ಬಿಎಸ್-6 ಆಕ್ಟಿವಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಹೋಂಡಾ
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಆಕ್ಟಿವಾ 6ಜಿ ಸ್ಕೂಟರಿನ ಬೆಲೆಯನ್ನು ನಿನ್ನೆ ಹೆಚ್ಚಿಸಿದ್ದರು. ಇವತ್ತು ಹೋಂಡಾ ಮೋಟಾರ್‌ಸೈಕಲ್ ಇನ್ನೊಂದು ಜನಪ್ರಿಯ ಆಕ್ಟಿವಾ 125 ಸ್ಕೂಟರ್ ಬೆಲೆಯನ್ನು ಕೂಡ ಹೆಚ್ಚಿಸಿದ್ದಾರೆ.

ಬಿಎಸ್-6 ಆಕ್ಟಿವಾ 125 ಸ್ಕೂಟರ್ ಅನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರೂ.67,490 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ಇನ್ನು ಬೆಲೆ ಏರಿಕೆಯ ಬಳಿಕ ಬಿಎಸ್-6 ಆಕ್ಟಿವಾ 125 ಸ್ಕೂಟರ್ ಡ್ರಮ್ ರೂಪಾಂತರದ ಬೆಲೆಯು ರೂ.68,997 ಗಳಾಗಿದೆ. ಇನ್ನು ಬಿಎಸ್-6 ಆಕ್ಟಿವಾ 125 ಸ್ಕೂಟರ್ ಡ್ರಮ್ ಅಲಾಯ್ ರೂಪಾಂತರದ ಬೆಲೆಯು ರೂ.72,497 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.75,997 ಗಳಾಗಿದೆ.

ಈ ಸ್ಕೂಟರಿನಲ್ಲಿ 125 ಸಿಸಿಯ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟೆಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.1 ಬಿಹೆಚ್‍ಪಿ ಪವರ್ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಫ್ಯೂಯಲ್ ಎಂಜೆಕ್ಷನ್ ಎಂಜಿನ್ ಸ್ಕೂಟರ್ ಅನ್ನು ಹೆಚ್ಚು ಎಫಿಶಿಯಂಟ್ ಮಾಡುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರಿನಲ್ಲಿ ಪರಿಷ್ಕರಿಸಿದ ಎಲ್‍ಇಡಿ ಹೆಡ್‍ಲ್ಯಾಂಪ್, ಮುಂಭಾಗ ಹಾಗೂ ಸೈಡ್‍ನಲ್ಲಿ ಕ್ರೋಮ್ ಟ್ರಿಮ್ ಹಾಗೂ ಮುಂಭಾಗದಲ್ಲಿ ಹೊಸ ಎಪ್ರಾನ್‍ಗಳನ್ನು ನೀಡಲಾಗಿದೆ.

ಈ ಸ್ಕೂಟರ್ ಅನ್ನು ಮಹಿಳಾ ಹಾಗೂ ಪುರುಷ ಸವಾರರಿಗೆ ಆರಾಮದಾಯಕ ಸವಾರಿಯನ್ನು ನೀಡಲು ಅನುವಾಗುವಂತ ತಯಾರಿಸಲಾಗಿದೆ. ವಿಶ್ವಾಸಾರ್ಹವಾದ ಹಾಗೂ ಹೆಚ್ಚು ಮೈಲೇಜ್ ನೀಡುವ ಈ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ನಗರದ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ತಯಾರಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಈ ಬಿಎಸ್-6 ಆಕ್ಟಿವಾ 125 ಸ್ಕೂಟರ್ ನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರೀಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಆಕ್ಟಿವಾ 125 ಸ್ಕೂಟರ್ ಫ್ರಂಟ್ ಡಿಸ್ಕ್ ಬ್ರೇಕ್ ಆಯ್ಕೆಯಾಗಿ ಲಭ್ಯವಿದೆ. ಇನ್ನು ಈ ಸ್ಕೂಟರ್ ನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್, ಎಸಿಜಿ ಸ್ಟಾರ್ಟರ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ನಂತಹ ಫೀಚರ್ ಗಳನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರ್ ಬೆಲೆಯನ್ನು ಎರಡನೇ ಬಾರಿ ಹೆಚ್ಚಿಸಿದೆ. ಎರಡನೇ ಬಾರಿ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರಿನ ಬೆಲೆಯನ್ನು ರೂ,955 ಗಳವರೆಗೆ ಹೆಚ್ಚಿಸಲಾಗಿದೆ.

ಹೋಂಡಾ ಮೋಟಾರ್‌ಸೈಕಲ್ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಪಟ್ಟಿಯಲ್ಲಿ ಬಿಎಸ್-6 ಆಕ್ಟಿವಾ 125 ಕೂಡ ಒಂದಾಗಿದೆ. ಬಿಎಸ್-6 ಹೋಂಡಾ ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಿಸಿರುವುದು ಮಾರಾಟದ ಮೇಲೆ ಪಾರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.


Click it and Unblock the Notifications








