ಡೀಲರ್ ಬಳಿ ತಲುಪಿದ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್
ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಿಎಸ್-6 ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಸ್-6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.8.84 ಲಕ್ಷಗಳಾಗಿದೆ.

ಹೊಸ ಬಿಎಸ್ -6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿಗಾಗಿ ದೇಶಾದ್ಯಂತ ಸುಜುಕಿ ಅಧಿಕೃತ ಡೀಲರುಗಳು ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಪೀಚರ್ ಗಳನ್ನು ನವೀಕರಿಸಲಾಗಿಲ್ಲ, ಎಂಜಿನ್ ಅನ್ನು ಮಾತ್ರ ನವೀಕರಿಸಲಾಗಿದೆ. ಬಿಎಸ್ 4 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾದರಿಯ ಬೆಲೆಯನ್ನು ಬಿಎಸ್-6 ಮಾದರಿಗೆ ಹೋಲಿಸಿದರೆ ರೂ.1.4 ಲಕ್ಷ ಹೆಚ್ಚಾಗಿದೆ.

ಇನ್ನು ಹೊಸ ಬಿಎಸ್ -6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಈ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಡೀಲರ್ ಬಳಿ ತಲುಪಿರುವ ಚಿತ್ರಗಳು ಬಹಿರಂಗವಾಗಿವೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಎಸ್-6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಚಾಂಪಿಯನ್ ಯೆಲ್ಲೋ ಮತ್ತು ಪರ್ಲ್ ಗ್ಲೇಸಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಫೆಬ್ರವರಿ ತಿಂಗಳಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಈ ಬಿಎಸ್ 6 ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಸುಜುಕಿ ಪ್ರದರ್ಶಿಸಿದ್ದರು.

ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬಿಎಸ್-4 ಮಾದರಿಯ ಅದೇ 645 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,800 ಆರ್‌ಪಿಎಂನಲ್ಲಿ 69.7 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 62 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ.

ಈ ಅಡ್ವೆಂಚರ್-ಟೂರಿಂಗ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 310 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಅಗಿ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಯಾವುದೇ ಹೊಸ ವಿನ್ಯಾಸ ಬದಲಾವಣೆಗಳನ್ನು ಹೊಂದಿಲ್ಲ. ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ.

ಇದರೊಂದಿಗೆ ಈ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್‌ಗಳು, ಎಂಜಿನ್ ಪ್ರೊಟೆಕ್ಟರ್ ಸ್ಪೋಕ್ ವ್ಹೀಲ್ಸ್ ಮತ್ತು ಮೆತ್ತನೆಯ ಸಿಂಗಲ್-ಪೀಸ್ ಸೀಟ್ ಅನ್ನು ಕೂಡ ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಅಡ್ವೆಂಚರ್-ಟೂರಿಂಗ್ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದರಲ್ಲಿ ಗೇರ್ ಪೋಷಿಸನ್,ಟ್ಯಾಕೋಮೀಟರ್ ಮತ್ತು ಡಿಜಿಟಲ್ ರೀಡ್ ಔಟ್ ಗಳನ್ನು ಒಳಗೊಂಡಿದೆ.

ಕೆಳಗಿನ ಡಿಜಿಟಲ್ ವಿಭಾಗವು ಓಡೋಮೀಟರ್, ಟ್ವಿನ್-ಟ್ರಿಪ್ ಮೀಟರ್, ಕಾಲ್, ಫ್ಯೂಯಲ್ ಲೆವೆಲ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಮೋಡ್ ಗಳನ್ನು ಪ್ರದರ್ಶಿಸುತ್ತದೆ. ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾದರಿಯು ಸುಜುಕಿ ಮೋಟಾರ್‌ಸೈಕಲ್ ಸರಣಿಯಲ್ಲಿ ಅತ್ಯುತ್ತಮ ಅಡ್ವೆಂಚರ್ ಬೈಕುಗಳಲ್ಲಿ ಒಂದಾಗಿದೆ.

ಸುಜುಕಿ ಕಂಪನಿಯು ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕನ್ನು ಸಿಕಿಡಿ ಮೂಲಕ ಭಾರತಕ್ಕೆ ತರಲಾಗುತ್ತದೆ. ಈ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650 ಬೈಕಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








