ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ 6ಜಿ ಬಿಎಸ್-6 ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿಯು ಹೋಂಡಾ ಡಿಯೋ ಬಿ‍ಎಸ್-6 ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಇದರ ಭಾಗವಾಗಿ ಕಂಪನಿಯು ಹೋಂಡಾ ಡಿಯೊ ಸ್ಕೂಟರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೋಂಡಾ ಡಿಯೊ ಕೂಡ ಒಂದು ಮಟ್ಟಿಗೆ ಜನಪ್ರಿಯ ಆಕ್ಟಿವಾ ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಬಿಎಸ್-6 ಹೋಂಡಾ ಡಿಯೊ ಸ್ಕೂಟರಿನ ಟೀಸರ್ ವೀಡಿಯೋ ಆಕರ್ಷಕವಾಗಿದೆ. ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೋಂಡಾ ಕಂಪನಿಯು ಈ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

2020ರ ಹೋಂಡಾ ಡಿಯೊ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಡಿಯೊ ಮುಂಭಾಗ ನವೀಕರಿಸಿದ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಮತ್ತು ಡಿ‍ಆರ್‍ಎಲ್ ಅನ್ನು ಅಳವಡಿಸಲಾಗಿದೆ. ಈ ಡಿಯೊ ಅಗ್ರೆಸಿವ್ ವಿನ್ಯಾಸವನ್ನು ಹೊಂದಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಒಟ್ಟಾರೆ ಇದರ ಥೀಮ್ ಮೂಲ ಮಾದರಿಯಂತಿದೆ. ಹೊಸ ಗ್ರಾಫಿಕ್ಸ್ ಮಾದರಿಗಳು ಮತ್ತು ಹೊಸ ಬಣ್ಣಗಳನ್ನು ಹೊಂದಿರಲಿದೆ. ಹೋಂಡಾ ಆಕ್ಟಿವಾ 6ಜಿಯಂತೆಯೇ ಹೋಂಡಾ ಡಿಯೊ ಕೂಡ ಅದೇ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಡಿಯೊ ಸ್ಕೂಟರ್‍‍ನಲ್ಲಿ 109.51 ಸಿಸಿ ಎಂಜಿನ್ 7.6 ಬಿ‍‍ಹೆಚ್‍‍ಪಿ ಪವರ್ ಮತ್ತು 8.79 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಡಿಯೊ ಬಿಎಸ್-4 ಮಾದರಿಯು 8 ಬಿ‍‍ಹೆಚ್‍‍ಪಿ ಪವರ್ ಮತ್ತು 9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಾಗ ಎಂಜಿನ್‍‍ನ ದಕ್ಷತೆಯ ಅಂಕಿ ಅಂಶಗಳು ಕೂಡ ಕಡಿಮೆಯಾಗಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಡಿಯೊ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಈ ಎರಡು ರೂಪಾಂತರಗಳಿಗೆ ಪ್ರಸ್ತುತ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.53,000 ದಿಂದ 60,000 ಸಾವಿರಗಳಾಗಿದೆ. ಹೊಸ ಬಿಎಸ್-6 ಹೋಂಡಾ ಡಿಯೊ ಸ್ಕೂಟರ್‍‍‍ನ ಬೆಲೆ ರೂ.5,000 ಗಳಷ್ಟು ಹೆಚ್ಚಾಗಬಹುದು.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಇನ್ನೂ ಇತ್ತೀಚೆಗೆ ಬಿಡುಗಡೆಗೊಳಿಸಿದ ಆಕ್ಟಿವಾ 6ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಬೆಲೆಯು ರೂ.63,912ಕ್ಕೆ(ಸ್ಟ್ಯಾಂಡರ್ಡ್) ಮತ್ತು ಟಾಪ್ ವೆರಿಯೆಂಟ್ ಡಿಲಕ್ಸ್ ಬೆಲೆಯು ರೂ.65,412ಗಳಾಗಿದೆ. ಮುಂದಿನ ದಿನಗಳಲ್ಲಿ ಹೋಂಡಾ ಡಿಯೊ ಸ್ಕೂಟರ್‍‍ನ ಹೆಚ್ಚಿನ ಮಾಹಿತಿ ಬಹಿರಂಗವಾಗಬಹುದು. ಹೊಸ ಡಿಯೋ ಸ್ಕೂಟರ್‍‍ನ ಬಾಡಿಯಲ್ಲಿ ಫಾಕ್ಸ್ ಕರ್ಬಾನ್ ಫೈಬರ್ ಅನ್ನು ಬಳಕೆ ಮಾಡಲಾಗಿದೆ. ಈ ಸ್ಕೂಟರ್‍‍ನ ಬಾಡಿಯು ಎನ್‍‍ಟಾರ್ಕ್ 125 ಮಾದರಿಯಂತಿದೆ.

ಬಿಎಸ್-6 ಹೋಂಡಾ ಡಿಯೊ ಟೀಸರ್ ಬಿಡುಗಡೆ

ಟೀಸರ್ ವೀಡಿಯೋದಲ್ಲಿ ಡಿಎಕ್ಸ್ ರೂಪಾಂತರದ ಸ್ಕೂಟರ್ ಅನ್ನು ತೋರಿಸಲಾಗಿದೆ. ಲೋ ಸ್ಪೆಕ್‍ ಎಲ್‍ಇಡಿ ಮತ್ತು ಡಿಸ್ಕ್ ಬ್ರೇಕ್ ಅನ್ನು ಹೊಂದಿರುವ ಸಾಧ್ಯತೆಗಳಿಲ್ಲ. ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಕೂಡ ಇದೇ ರೀತಿ ಮಾಡಿದ್ದರು. ಹೋಂಡಾ ಡಿಯೊ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಮಹಾ ರೇ-ಝಡ್ ಮತ್ತು ಹೀರೋ ಮೆಸ್ಟ್ರೋ ಎಡ್ಜ್ ಸ್ಖೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Honda Dio BS6 scooter teased – Gets Activa 6G BS6 engine. Read in Kannada.
Story first published: Tuesday, February 4, 2020, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X