ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಮಾದರಿಯಾದ ಪಲ್ಸರ್ ಎನ್‍‍ಎಸ್200 ಬೈಕ್ ಅನ್ನು ಬಿ‍ಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಅಲ್ಲದೆ ಬಜಾಜ್ ಕಂಪನಿಯು ಬಿ‍ಎಸ್-6 ಮಾಲಿನ್ಯ ನಿಯಮಕ್ಕೆ ನಿಯಮಕ್ಕೆ ಅನುಗುಣವಾಗಿ ಪಲ್ಸರ್ ಸರಣಿಯ ಎಲ್ಲಾ ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಹೊಸ ಪಲ್ಸರ್ ಎನ್‍ಎಸ್200 ಬೈಕಿನ ಬೆಲೆಯು ಪುಣೆ ಎಕ್ಸ್ ಶೋರೂಂ ಪ್ರಕಾರ ರೂ.1.24 ಲಕ್ಷಗಳಾಗಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಹೊಸ ಪಲ್ಸರ್ ಎನ್‍ಎಸ್200 ಬೈಕಿಗೆ ರೂ.11,000 ದಷ್ಟು ಹೆಚ್ಚಿಸಲಾಗಿದೆ. ಹೊಸ ಪಲ್ಸರ್ ಎನ್‍ಎನ್200 ಬೈಕಿನ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಬೈಕ್‍‍ಗಾಗಿ ರೂ.1,000 ದಿಂದ ರೂ,5,000ರವರೆಗೆ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಈ ಬುಕ್ಕಿಂಗ್ ದರವು ಡೀಲರ್‍‍ಗಳ ಮೇಲೆ ಅವಲಂಬಿಸಿದೆ. ಹೊಸ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಬಜಾಜ್ ಡೀಲರ್‍‍ಗಳ ಬಳಿ ತಲುಪಿದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಹೊಸ ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಯಾವುದೇ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿಲ್ಲ. ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಬದಲಾವಣೆ ಮಾಡಲಾಗಿಲ್ಲ. ಹೊಸ ಪಲ್ಸರ್ ಎನ್‍ಎಸ್200 ಕಪ್ಪು, ಬಿಳಿ, ಕೆಂಪು ಮತ್ತು ಹಳದಿ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಬಿಎಸ್- 6 ಪಲ್ಸರ್ ಎನ್‍ಎಸ್ 200 ಬೈಕ್ ಫ್ಯೂಯಲ್ ಇಂಜೆಕ್ಷನ್ ನವೀಕರಿಸಲಾಗಿದೆ. ಕೊಲಂಬಿಯದಲ್ಲಿ ಮಾರಾಟವಾಗುತ್ತಿರುವ ಪಲ್ಸರ್ ಎನ್‍ಎಸ್ 200 ಬೈಕ್ ಆವೃತ್ತಿಯು ಎಂಜಿನ್ 24.5 ಬಿ‍ಹೆಚ್‍‍ಪಿ ಪವರ್ ಮತ್ತು 18.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಿರುವ ಬಿಎಸ್-6 ಪಲ್ಸರ್ ಎನ್‍ಎಸ್‍200‍ ಬೈಕಿನಲ್ಲಿ 99.5 ಸಿಸಿ, ನಾಲ್ಕು-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 24.2 ಬಿಹೆಚ್‌ಪಿ ಪವರ್ ಮತ್ತು 18.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಇನ್ನೂ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪಲ್ಸರ್ ಎನ್ಎಸ್ 200 ಬೈಕ್ 23.5 ಬಿ‍‍ಹೆಚ್‍ಪಿ ಪವರ್ ಮತ್ತು 18.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಹೊಸ ಪಲ್ಸರ್ ಎನ್‍ಎಸ್ ಬೈಕಿನಲ್ಲಿ ಟಿಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಗ್ಯಾಸ್ ಚಾರ್ಜ್ಡ್ ಮೊನೊಶಾಕ್‍‍‍ನೊಂದಿಗೆ ಅದೇ ಟ್ವಿನ್-ಸ್ಪಾರ್ ಪೆರಿಮೆಟರ್ ಫ್ರೇಮ್ ಅನ್ನು ಹೊಂದಿದೆ. ಹಿಂದಿನ ಮಾದರಿಯಂತೆ ಬ್ರೇಕಿಂಗ್ ಕೂಡ ಎರಡು ಟಯರ್‍‍ಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಬಿಎಸ್-6 ಪಲ್ಸರ್ ಎನ್ಸ್‍ಎಸ್ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅಪಾಚೆ ಆರ್‌ಟಿಆರ್ 200 4 ವಿ, ಯಮಹಾ ಎಫ್‌ಜೆಡ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಆದರೆ ಹೊಸ ಪಲ್ಸರ್ ಎನ್ಎಸ್ 200 ಬೈಕ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಇರುವುದು ಪಲ್ಸರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

More from DriveSpark

Article Published On: Saturday, April 4, 2020, 10:57 [IST]
English summary
Bajaj Pulsar NS200 BS6 launched. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+