ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹಲವು ಜನಪ್ರಿಯ ಬಿಎಸ್-6 ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಇದೀಗ ಹೋಂಡಾ ಕಂಪನಿಯು ಜನಪ್ರಿಯ ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಇದೀಗ ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್ ದುಬಾರಿಯಾಗಿದೆ. ಕಳೆದ ಬಾರಿ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್ ಬೆಲೆಯನ್ನು ರೂ.552 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಎರಡನೇ ಬಾರಿ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್ ಎರಡು ರೂಪಾಂತರಗಳ ಬೆಲೆಯನ್ನು ರೂ.955 ಗಳವರೆಗೆ ಹೆಚ್ಚಿಸಿದೆ. ಇದೀಗ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.61,497 ಗಳಾದರೆ ಡಿಎಲ್ಎಕ್ಸ್ ರೂಪಾಂತರದ ಬೆಲೆಯು ರೂ.64,847 ಗಳಾಗಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಡಿಯೋ ಸ್ಕೂಟರ್ ಅನ್ನು 2002ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಡಿಯೋ ಸ್ಕೂಟರ್‍ ಇಲ್ಲಿಯವರೆಗೆ 33 ಲಕ್ಷ ಗ್ರಾಹಕರನ್ನು ಹೊಂದಿದೆ. ಹೋಂಡಾ ಡಿಯೋ ಭಾರತದಿಂದ ಅತಿ ಹೆಚ್ಚು ರಫ್ತು ಮಾಡುವ ಸ್ಕೂಟರ್ ಆಗಿದೆ. ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್‍‍ಗಳಲ್ಲಿ ಡಿಯೋ ಕೂಡ ಒಂದಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಬಿಎಸ್-6 ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ರೇಂಜ್, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ವಿವರದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಅನ್ನು ಕೂಡ ಪ್ರದರ್ಶಿಸುತ್ತದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

2020ರ ಹೋಂಡಾ ಡಿಯೋ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಡಿಯೋ ಸ್ಕೂಟರ್ ಮುಂಭಾಗ ಆಕ್ಟಿವಾ 6ಜಿ ಸ್ಕೂಟರ್‍‍ನಂತೆ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಮತ್ತು ಡಿ‍ಆರ್‍ಎಲ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಹೊಸ ಡಿಯೋ ಅಗ್ರೆಸಿವ್ ವಿನ್ಯಾಸವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಹೋಂಡಾ ಆಕ್ಟಿವಾ 6ಜಿಯಂತೆಯೇ ಹೋಂಡಾ ಡಿಯೊ ಕೂಡ ಅದೇ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಹೊಸ ಡಿಯೋ ಸ್ಕೂಟರ್‍‍ನಲ್ಲಿ ಸ್ಟ್ಯಾಂಡರ್ಡ್ ರೂಪಾಂತರವು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಕ್ಯಾಂಡಿ ಝಾಸಿ ಬ್ಲೂ, ಸ್ಪೋರ್ಟ್ ರೆಡ್ ಮತ್ತು ವೈಬ್ರಂಟ್ ಆರೆಂಜ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಇನ್ನು ಬಿ‍ಎಸ್-6 ಹೋಂಡಾ ಡಿಯೋ ಡಿಲಕ್ಸ್ ರೂಪಾಂತರವು ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಡ್ಯಾಜ್ಲ್ ಎಲ್ಲೊ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಹೊಸ ಡಿಯೋ ಸ್ಕೂಟರ್‍‍ನ 110 ಸಿಸಿ ಎಂಜಿನ್ 7.9 ಬಿ‍‍ಹೆಚ್‍‍ಪಿ ಪವರ್ ಮತ್ತು 8.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹಿಂದಿನ ಹೋಂಡಾ ಡಿಯೋ ಬಿಎಸ್-4 ಮಾದರಿಯು 8 ಬಿ‍‍ಹೆಚ್‍‍ಪಿ ಪವರ್ ಮತ್ತು 9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಹೋಂಡಾ ಡಿಯೋ ಸ್ಕೂಟರ್

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದಾಗ ಎಂಜಿನ್‍‍ನ ದಕ್ಷತೆಯ ಅಂಕಿ ಅಂಶಗಳಲ್ಲಿ ತುಸು ಕಡಿಮೆಯಾಗಿದೆ. ಹೋಂಡಾ ಡಿಯೋ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ರೇ-ಝಡ್ ಮತ್ತು ಹೀರೋ ಮೆಸ್ಟ್ರೋ ಎಡ್ಜ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Honda Dio BS6 Price Increased For The Second Time In India. Read In Kannada.
Story first published: Monday, August 17, 2020, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X