ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಮೆಸ್ತ್ರೋ ಎಡ್ಜ್ 110 ಸ್ಕೂಟರ್ ಹೆಸರನ್ನು ಹೀರೋ ಮೋಟೊಕಾರ್ಪ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ.

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಹೊಸ ಮೆಸ್ತ್ರೋ ಎಡ್ಜ್ ಸ್ಕೂಟರ್ ಒಟ್ಟಾರೆ ವಿನ್ಯಾಸವನ್ನು ನೋಡಿದರೆ ಹೆಚ್ಚು ಕಡಿಮೆ ಬಿಎಸ್-4 ಮಾದರಿಗೆ ಹೋಲುತ್ತದೆ. ಆದರೆ ಬಿಎಸ್-6 ಮೆಸ್ಟ್ರೋ ಎಡ್ಜ್ ಸ್ಕೂಟರಿನಲ್ಲಿ ಹೆಚ್ಚು ವರ್ಣರಂಜಿತ ಗ್ರಾಫಿಕ್ಸ್ ಅನ್ನು ಹೊಂದಿದೆ. ಹೊಸ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.75 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಈ ಎಂಜಿನ್ ನೊಂದಿಗೆ ಸಿವಿಟಿ ಯುನಿಟ್ ಅನ್ನು ಜೋಡಿಸಲಾಗಿದೆ. ಈ ಹೊಸ ಸ್ಕೂಟರಿನಲ್ಲಿ ಎಕ್ಸ್‌ಸೆನ್ಸ್ ತಂತ್ರಜ್ಞಾನ ಮತ್ತು ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಒಳಗೊಂಡಿರುವುದರಿಂದ ಮೈಲೇಜ್ ಹೆಚ್ಚಾಗಿದೆ ಎಂದು ಹೀರೋ ಕಂಪನಿ ಹೇಳಿಕೊಂಡಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಲೈಟ್ ಸ್ಟೋವೇಜ್ ಲೈಟ್ ಹೊಂದಿರುವ ಯುಎಸ್ಬಿ ಪೋರ್ಟ್, ಫ್ಯೂಯಲ್ ಫಿಲ್ಲರ್ ಕ್ಯಾಪ್ ಮತ್ತು ಕಾಂಬಿನೇಶನ್ ಲಾಕ್ ಅನ್ನು ಸಹ ಹೊಂದಿದೆ.

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಇನ್ನು ಈ ಸ್ಕೂಟರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟೇಶನ್ ಕನ್ಸೋಲ್ ಜೊತೆಗೆ ಆನ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ ಸರ್ವಿಸ್ ರಿಮೈಂಡರ್ ಫಂಕ್ಷನ್ ಅನ್ನು ಸಹ ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಬಿಎಸ್-6 ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಈ ಹೊಸ ಸ್ಕೂಟರಿನಲ್ಲಿ 12 ಇಂಚಿನ ವ್ಹೀಲ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ 10 ಇಂಚಿನ ವ್ಹೀಲ್ ಅನ್ನು ಅಳವಡಿಸಿದೆ. ಇನ್ನು ಈ ಸ್ಕೂಟರಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿಲ್ಲ. ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಿದೆ.

MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಬಿಎಸ್-6 ಮೆಸ್ಟ್ರೋ ಎಡ್ಜ್ ಸ್ಕೂಟರ್ 112 ಕೆಜಿ ತೂಕವನ್ನು ಹೊಂದಿದೆ. ಈ ಸ್ಕೂಟರ್ 5 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಬಿಎಸ್ 6 ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಮಿಡ್ನೈಟ್ ಬ್ಲೂ, ಸೀಲ್ ಸಿಲ್ವರ್, ಕ್ಯಾಂಡಿ ಬ್ಲೇಜಿಂಗ್ ರೆಡ್, ಪರ್ಲ್ ಫೇಡ್ಲೆಸ್ ವೈಟ್, ಪ್ಯಾಂಥರ್ ಬ್ಲ್ಯಾಕ್ ಮತ್ತು ಟೆಕ್ನೋ ಬ್ಲೂ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ.

ಅನಾವರಣವಾಯ್ತು ಹೊಸ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್

ಬಿಎಸ್ 6 ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಬೆಲೆಯು ಹಿಂದಿನ ಬಿಎಸ್-4 ಮಾದರಿಗಿಂತ ತುಸು ದುಬಾರಿಯಾಗಿಬಹುದು. ಇನ್ನು ಈ ಹೊಸ ಮೆಸ್ಟ್ರೋ ಎಡ್ಜ್ 110 ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಆಕ್ಟಿವಾ 6ಜಿ ಮತ್ತು ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Thursday, September 3, 2020, 18:43 [IST]
English summary
2020 Hero Maestro Edge 110 BS6 Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+