ಹೊಸ ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ವಿತರಣೆಯನ್ನು ಆರಂಭಿಸಿದ ಹೀರೋ ಮೋಟೊಕಾರ್ಪ್
ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಮೆಸ್ತ್ರೋ ಎಡ್ಜ್ 110 ಸ್ಕೂಟರ್ ಅನ್ನು ಡ್ರಮ್ ಬ್ರೇಕ್ ಅಲಾಯ್ ವ್ಹೀಲ್ ವಿಎಕ್ಸ್ ಮತ್ತು ಅಲಾಯ್ ವ್ಹೀಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಹೀರೋ ಮೋಟೊಕಾರ್ಪ್ ಡೀಲರುಗಳು ಹೊಸ ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ವಿತರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಈ ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಬೆಲೆಯ ಬಗ್ಗೆ ಹೇಳುವುದಾದರೆ, ಡ್ರಮ್ ಬ್ರೇಕ್ ಅಲಾಯ್ ವ್ಹೀಲ್ ವಿಎಕ್ಸ್ ರೂಪಾಂತರದ ಬೆಲೆಯು ರೂ.60,950 ಗಳಾದರೆ, ಅಲಾಯ್ ವ್ಹೀಲ್ ರೂಪಾಂತರದ ಬೆಲೆಯು ರೂ.62,450 ಗಳಾಗಿದೆ. ಇನ್ನು ಈ ಹೊಸ ಮೆಸ್ತ್ರೋ ಎಡ್ಜ್ ಸ್ಕೂಟರ್ ಒಟ್ಟಾರೆ ವಿನ್ಯಾಸವನ್ನು ನೋಡಿದರೆ ಹೆಚ್ಚು ಕಡಿಮೆ ಬಿಎಸ್-4 ಮಾದರಿಗೆ ಹೋಲುತ್ತದೆ.

ಆದರೆ ಬಿಎಸ್-6 ಮೆಸ್ಟ್ರೋ ಎಡ್ಜ್ ಸ್ಕೂಟರಿನಲ್ಲಿ ಹೆಚ್ಚು ವರ್ಣರಂಜಿತ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದರಿಂದ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ.

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.75 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಯುನಿಟ್ ಅನ್ನು ಜೋಡಿಸಲಾಗಿದೆ.

ಈ ಹೊಸ ಸ್ಕೂಟರಿನಲ್ಲಿ ಎಕ್ಸ್‌ಸೆನ್ಸ್ ತಂತ್ರಜ್ಞಾನ ಮತ್ತು ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಒಳಗೊಂಡಿರುವುದರಿಂದ ಮೈಲೇಜ್ ಹೆಚ್ಚಾಗಿದೆ ಎಂದು ಹೀರೋ ಕಂಪನಿ ಹೇಳಿಕೊಂಡಿದೆ.
MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಲೈಟ್ ಸ್ಟೋವೇಜ್ ಲೈಟ್ ಹೊಂದಿರುವ ಯುಎಸ್ಬಿ ಪೋರ್ಟ್, ಫ್ಯೂಯಲ್ ಫಿಲ್ಲರ್ ಕ್ಯಾಪ್ ಮತ್ತು ಕಾಂಬಿನೇಶನ್ ಲಾಕ್ ಅನ್ನು ಸಹ ಹೊಂದಿದೆ.

ಇನ್ನು ಈ ಸ್ಕೂಟರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟೇಶನ್ ಕನ್ಸೋಲ್ ಜೊತೆಗೆ ಆನ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ ಸರ್ವಿಸ್ ರಿಮೈಂಡರ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಬಿಎಸ್-6 ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್ ಅನ್ನು ಒಳಗೊಂಡಿದೆ.

ಹೊಸ ಸ್ಕೂಟರಿನಲ್ಲಿ 12 ಇಂಚಿನ ವ್ಹೀಲ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ 10 ಇಂಚಿನ ವ್ಹೀಲ್ ಅನ್ನು ಅಳವಡಿಸಿದೆ. ಇನ್ನು ಈ ಸ್ಕೂಟರಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿಲ್ಲ. ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಿದೆ.

ಬಿಎಸ್-6 ಮೆಸ್ಟ್ರೋ ಎಡ್ಜ್ ಸ್ಕೂಟರ್ 112 ಕೆಜಿ ತೂಕವನ್ನು ಹೊಂದಿದೆ. ಈ ಸ್ಕೂಟರ್ 5 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಮೆಸ್ಟ್ರೋ ಎಡ್ಜ್ 110 ಭಾರತದಲ್ಲಿ ಹೋಂಡಾ ಆಕ್ಟಿವಾ 6ಜಿ ಮತ್ತು ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್


Click it and Unblock the Notifications