿಯಂತಿದೆ. ಹೊಸ ಪಲ್ಸರ್ ಎನ್‍ಎಸ್160 ಬೈಕ್ ಅಗ್ರೆಸಿವ್ ಲುಕ್ ನೊಂದಿಗೆ ಈ ಬೈಕಿನ ವಿನ್ಯಾಸವು ಆಕರ್ಷಕವಾಗಿದೆ.

ಹೊಸ ಪಲ್ಸರ್ ಎನ್‍ಎಸ್160 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಷನ್ ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂನಲ್ಲಿ 260 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಡಂರ್ಡ್ ಆಗಿ ಅಳವಡಿಸಲಾಗಿದೆ.

ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕ್ ಪೋಸಿಲ್ ಗ್ರೇ, ವೈಲ್ಡ್ ರೆಡ್ ಮತ್ತು ಸ್ಯಾಫೈರ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಪಲ್ಸರ್ ಬೈಕ್‍ಗಳ ಸರಣಿಯ ಜನಪ್ರಿಯತೆಯನ್ನು ಮರಳಿ ಪಡೆಯಲು ಬಜಾಜ್ ಆಟೋ ಪ್ರಯತ್ನಿಸುತ್ತಿದೆ.

ಹೊಸ ಪಲ್ಸರ್ ಎನ್‍ಎಸ್ 160 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ 160 ಜಿಕ್ಸರ್, ಯಮಹಾ ಎಫ್‍ಝಡ್ 160 4ವಿ ಮತ್ತು ಹೀರೋ ಎಕ್ಸ್‌ಟ್ರೀಮ್ 160ಆರ್ ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








