ಲಾಕ್‌ಡೌನ್ ವಿನಾಯ್ತಿ ನಂತರ ಚಾಲನೆ ಪಡೆದುಕೊಂಡ ಬಿಎಸ್-6 ಜಾವಾ ಬೈಕ್ ವಿತರಣೆ

ಏಪ್ರಿಲ್ 1ರಿಂದಲೇ ದೇಶಾದ್ಯಂತ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ಪ್ರಕಾರ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಬೈಕ್ ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಕಳೆದ ಮಾರ್ಚ್ ತಿಂಗಳಿನಲ್ಲೇ ಬಿಡುಗಡೆಗೊಳಿಸಿದ್ದು, ಲಾಕ್‌ಡೌನ್ ಹಿನ್ನಲೆಯಲ್ಲಿ ಹೊಸ ಬೈಕ್ ವಿತರಣೆಗೆ ಇದೀಗ ಚಾಲನೆ ನೀಡಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 2018ರಲ್ಲಿ ಜಾವಾ ಬೈಕ್‌ಗಳನ್ನು ಹೊಸ ವಿನ್ಯಾಸದೊಂದಿಗೆ ಭಾರತದಲ್ಲಿ ಮರುಮಾರಾಟವನ್ನು ಆರಂಭಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಜಾವಾ ಕ್ಲಾಸಿಕ್, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಹಿಂದೆ ಬಿಎಸ್-4 ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಹೊಸ ಬೈಕ್‌ಗಳು ಇದೀಗ ಬಿಎಸ್-6 ಎಮಿಷನ್ ಪ್ರಕಾರ ಉನ್ನತೀಕರಣ ಪಡೆದುಕೊಂಡಿವೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಬಿಎಸ್-6 ಎಂಜಿನ್ ಜೋಡಣೆ ನಂತರ ಜಾವಾ ಕ್ಲಾಸಿಕ್ ಮತ್ತು ಜಾವಾ 42 ಬೈಕ್ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಹೊಸ ಎಂಜಿನ್ ಜೋಡಣೆ ನಂತರ ಬೈಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಜಾವಾ ಕ್ಲಾಸಿಕ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.73 ಲಕ್ಷ ಬೆಲೆ ಹೊಂದಿದ್ದಲ್ಲಿ, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ.1.82 ಲಕ್ಷ ಬೆಲೆ ಪಡೆದುಕೊಂಡಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಹಾಗೆಯೇ ಜಾವಾ 42 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.60 ಲಕ್ಷ ಬೆಲೆ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ. 1.69 ಲಕ್ಷ ಬೆಲೆ ಪಡೆದುಕೊಂಡಿದೆ. ಈ ಮೂಲಕ ಹೊಸ ಬೈಕ್‌ಗಳ ಬೆಲೆಗೂ ಮತ್ತು ಹಳೆಯ ಆವೃತ್ತಿಯ ಬೈಕ್ ಬೆಲೆಗೂ ಎಕ್ಸ್‌ಶೋರೂಂ ದರದಲ್ಲಿ ರೂ.5 ಸಾವಿರದಿಂದ ರೂ.9,928 ಹೆಚ್ಚಳವಾಗಿದ್ದು, ಆನ್-ರೋಡ್ ದರಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಿರುತ್ತದೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಬಿಎಸ್-6 ಎಂಜಿನ್ ವೈಶಿಷ್ಟ್ಯತೆ

ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳು ಈ ಹಿಂದಿನಂತೆಯೇ 293-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, ಲಿಕ್ವಿಡ್ ಕೂಲ್ಡ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಫೀಚರ್ಸ್ ಪಡೆದುಕೊಂಡಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಫ್ಯೂಲ್ ಇಂಜೆಕ್ಷನ್ ಯುನಿಟ್ ಬಳಕೆಯಿಂದಾಗಿ ಬೈಕ್ ಚಾಲನೆ ವೇಳೆ ಸ್ಮೂತ್ ಪರ್ಫಾಮೆನ್ಸ್ ನೀಡುವುದರ ಜೊತೆಗೆ ಮಾಲಿನ್ಯ ಹೊರಸೂವಿಕೆ ಪ್ರಮಾಣದಲ್ಲಿ ಸಾಕಷ್ಟು ಕಡಿತಗೊಂಡಿದೆ. ಇದು ಹೊಸ ಬೈಕಿನ ಪ್ರಮುಖ ಬದಲಾವಣೆಯಾಗಿದ್ದು, ಇನ್ನುಳಿದಂತೆ ಬಹುತೇಕ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಂತೆಯೇ ಮುಂದುವರಿಸಲಾಗಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಗ್ರಾಹಕರ ವಿತರಣೆಗೆ ಸಿದ್ದವಾಗಿರುವ ಹೊಸ ಬೈಕ್‌ಗಳ ವಿನ್ಯಾಸದ ಕುರಿತಾಗಿ ವಿಡಿಯೋ ಒಂದು ಈಗಾಗಲೇ ಬೈಕ್ ವಿನ್ಯಾಸ ಕುರಿತಾಗಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದು, ಕೆಲವು ಹೊಸ ಬೈಕ್‌ಗಳ ಎಕ್ಸಾಸ್ಟ್ ವಿನ್ಯಾಸದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಿಎಸ್-6 ಜಾವಾ ಬೈಕ್ ವಿತರಣೆ ಶುರು

ಎಕ್ಸಾಸ್ಟ್‌ನಲ್ಲಿ ಬಿಎಸ್-6 ಎಮಿಷನ್ ಪ್ರಕಾರ ಡಬಲ್ ಏರ್ ಫಿಲ್ಟರ್ ಜೋಡಣೆ ಮಾಡಿರುವ ಹಿನ್ನಲೆಯಲ್ಲಿ ಎಕ್ಸಾಸ್ಟ್ ವಿನ್ಯಾಸವು ತುಸು ಒರಟಾಗಿ ಕಾಣುತ್ತಿರುವುದೇ ಕೆಲವು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಅದು ಡ್ಯುಯಲ್ ಫಿಲ್ಟರ್ ಅಳವಡಿಕೆಯ ಪರಿಣಾಮ ಹೊರಭಾಗದಲ್ಲಿ ನೋಡಲು ತುಸು ಒರಟಾಗಿರುವಂತೆ ಭಾಸವಾಗುತ್ತದೆ.

Most Read Articles

Kannada
English summary
BS6 Jawa Motorcycles Deliveries Start. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X